ಉತ್ತಮ ಸಮಾಜಕ್ಕಾಗಿ

Karnataka Elections ಬಿಜೆಪಿ ಉತ್ತರ ಅಭ್ಯರ್ಥಿಯ ಮೇರೆ ಮೀರಿದ ಕುತೂಹಲ ಬೆಟ್ಟಿಂಗ್

Karnataka Elections Betting Interest in BJP's North Candidate

0

ಬೆಳಗಾವಿ: (news belagavi)ವಿಧಾನಸಭೆ ಚುನಾವಣೆ ಏನೊ ಘೋಷಣೆ ಆಯಿತು. ಆದರೆ ಆಯಾ ಕ್ಷೇತ್ರಗಳ ವಿವಿಧ ಪಕ್ಷಗಳ ಅಭ್ಯರ್ಥಿಗಳು ಯಾರು ಎನ್ನುವ ಕುತೂಹಲಕ್ಕೆ ಇನ್ನೂ ಬ್ರೆಕ್ ಬಿದ್ದಿಲ್ಲ. ದೊಡ್ಡ ಬೆಳಗಾವಿ ಜಿಲ್ಲೆಯ ಪೈಕಿ ಈಗ ನಗರದ ಉತ್ತರ-ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಜನತೆ ಮತ್ತು ಆಕಾಂಕ್ಷಿ ಉಮೇದುವಾರರಿಗೆ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಕೇಟ್ ಮತ್ತು ಎಂಎಲ್ ಎ ಆಗುವ ಬಯಕೆಗೆ ಸ್ಪರ್ಧೆ ಏರ್ಪಟ್ಟಿದೆ.
ಇಲ್ಲಿನ ಹಾಲಿ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಎದುರು ಸ್ಪರ್ಧೇಗೆ ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಒಟ್ಟು ನಾಲ್ವರು ಸಿದ್ದರಾಗಿ ಟಿಕೇಟ್ ಗಾಗಿ ಕಾಯುತ್ತಿದ್ದಾರೆ. ನಾಲ್ವರು ಪ್ರಬಲ ಆಕಾಂಕ್ಷಿಗಳ ಚಟುವಟಿಕೆಯ ನಡುವೆ ಪಕ್ಷದ ಟಿಕೆಟ್‌ ಯಾರಿಗೆ ಸಿಗುತ್ತೆ? ಎಂಬ ವಿಚಾರದ ಮೇಲೆ ಬೆಟ್ಟಿಂಗ್‌ ಏರ್ಪಟ್ಟಿದೆ.
Karnataka Elections ಬಿಜೆಪಿ ಉತ್ತರ ಅಭ್ಯರ್ಥಿಯ ಮೇರೆ ಮೀರಿದ ಕುತೂಹಲ ಬೆಟ್ಟಿಂಗ್- Tarun krantiಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿರುವ‌‌ ಕಿರಣ ಜಾಧವ, ವೈದ್ಯರಾಗಿರುವ ಡಾ.ರವಿ ಪಾಟೀಲ, ನ್ಯಾಯವಾದಿ ಅನಿಲ ಬೆನಕೆ ಸೇರಿ ಇವರ ನಡುವಿನ ತುರುಸಿನ ಮಧ್ಯೆ ಈಗ ಮಾಜಿ ಸಚಿವ ರಮೇಶ ಕತ್ತಿ ಒಕ್ಕರಿಸಿಕೊಂಡಿದ್ದಾರೆ. ಅನಿಲ ಬೆನಕೆ, ಕಿರಣ ಜಾಧವ, ವೈದ್ಯ ಡಾ. ರವಿ ಪಾಟೀಲ ತಮಗೇ ಟಿಕೇಟ್ ಸಿಕ್ಕಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು, ಕನಿಷ್ಠ 5 ಸಾವಿರದಿಂದ ಒಂದು ಲಕ್ಷದವರೆಗೆ ಬೆಟ್ಟಿಂಗ್ ಕೆಲವರು ಕಟ್ಟುತ್ತಿದ್ದಾರೆ. ಈ ಪೈಕಿ ಡಾ.ರವಿ ಪಾಟೀಲ್ ಪರವಾಗಿ ಟಿಕೇಟ್ ಸಿಗುತ್ತದೆ ಎಂದು ಹೆಚ್ಚಿನ ಬೆಟ್ಟಿಂಗ್ ಕಟ್ಟಿರುವುದು ಗಮನಕ್ಕೆ ಬಂದಿದೆ. ಒಂದೇ ಕ್ಷೇತ್ರಕ್ಕೆ, ಒಂದೇ ಪಕ್ಷದ ಹಲವಾರು ಆಕಾಂಕ್ಷಿಗಳು ಹೆಚ್ಚಿದ್ದು, ಕುತೂಹಲ ತಡೆಯದೇ ಬೆಟ್ಟಿಂಗ್ ಧೂಳು ಎದ್ದಿದೆ.Karnataka Elections Betting Interest in BJP’s North Candidate

Leave A Reply

 Click this button or press Ctrl+G to toggle between Kannada and English

Your email address will not be published.