ಉತ್ತಮ ಸಮಾಜಕ್ಕಾಗಿ

ಕೆ-ಟೆಕ್ ಇನೋವೇಷನ್ ಹಬ್ ಉದ್ಘಾಟನೆ ರಾಜ್ಯಾದ್ಯಂತ ಐದು ಕೆಟಿಐ ಕೇಂದ್ರ ಸ್ಥಾಪನೆ: ಸಚಿವ ಜಾರ್ಜ್

K-Tech Innovation Hub Inaugurated Five KTI Center Establishment: Minister George

0

ಬೆಳಗಾವಿ: (news belagaviಜಾಗತಿಕ ಸಂಪರ್ಕ ಹೊಂದಿರುವ ವ್ಯವಸ್ಥೆಯನ್ನು ಆಧರಿಸಿದ ಕೆ-ಟೆಕ್ ಇನ್ನೋವೇಷನ್ ಹಬ್ ಬೆಳಗಾವಿಗೆ ಎಂಐಟಿ ಫ್ಯಾಬ್ ಲ್ಯಾಬ್‍ನಂತಹ ಮೂಲ ಸೌಕರ್ಯವನ್ನು ತರುತ್ತಿದೆ. ರಾಜ್ಯಾದ್ಯಂತ ಐದು ಕೆಟಿಐ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಬೃಹತ್ ಮತ್ತು ಮಧ್ಯಮ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ಕೆ.ಜೆ. ಜಾರ್ಜ್ ಅವರು ತಿಳಿಸಿದರು.

ಕೆ-ಟೆಕ್ ಇನೋವೇಷನ್ ಹಬ್ ಉದ್ಘಾಟನೆ ರಾಜ್ಯಾದ್ಯಂತ ಐದು ಕೆಟಿಐ ಕೇಂದ್ರ  ಸ್ಥಾಪನೆ: ಸಚಿವ ಜಾರ್ಜ್- Tarun kranti 1

ಇಲ್ಲಿನ ಹನುಮಾನ ನಗರದಲ್ಲಿ  ನೂತನವಾಗಿ ನಿರ್ಮಿಸಿರುವ ಕೆ-ಟೆಕ್ ಇನೋವೇಷನ್ ಹಬ್‍ನ್ನು ಉದ್ಘಾಟಿಸಿ, ನಂತರ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆ-ಟೆಕ್ ಇನೋವೇಷನ್ ಹಬ್ ಉದ್ಘಾಟನೆ ರಾಜ್ಯಾದ್ಯಂತ ಐದು ಕೆಟಿಐ ಕೇಂದ್ರ  ಸ್ಥಾಪನೆ: ಸಚಿವ ಜಾರ್ಜ್- Tarun kranti
ಕೆ-ಟೆಕ್ ಇನೋವೇಷನ್ ಹಬ್ 8 ಸಾವಿರ ಚದರ ಅಡಿ ಕಟ್ಟಡದಲ್ಲಿ ಪ್ರೊಡಕ್ಟ್ ಸ್ಟಾಟ್ ಅಪ್ ಇನ್ಕುಬೇಟರ್ ಕಮ್ ಕಾಮನ್ ಇನ್ಸ್ಟ್ರುಮೆಂಟೇಷನ್ ಫೆಸಿಲಿಟಿ ಲಭ್ಯವಿದೆ. ನೂತನ ಕೆ-ಟೆಕ್ ಇನ್ನೋವೇಷನ್ ಹಬ್ ವಿಶ್ವಮಟ್ಟದ ನವೀನತಾ ವ್ಯವಸ್ಥೆಯನ್ನು ಬೆಳಗಾವಿಗೆ ತರುತ್ತಿದೆ. ಬೆಳಗಾವಿ ಮಾದರಿಯಲ್ಲಿಯೇ ಬೆಂಗಳೂರು, ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕೆ-ಟಿಐ ಕೇಂದ್ರಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಹೇಳಿದರು.

2025ಕ್ಕೆ 6 ಸಾವಿರ ಉತ್ಪನ್ನ ಆಧಾರಿತ ಉದ್ಯಮ:
ರಾಜ್ಯದಲ್ಲಿ 5 ಕೆ-ಟಿಐ ಕೇಂದ್ರಗಳ ಸ್ಥಾಪನೆಯಿಂದ 2025ರ ವೇಳೆಗೆ 6,000 ಉತ್ಪನ್ನ ಆಧಾರಿತ ಉದ್ಯಮಗಳ ಉತ್ತೇಜನ ಸಾಧ್ಯವಾಗಲಿದೆ. ಮುಂದಿನ 5 ವರ್ಷಗಳಲ್ಲಿ ಬೆಳಗಾವಿಯನ್ನು ತಂತ್ರಜ್ಞಾನದ ಸೂಪರ್ ಕೇಂದ್ರವಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಒಂದೇ ಸ್ಥಳದಲ್ಲಿ ವಿವಿಧ ಸೌಲಭ್ಯ:
ಸ್ಥಳಾವಕಾಶ ಮತ್ತು ಮೂಲ ಸೌಕರ್ಯ, ಉಪಕರಣ ವ್ಯವಸ್ಥೆ, ಮಾದರಿಗಳ ತಯಾರಿಕಾ ಸೌಲಭ್ಯಗಳು, ಉದ್ಯಮ ವ್ಯವಸ್ಥೆ ಬೆಂಬಲ ಮತ್ತು ವಿಶ್ವಮಟ್ಟದ ನವೀನತಾ ಜಾಲ ಮುಂತಾದವುಗಳನ್ನು ಒಂದೇ ಸ್ಥಳದಲ್ಲಿ ಕೆ-ಟೆಕ್ ಇನ್ನೋವೇಷನ್ ಹಬ್ ಪೂರೈಸಲಿದೆ ಎಂದರು.
ಕೆ-ಟೆಕ್ ಇನೋವೇಶನ್ ಹಬ್ ಆರ್, ಡಿ ಮತ್ತು ಪ್ರೊಟೊಟೈಪಿಂಗ್ ಲ್ಯಾಬ್‍ಗೆ ಪ್ರವೇಶ ಅಗತ್ಯವಿರುವ ತಂತ್ರಜ್ಞಾನ ಆಧಾರಿತ ಹಾಗೂ ಉತ್ಪನ್ನ ಆಧಾರಿತ ಉದ್ಯಮಗಳನ್ನು ಉತ್ತೇಜಿಸುತ್ತದೆ. ವಿನ್ಯಾಸದ ಸಹಾಯಕ್ಕಾಗಿ ವಿಶೇಷ ಸಿಬ್ಬಂದಿ, ಕಚ್ಚಾ ವಸ್ತುಗಳ ಮೂಲದಲ್ಲಿ ನೆರವು, ಉತ್ಪಾದನೆಗಾಗಿ ವಿನ್ಯಾಸ, ಒಂದೇ ಮನಸ್ಥಿತಿಯುಳ್ಳ ಉದ್ಯಮಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದು ಸಚಿವ ಜಾರ್ಜ್ ಹೇಳಿದರು.

ನಗರದಲ್ಲಿ ಟೆಕ್‍ಪಾರ್ಕ್:
ಬೆಳಗಾವಿಯಲ್ಲಿ ತಂತ್ರಜ್ಞಾನೋದ್ಯಾನ (ಟೆಕ್‍ಪಾರ್ಕ್) ಸ್ಥಾಪಿಸುವ ಯೋಜನೆ ಇದೆ. ಬೆಳಗಾವಿಯಲ್ಲಿ ಕೇವಲ ಮಾಹಿತಿ, ತಂತ್ರಜ್ಞಾನ, ಕೈಗಾರಿಕೆ ಮಾತ್ರ ಬೆಳೆಸುವುಲ್ಲದೇ ಉತ್ಪಾದನೆ ಮತ್ತು ಹಾರ್ಡ್‍ವೇರ್ ಉತ್ಪನ್ನಗಳ ಅಭಿವೃದ್ಧಿ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶವಿದೆ ಎಂದರು.
ಹೆಚ್ಚಿನ ಒತ್ತಡದ ಹೈಡ್ರಾಲಿಕ್ ವ್ಯವಸ್ಥೆಗಳ ತಯಾರಿಕೆ ಸೇರಿದಂತೆ, ಭಾರಿ ಯಂತ್ರೋಪಕರಣಗಳ ತಯಾರಿಕೆಗಾಗಿ ಬೆಳಗಾವಿ ಸೂಕ್ತ ತಾಣವಾಗಿದೆ. ವಾಹನ ತಯಾರಿಕೆ, ವಿಶೇಷವಾಗಿ ಕ್ರ್ಯಾಂಕ್ಶಾಫ್ಟ್ ಮೆಷಿನಿಂಗ್ ಕಾಸ್ಟಿಂಗ್ ಮತ್ತು ಹೆಲ್ಮೆಟ್ ಸೇವೆ ನೀಡುವ ಯಂತ್ರದ ಅಂಗಡಿಗಳಿರುವ ಕೈಗಾರಿಕಾ ಕೇಂದ್ರವಾಗಿದೆ. ಬೆಳಗಾವಿ ರಾಜ್ಯದ ಫೌಂಡ್ರಿ ಹಬ್ ಆಗಿದ್ದು, ವಾಹನೋದ್ಯಮ ಮತ್ತು ಫೆರಸ್ ಆಧಾರಿತ ಕೈಗಾರಿಕಾ ಕಾಸ್ಟಿಂಗ್‍ಗಳನ್ನು ಉತ್ಪಾದಿಸುತ್ತದೆ ಮತ್ತು ಸಿ.ಎನ್.ಸಿಯಂತಹ ಪೂರಕಗಳನ್ನು ಬೆಂಬಲಿಸುತ್ತದೆ. ಇದು ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ ಎಂದು ಹೇಳಿದರು.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಾತನಾಡಿ, ಪ್ರಸಕ್ತ ಉತ್ಪಾದನಾ ತಂಡಗಳು, ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಲಭ್ಯವಿರುವ ಸ್ಥಳೀಯ ಮಾನವ ಸಂಪನ್ಮೂಲವನ್ನು ನಿಯಂತ್ರಿಸುವ ಸಲುವಾಗಿ ಈ ಸೌಲಭ್ಯಗಳನ್ನು ಶ್ರೇಣಿ-2ರ ನಗರಗಳಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಸೌಲಭ್ಯಗಳ ಸಮರ್ಥನೀಯತೆಗಾಗಿ ಸ್ಥಳೀಯ ಪರಿಸರ
ವ್ಯವಸ್ಥೆಯ ಎಲ್ಲ ಪ್ರಮುಖ ಪಾಲುದಾರರೊಂದಿಗೆ ಕೈ ಜೋಡಿಸಲಾಗುವುದು ಎಂದು ತಿಳಿಸಿದರು.
ಕೆ-ಟಿಐ ಕೇಂದ್ರಗಳು ಹೊಸತನವನ್ನು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ರಚಿಸಿ, ಯಶಸ್ಸಿನ ವೇಗವನ್ನು ಇಮ್ಮಡಿಗೊಳಿಸುತ್ತದೆ. ಉದ್ಯೋಗಾವಕಾಶ, ಪುನಃ ಕೌಶಲ್ಯ ಮತ್ತು ಇಂಧನ ಆರ್ಥಿಕ ಬೆಳವಣಿಗೆಗೆ
ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಐಟಿ, ಬಿಟಿ ಇಲಾಖೆ ಹಾಗೂ ಎಸ್ ಮತ್ತು ಟಿ ಮೂಲಕ ರಾಜ್ಯ ಸರ್ಕಾರವು ‘ಸೈನ್ಸ್ ಪಾರ್ಕ್ ಮತ್ತು ಟೆಕ್ನಾಲಜಿ ಬ್ಯುಸಿನೆಸ್  ಇನ್ಕ್ಯುಬೇಟರ್” ಎಂಬ ಐಕೆಪಿ ಜ್ಞಾನ ಪಾರ್ಕ್ ಅನ್ನು ನೇಮಿಸಿದೆ. ಇದು ಪ್ರೋಗ್ರಾಮ್ ಮ್ಯಾನೇಜರ್ ಆಗಿ ಇನ್ಕ್ಯೂಬೇಶನ್ ಸೆಂಟರ್ ಮತ್ತು ಸಾಮಾನ್ಯ ಉಪಕರಣ ಸೌಲಭ್ಯಗಳನ್ನು ಸ್ಥಾಪಿಸಿದ ಮತ್ತು ನಿರ್ವಹಿಸಿದ ಅನುಭವ ಹೊಂದಿದೆ ಎಂದರು.
ಐಕೆಪಿ ನಾಲೆಡ್ಜ್ ಪಾರ್ಕ್ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ದೀಪನ್ವಿತಾ ಚಟ್ಟೋಪಾಧ್ಯಾಯ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.