ಉತ್ತಮ ಸಮಾಜಕ್ಕಾಗಿ

tarun kranti:ಬೇರೆ ಭಾಷೆಗೆ ಹೋಲಿಸಿದರೆ ಕನ್ನಡ ಪತ್ರಿಕೋದ್ಯಮ ಬೆಳೆದಿಲ್ಲ – ದು.ಗು.ಲಕ್ಷ್ಮಣ ಅಭಿಮತ

Kannada journalism did not grow when compared to other languages

0

ನೇರನೋಟ ಎರಡು ಕೃತಿಗಳ ಲೋಕಾರ್ಪಣೆ

ಬೆಳಗಾವಿ 🙁 news belgaum)(tarun kranti)ಬೇರೆ ಭಾಷೆಗೆ ಹೋಲಿಸಿದರೆ ಕನ್ನಡ ಪತ್ರಿಕೋದ್ಯಮ ಬೆಳೆದಿಲ್ಲ. ಮಲಿಯಾಳಿ ಮನೋರಮ ಹಾಗೂ ಮಾತೃಭೂಮಿ ಇತ್ಯಾದಿ ದಿನಪತ್ರಿಕೆಗಳು ದಿನವೊಂದಕ್ಕೆ ಹತ್ತರಿಂದ ಹನ್ನೆರಡು ಲಕ್ಷಗಳವರೆಗೆ ಮಾರಾಟವಾಗುತ್ತವೆ. ನಮ್ಮ ಕನ್ನಡ ಪತ್ರಿಕೆಗಳು ಈ ದಿಶೆಯಲ್ಲಿ ಕನ್ನಡಿಗರಿಂದಲೇ ಕಡೆಗಣಿಸಲ್ಪಟ್ಟಿರುವುದು ವಿಪರ್ಯಾಸವೆಂದು ಅಂಕಣ ಬರಹಗಾರ ದು.ಗು.ಲಕ್ಷ್ಮಣ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ನೇರನೋಟ ಭಾಗ 4 ಮತ್ತು 5 ಈ ಎರಡು ಕೃತಿಗಳ ಲೋಕಾರ್ಪಣಾ, 2018ರ ಮೌಲ್ಯಸಂಪದ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಅವರು ಸಾಮಾಜಿಕ ಪಥದಲ್ಲಿ ‘ಪುಸ್ತಕ ಸಂಸ್ಕøತಿ ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

ಟಿವ್ಹಿ ಸಿರಿಯಲ್‍ಗಳು ಈಗ ಮೊದಲಿನಂತೆ ಮೌಲ್ಯಭರಿತವಾಗಿ ಉಳಿದಿಲ್ಲ. ಈಗ ಅವು ಮನಸ್ಸು ಹಾಗೂ ಮನೆಗಳನ್ನು ಒಡೆಯುವಂತಹುದಕ್ಕೆ ಪುಷ್ಟಿ ನೀಡುವಂತಿವೆ. ಪತ್ರಿಕೆಗಳಲ್ಲಿಯೂ ವಸ್ತುನಿಷ್ಠತೆ ಹಾಗೂ ನೈಜತೆ ಕಡಿಮೆಯಾಗಿ ಅದು ಕೇವಲ ಒಂದು ಉದ್ಯಮದ ಭಾವದಲ್ಲಿ ಬೆಳವಣಿಗೆ ಹೊಂದುತ್ತಿರುವುದು ಸಮಾಜ ಹಾಗೂ ದೇಶಕ್ಕೆ ಮಾರಕ ಎಂದು ಅವರು ಹೇಳಿದರು. ರಾಮದುರ್ಗದ ಮೌಲ್ಯಸಂಪದ ಸ್ವಯಂ ಸೇವಾ ಸಂಸ್ಥೆ ಪತ್ರಿಕಾ ಬಳಗ ಹಾಗೂ ಸ್ಥಳೀಯ ವಿಜಯನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನಗಳು ಜಂಟಿಯಾಗಿ ಕಾರ್ಯಕ್ರಮ ಜರುಗಿಸಿದ್ದರು.ಬೇರೆ ಭಾಷೆಗೆ ಹೋಲಿಸಿದರೆ ಕನ್ನಡ ಪತ್ರಿಕೋದ್ಯಮ ಬೆಳೆದಿಲ್ಲ - ದು.ಗು.ಲಕ್ಷ್ಮಣ ಅಭಿಮತ- Tarun kranti 1
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ ‘ತಿ.ತಾ. ಶರ್ಮಾ ಹಾಗೂ ಡಿ.ವ್ಹಿ. ಗುಂಡಪ್ಪರಂತವರ ಆದರ್ಶ ತತ್ವಗಳನ್ನು ಇಂದಿನ ಯುವ ಪತ್ರಕರ್ತರು ಅರಿತು ಮುನ್ನಡೆಯಬೇಕು. ಕಹಿ ಸತ್ಯಗಳನ್ನು ಪ್ರಕಟಪಡಿಸುವಂತಹ ದಿಟ್ಟತನವನ್ನು ತೋರಿಸಿ ಎದೆಗೊಟ್ಟು ಸಮಾಜ ತಿದ್ದುವ ಕಾರ್ಯ ಮಾಡಬೇಕು. ನಡೆದಿವೆ. ಎಲ್ಲಕಡೆ ಉತ್ತಮ ದಿಟ್ಟ ಸಮಾಜಮುಖಿ ಪತ್ರಕರ್ತರಿಗೆ ಎಂದು ಅವರು ಮಾತನಾಡಿದರು. ವೇದಿಕೆಯ ಮೇಲಿದ್ದ ಇನ್ನೋರ್ವ ಸಾಹಿತಿ ಸಿ.ಕೆ. ಜೋರಾಪೂರ ಮಾತನಾಡಿ ಪತ್ರಕರ್ತರು ರಾಷ್ಟ್ರಭಾವದಲ್ಲಿ ಕಾರ್ಯ ಮಾಡಿದಾಗ ಹರಿದು ಹಂಚಿಹೋಗಿದ್ದ ಇಸ್ರೇಲ್ ಮತ್ತೇ ರೂಪಗೊಂಡು ಪುನಶ್ಚೇತನಗೊಂಡಿತು ಹಾಗೇ ಸಾಹಿತಿಗಳು ಕೂಡ ರಾಷ್ಟ್ರಭಾವದಲ್ಲಿ ಮುನ್ನಡೆಯಬೇಕೆಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಾಮದುರ್ಗದ ಚು.ಸಾ.ಪ. ಅಧ್ಯಕ್ಷ ಆರ್.ಎಸ್. ಪಾಟೀಲ ಹಾಗೂ ಸಮಾಜಸೇವಕ ವೈದ್ಯ ಡಾ. ಕೆ.ವ್ಹಿ. ಪಾಟೀಲ ಮಾತನಾಡಿದರು. ಮೊದಲಿಗೆ ಶಿಕ್ಷಕ ಬಸವರಾಜ ಸುಣಗಾರ ಪ್ರಸ್ತಾವಿಕವಾಗಿ ಮಾತನಾಡಿದರು. ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರತಿವಾರ ಪ್ರಕಟಗೊಂಡ ಅಂಕಣ ಬರಹಗಳ ಸಂಕಲನ ನೇರ ನೋಟ ಭಾಗ 4 ಮತ್ತು 5 ಈ ಎರಡು ಗ್ರಂಥಗಳನ್ನು ಪತ್ರಿಕೊದ್ಯಮಿ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ ಹಾಗೂ ಡಾ.ಕೆ.ವ್ಹಿ. ಪಾಟೀಲ ಲೋಕಾರ್ಪಣಗೊಳಿಸಿದರು.

ಮೌಲ್ಯಸಂಪದ 2018ರ ಪ್ರಶಸ್ತಿ ಪ್ರದಾನ : ಬೆಳಗಾವಿಯ ವಿಜಯ ನಗರದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಹಿತಿ ಬಸವರಾಜ ಪ. ಸುಣಗಾರರವರಿಗೆ ಮೌಲ್ಯಸಂಪದ ಸಂಸ್ಥೆ ನೀಡುವ ‘ಶಿಕ್ಷಣ ಸಂಪದ ಸಮ್ಮಾನ 2018’ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ರಾಮದುರ್ಗ ತಾಲೂಕಿನ ಗಣ್ಯ ವೈದ್ಯ ಡಾ. ಕೆ.ವ್ಹಿ. ಪಾಟೀಲರಿಗೆ ಮೌಲ್ಯಸಂಪದ ‘ಸಮಾಜ ಸೇವಾ ಸಮ್ಮಾನ್ 2018’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಆರ್.ಎಸ್. ಪಾಟೀಲ ಹಾಗೂ ಸಿ.ಕೆ. ಜೋರಾಪುರರವರನ್ನು ವೇದಿಕೆಯ ಮೇಲೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಾಹಿತಿ ಶಿಕ್ಷಕ ಬಸವರಾಜ ಸುಣಗಾರರ 49ನೇ ವರ್ಷದ ಹುಟ್ಟುಹಬ್ಬವನ್ನು ವೇದಿಕೆಯ ಮೇಲೆ ಆಚರಿಸಲಾಯಿತು. ಸಮಾಜ ಸೇವಕ ಅಶೋಕ ಕೇಸ್ತಿ ಸ್ವಾಗತಿಸಿದರು. ಮೌಲ್ಯಸಂಪದ ಸಂಪಾದಕ ಸೋಮಶೇಖರ ವೀ. ಸೊಗಲದ ನಿರೂಪಿಸಿದರು. ರಾಜೇಂದ್ರ ಗೋಶಾನಟ್ಟಿ ವಂದಿಸಿದರು. Kannada journalism did not grow when compared to other languages

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.