ಉತ್ತಮ ಸಮಾಜಕ್ಕಾಗಿ

ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ್ ಪ್ರೈ.ಲಿ.ಕಾರ್ಖಾನೆಗೆ “ಒನ್ ಸ್ಟಾರ್ ರಫ್ತುದಾರ ಪ್ರಶಸ್ತಿ”

0

ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ್ ಪ್ರೈ.ಲಿ.ಕಾರ್ಖಾನೆಗೆ "ಒನ್ ಸ್ಟಾರ್ ರಫ್ತುದಾರ ಪ್ರಶಸ್ತಿ"- Tarun krantiಬೆಳಗಾವಿ:  belgaumnews  ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ್ ಪ್ರೈ.ಲಿ.ಕಾರ್ಖಾನೆಗೆ “ಒನ್ ಸ್ಟಾರ್ ರಫ್ತುದಾರ ಪ್ರಶಸ್ತಿ” ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಿದೇಶಿ ವ್ಯಾಪಾರ ನಿರ್ದೇಶನಾಲಯದ ವತಿಯಿಂದ ನೀಡಲಾಗುವ ಅತ್ಯುತ್ತಮ ರಫ್ತುದಾರ ಪ್ರಶಸ್ತಿಗೆ ಬೆಳಗಾವಿಯ “ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ್ ಪ್ರೈ. ಲಿ.” ಕಾರ್ಖಾನೆಯು ಆಯ್ಕೆಯಾಗಿದ್ದು, ಸನ್ 2016-17ನೇ ಆರ್ಥಿಕ ಸಾಲಿನ ಪ್ರತಿಷ್ಠಿತ “ಒನ್ ಸ್ಟಾರ್ ಎಕ್ಸ್ಪೋರ್ಟ್ ಹೌಸ ಪ್ರಶಸ್ತಿ” ಯನ್ನು ಪಡೆದುಕೊಂಡಿದೆ. ಈ ಕಾರ್ಖಾನೆಯು ಕಳೆದ 13 ವರ್ಷಗಳಿಂದ ನಿರಂತರವಾಗಿ ರಫ್ತು ಮಾರಾಟದಲ್ಲಿ ತೊಡಗಿದ್ದು, ಅತ್ಯಂತ ಉನ್ನತ ಗುಣಮಟ್ಟದ ಮಿಶ್ರಲೋಹದ ಸ್ಟೀಲ್‍ದಿಂದ ಸೆಂಟರ್‍ಲೆಸ್ ಗ್ರೌಂಡ್ ಬಾರ್‍ಗಳನ್ನು ತಯಾರಿಸಿ ಯುರೋಪಿಯನ್ ದೇಶಗಳಾದ, ಸ್ವಿಟ್‍ಜಲ್ರ್ಯಾಂಡ ಮತ್ತು ಜರ್ಮನಿಗಳಿಗೆ ನಿರಂತರ ಮತ್ತು ಸಕಾಲದಲ್ಲಿ ರಫ್ತು ಮಾರಾಟ ಮಾಡುವುದರ ಮೂಲಕ ನಮ್ಮ ದೇಶದ ರಫ್ತು ಮಾರಾಟದ ವಹಿವಾಟನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇತ್ತಿಚಿಗೆ ವಿದೇಶಿ ವ್ಯಾಪಾರ ನಿರ್ದೇಶನಾಲಯ ಕಚೇರಿಯ ಬೆಳಗಾವಿ ವಿಭಾಗದ ವಿದೇಶಿ ವ್ಯಾಪಾರ ಅಭಿವೃದ್ಧಿ ಅಧಿಕಾರಿ ಪಿ.ಬಿ.ಎಸ್.ಶಾಸ್ತ್ರೀ ಅವರು ಜಿನಾ ಸ್ಪೇಷಲ ಸ್ಟೀಲ್ ವಕ್ರ್ಸ್‍ಪ್ರೈ. ಲಿ. ಕಾರ್ಖಾನೆಯ ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಶ್ರೀ ಶರದ ಬಿ.ಬಾಳಿಕಾಯಿ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಜಿನಾ ಸ್ಪೇಷಲ್ ಸ್ಟೀಲ್ ವಕ್ರ್ಸ್‍ಪ್ರೈ. ಲಿ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೋಪಾಲ ದೇವೇಂದ್ರ ಜಿನಗೌಡಾ ಅವರು ಈ ಪ್ರಶಸ್ತಿಗೆ ಕಾರಣರಾದ ತಮ್ಮ ಕಾರ್ಖಾನೆಯ ಎಲ್ಲ ಕಾರ್ಮಿಕ ಹಾಗೂ ಸಿಬ್ಬಂದಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

tarunkranti  Jina Special Steel Wakers Pvt Ltd. “One Star Exporter Award” /for more in Belgaum click – today news in kannada

Leave A Reply

 Click this button or press Ctrl+G to toggle between Kannada and English

Your email address will not be published.