ಉತ್ತಮ ಸಮಾಜಕ್ಕಾಗಿ

ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ

Karma Bhoomi Kannada Sangha Bicholi is the 4th anniversary of this

0

ಗೋವಾ….(news belagavi)Karma Bhoomi Kannada Sangha Bicholi is the 4th anniversary of thisಪಣಜಿ(ಬಿಚೋಲಿ): ಗೋವಾದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ 2000 ಕ್ಕೂ ಹೆಚ್ಚು ಕನ್ನಡಿಗರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ವಾಸ್ಕೊ ನಿರಾಶ್ರಿತ ಕನ್ನಡಿಗರಿಗೆ ವಾಸ್ಕೊದಲ್ಲಿ ಸೈಟ ಕೊಡಿಸುವುದಾಗಿ ಭರವಸೆ ನೀಡಿದ್ದರು ಆದರೆ ಅದು ಇಂದಿಗೂ ಈಡೇರಲಿಲ್ಲ ಎಂದು ಬೆಳಗಾಂವ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಗೋವಾದ ಬಿಚೋಲಿಂನಲ್ಲಿ ಭಾನುವಾರ ಆಯೋಜಿಸಿದ್ದ ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ ಹಾಗೂ ಹೊರನಾಡ ಕನ್ನಡಿಗರ ಸಾಂಸ್ಕøತಿಕ ಸಮ್ಮೇಳನದ ದಶಮಾನೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಸಮ್ಮೇಳನದ ಉಧ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 1 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 2 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 3 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 4ಗೋವಾದಲ್ಲಿ ಹೋರಾಟದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಗೋವಾದಲ್ಲಿ ಮನೆ ಕಳೆದುಕೊಂಡಿರುವ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳೋಣ. ಕೆಲವೆ ದಿನಗಳಲ್ಲಿ ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವಂತೆ ಮನವಿ ಮಾಡೋಣ ಎಂದು ಹುಕ್ಕೇರಿ ಶ್ರೀ ನುಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ವಿಧಾನಸಭೆಯ ಸಭಾಪತಿ ಪ್ರಮೋದ ಸಾವಂತ ಮಾತನಾಡಿ- ಗೋವಾದಲ್ಲಿ 15 ವರ್ಷ ವಾಸ್ಥವ್ಯದ ದಾಖಲಾತಿ ಹೊಂದಿರುವ ಎಲ್ಲ ಕನ್ನಡಿಗರಿಗೆ ಗೋವಾ ಸರ್ಕಾರದ ಎಲ್ಲ ಯೋಜನೆಗಳ ಸೌಲಭ್ಯ ಲಭಿಸುತ್ತಿದೆ. ಗೋವಾದಲ್ಲಿ ಕನ್ನಡ ಶಾಲೆಗಳಿವೆ, ಇಲ್ಲಿನ ಕನ್ನಡ ವಿದ್ಯಾರ್ಥಿಗಳಿಗಾಗಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಗೋವಾದಲ್ಲಿನ ಕನ್ನಡಿಗರೆಲ್ಲ ಗೋವಾದ ಜನತೆಯೇ ಆಗಿದ್ದಾರೆ ಎಂದ ಸಭಾಪತಿಗಳು, ವಾಸ್ಕೊ ದಾಬೋಲಿಂ ವೃತ್ತದಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪಿಸಬೇಕೆಂದು ಕನ್ನಡ ಸಂಘದ ವತಿಯಿಂದ ಮನವಿ ಬಂದಿದೆ. ಗೋವಾದ ಒಂದು ಉತ್ತಮ ಸ್ಥಳದಲ್ಲಿ ಶ್ರೀ ಬಸವೇಶ್ವರರ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 5 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 6 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 7 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 8 News Belgaum-ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಇದರ 4 ನೇಯ ವಾರ್ಷಿಕೋತ್ಸವ 9ಸಮ್ಮೇಳನದ ಸರ್ವಾಧ್ಯಕ್ಷರಾದ ರವೀಂದ್ರ ತೋಟಿಗೇರ ಅವರು ಗೋವಾದಲ್ಲಿರುವ ಕನ್ನಡಿಗರ ಎಳೆಎಳೆಯಾಗಿ ಬಿಚ್ಚಿಟ್ಟರು. ಗೋವಾ ರಾಜ್ಯ ರಚನೆ ಸಂವಿಧಾನಾತ್ಮಕವಾಗಿ ರಚನೆಯಾಗಿರುವುದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಜನರ ಆಸೆಯು ಕೂಡಾ ಆಗಿತ್ತು. ಒಂದು ರಾಜ್ಯದ ಆಡಳಿತ ಯಂತ್ರ ಸುಸುತ್ರವಾಗಿ ನಡೆಯಬೇಕಾಗದರೆ ಆ ರಾಜ್ಯದ ಶಾಸಕಾಂಗ, ಕಾರ್ಯಾಂಗ, ಹಾಗೂ ನ್ಯಾಯಾಂಗ ಒಂದನೊಂದು ಅವಲಂಬಿಸಿ ಕಾರ್ಯನಿರ್ವಹಿಸಬೆಕಾಗುತ್ತದೆ, ಆದರೆ ಗೋವಾ ರಾಜ್ಯದ ನ್ಯಾಯಾಂಗ ವ್ಯವಸ್ಥೆ ಮಹಾರಾಷ್ಟ್ರದ ಉಚ್ಚನ್ಯಾಯಾಲಯದ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಕಾರಣ ಗೋವಾ ರಾಜ್ಯಕ್ಕೆ ಸ್ವತಂತ್ರನ್ಯಾಯಾಂಗ ವ್ಯವಸ್ಥೆಯಾಗಬೇಕೆಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾದಲ್ಲಿ ಹಿಂದೊಂದು ದಿನ ಕನ್ನಡ ಸಮ್ಮೇಳನವನ್ನು ಆಯೋಜಿಸುವುದು ತುಂಬಾ ಕಷ್ಟಕರವಾಗಿತ್ತು. ಇಂದು ಅದೇ ಸಮ್ಮೇಳನವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಗೋವಾದಲ್ಲಿನ ಕನ್ನಡಿಗರ ಮಕ್ಕಳಿಗೆ ಶಾಲೆಯಲ್ಲಿ ಜಾತಿ ಕಾಲಂನಲ್ಲಿ ಭಾರತೀಯ ಎಂದಷ್ಟೇ ನಮೂದಿಸಲಾಗುತ್ತಿದೆ. ಇದರಿಂದಾಗಿ ಕನ್ನಡಿಗರಿಗೆ ಹೆಚ್ಚು ತೊಂದರೆಯಾಗುತ್ತಿದ್ದು ಸಂಬಂಧಿತ ಜಾತಿಯನ್ನು ನಮೂದಿಸುವಂತೆ ಗೋವಾ ಸರ್ಕಾರದ ಬಳಿ ಮನವಿ ಮಾಡಿರುವುದಾಗಿ ಅವರು ನುಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿ.ಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಸಮ್ಮೇಳನಾಧ್ಯಕ್ಷ ರವೀಂದ್ರ ತೋಟಗೇರಿ, ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ, ಕರ್ನಾಟಕ ಯಕ್ಷಗಾನ ಅಕಾಡಮಿಯ ರಜಿಸ್ಟ್ರಾರ್ ಎಸ್.ಎಚ್ ಶಿವರುದ್ರಪ್ಪ, ಭಗವಾನ ಹರಮಲ್‍ಕರ್, ಪಣಜಿ ಕನ್ನಡ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಮಾಪ್ಸಾ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಪರ್ವರಿ ಸೂರ್ಯೋದಯ ಕನ್ನಡ ಸಂಘದ ಅಧ್ಯಕ್ಷ ಸುರೇಶ್ ಗೋಕಾವಿ, ಸಾಖಳಿ ಸಿರಿಗಂಧ ಕನ್ನಡ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್, ಕರ್ನಾಟಕ ಜಾಗೃತಿ ವೇದಿಕೆಯ ಮಹೇಶ್ ಬಾಬು ಸುರ್ವೇ ಸೇರಿದಂತೆ ಎಲ್ಲ ಕನ್ನಡ ಸಂಘದ ಅಧ್ಯಕ್ಷರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಾಧಕರಿಗೆ ಈ ಸಂದರ್ಭದಲ್ಲಿ ಕರುನಾಡ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರಂಭದಲ್ಲಿ 101 ಪೂರ್ಣಕುಂಭ ಮೆರವಣಿಗೆಯೊಂದಿಗೆ ಶ್ರೀಗಳನ್ನು ಹಾಗೂ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ನಂತರ ವಿವಿಧ ಕಲಾ ತಂಡಗಳಿಂದ ದಿನವಿಡೀ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಆಗಮಿಸಿದ ಎಲ್ಲ ಕನ್ನಡಿಗರಿಗೂ ಬೆಳಗ್ಗೆ ಉಪಹಾರ ಹಾಗೂ ಮಧ್ಯನ್ಹ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಿಚೋಲಿಯಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಗೋವೆಯಲ್ಲಿ ಕನ್ನಡ ಕಂಪನ್ನು ಹರಡಲಾಯಿತು. ಕರ್ನಾಟಕ ಜಾಗೃತಿ ವೇದಿಕೆಯ ಸಂಚಲಕ ಮಹೇಶಬಾಬು ಸುರ್ವೆ ಸಮ್ಮೇಳನಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. http://newsbelgaum.in  

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.