ಉತ್ತಮ ಸಮಾಜಕ್ಕಾಗಿ

ಕನ್ನಡ ಫಲಕಗಳು ಕಡ್ಡಾಯ: ಸೂಚನೆ!

news belagavi

0

ಬೆಳಗಾವಿ: (news belgaum)ಮುಂಬರುವ ಕನ್ನಡ ರಾಜ್ಯೋತ್ಸವ (ನವೆಂಬರ್ 1)ದ ವೇಳೆಗೆ ಬೆಳಗಾವಿ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ನಡೆಸುವ ಎಲ್ಲ ಅಂಗಡಿ-ಮುಂಗಟ್ಟುಗಳು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತವು ‘ನಾಮಫಲಕ ಸಪ್ತಾಹ’ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ನವೆಂಬರ್ 1 ರೊಳಗೆ ಎಲ್ಲ ಫಲಕಗಳನ್ನು ಕಡ್ಡಾಯವಾಗಿ ಬರೆಯಿಸಲು ಕ್ರಮ ಕೈಗೊಂಡು ಪ್ರಾಧಿಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಹೇಳಿದರು. ನಿಯಮಾವಳಿ ಪ್ರಕಾರ ಪ್ರತಿಯೊಂದು ವಾಣಿಜ್ಯ ಮಳಿಗೆಯವರು ಕಡ್ಡಾಯವಾಗಿ ಕನ್ನಡದಲ್ಲಿಯೇ ಫಲಕ ಬರೆಸಬೇಕು. ಒಂದು ವೇಳೆ ಇನ್ನೊಂದು ಭಾಷೆಯಲ್ಲೂ ಬಳಸಲು ಬಯಸಿದರೆ ಫಲಕದ ಶೇ.60ರಷು ಸ್ಥಳದಲಿ ಕನ್ನಡ ಹಾಗೂ ಉಳಿದ ಜಾಗೆಯಲ್ಲಿ ಇತರೆ ಭಾಷೆಯನ್ನು ಬಳಸಬಹುದು. ಆದರೆ ಕನ್ನಡಕ್ಕೆ ಆದ್ಯತೆ ನೀಡುವುದು ಕಡ್ಡಾಯವಾಗಿದೆ ಎಂದರು.
ಅದೇ ರೀತಿ ಇದುವರೆಗೆ ಹೆಸರು ಇಡದೇ ಇರುವ ನಗರದ ನೂತನ ಬಡಾವಣೆಗಳು, ರಸ್ತೆಗಳು, ವೃತ್ತಗಳು ಹಾಗೂ
ಉದ್ಯಾನಗಳಿಗೆ ಕನ್ನಡದ ಕವಿ, ಸಾಹಿತಿಗಳ, ಹೋರಾಟಗಾರರ ಹೆಸರುಗಳನ್ನು ಇಡಬೇಕು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಸಕ್ತಿ ವಹಿಸಬೇಕು ಎಂದು ಪ್ರೊ.ಸಿದ್ದರಾಮಯ್ಯ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರನ್ನು ಜಿಲ್ಲಾಧಿಕಾರಿಗಳಾದ ಎಸ.ಜಿಯಾವುಲ್ಲಾ ಅವರು ಸನ್ಮಾನಿಸಿದರು. ಎಸ್‍ಪಿ ಸುಧೀರಕುಮಾರ ರೆಡ್ಡಿ, ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ಅವರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.