ಉತ್ತಮ ಸಮಾಜಕ್ಕಾಗಿ

ಕಳ್ಳಭಟ್ಟಿ ಸಾರಾಯಿ ವಶ

news belagavi

0

ಬೆಳಗಾವಿ: (news belagavi)ಬೆಳಗಾವಿ ತಾಲೂಕಿನ ಬುಡ್ರ್ಯಾನೂರ ಗ್ರಾಮದಿಂದ ಮುಚ್ಚಂಡಿ ಗ್ರಾಮಕ್ಕೆ ಬರುವ ರಸ್ತೆಯಲ್ಲಿ, ಮುಚ್ಚಂಡಿ ಗ್ರಾಮದಿಂದ 2 ಕಿ.ಮೀ ಅಂತರದಲ್ಲಿ ಮಾರುತಿ 800 ಕಾರ್ ನೋಂದಣಿ ಸಂಖ್ಯೆ ಜಿಎ-02 ಎ-5423 ವಾಹನದಲ್ಲಿ 8 ಕರಿ ಬಣ್ಣದ ಟ್ಯೂಬ್‍ಗಳಲ್ಲಿ ತಲಾ 30.ಲೀ ದಂತೆ ಒಟ್ಟು 240 ಲೀ. ಕಳ್ಳಭಟ್ಟಿ ಸಾರಾಯಿಯನ್ನು ಅಕ್ರಮವಾಗಿ ಹೊಂದಿ ಸೆಪ್ಟೆಂಬರ್ 1 ರಂದು ಮಧ್ಯರಾತ್ರಿ 1 ಗಂಟೆಗೆ ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿರುವಾಗ ಪೊಲೀಸರು ಕಾರ್ಯಾಚರಣೆ ಕೈಗೊಂಡು, ಕಳ್ಳಭಟ್ಟಿ ಸಾರಾಯಿಯನ್ನು ಜಫ್ತು ಪಡಿಸಿಕೊಂಡಿದ್ದಾರೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಡಾ|| ವೈ.ಮಂಜುನಾಥ, ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಅರುಣಕುಮಾರ.ಕೆ, ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕರಾದ ಎನ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ವಿಜಯಕುಮಾರ. ಜೆ ಹಿರೇಮಠ ಅವರ ನೇತೃತ್ವದಲ್ಲಿ ಬೆಳಗಾವಿ ಉಪವಿಭಾಗದ ಸಿಬ್ಬಂದಿ ದಾಳಿ ನಡೆಸಿದ್ದರು.
ಈ ಮೊಕ್ಕದ್ದಮೆಯಲ್ಲಿ ಜಪ್ತಾದ ಕಳ್ಳಭಟ್ಟಿ ಸಾರಾಯಿ ಬೆಲೆ ರೂ.24 ಸಾವಿರ ಹಾಗೂ ವಾಹನದ ಮೌಲ್ಯ ರೂ. 1 ಲಕ್ಷ ಸೇರಿ ಒಟ್ಟು ರೂ.1.24 ಲಕ್ಷ ಆಗಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.