ಉತ್ತಮ ಸಮಾಜಕ್ಕಾಗಿ

ಹಿರಿಯ ನಟ-ಕಾಶಿನಾಥ್ ಇನ್ನಿಲ್ಲ . .

Kashinath passes away in Bengaluru | TarunKranti

0

ಹಿರಿಯ ನಟ-ಕಾಶಿನಾಥ್ ಇನ್ನಿಲ್ಲ . .- Tarun kranti 1ಬೆಂಗಳೂರು: ( tarunkranti) ಹಿರಿಯ ನಟ-ಕಾಶಿನಾಥ್ ಇನ್ನಿಲ್ಲ.Senior actor-Kashinath is no more

ನಟ-ಕಾಶಿನಾಥ್ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ, ಹಲವು ಖ್ಯಾತ ನಟರುಗಳನ್ನು ಹಾಗು ಯುವ ಪ್ರತಿಬೆಗಳನ್ನು ಪರಿಚಯಿಸಿದ ಹಿರಿಯನಟ ಇಂದು ಚಿರ ನಿದ್ರೆಗೆ ಜಾರಿದ್ದಾರೆ,

ಅನಾರೋಗ್ಯದಿಂದ ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ.ಅಪಾರ ಅಭಿಮಾನಿ ಬಳಗ ,ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.

ಒಟ್ಟಾರೆ ಸುಮಾರು 43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು.  ಉಪೇಂದ್ರರಂತಹ ಕಲಾವಿದರ ಬೆಳವಣಿಗೆಗೆ ಕಾರಣಕರ್ತ ಹಾಗೂ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು.

11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.

Leave A Reply

 Click this button or press Ctrl+G to toggle between Kannada and English

Your email address will not be published.