ಉತ್ತಮ ಸಮಾಜಕ್ಕಾಗಿ

ಮಂಗಳವಾರ ಟ್ರಾಫಿಕ್ & ಪಾರ್ಕಿಂಗ್ ಗಮನವಿರಲಿ: ಡಿಸಿಪಿ ಎಸ್. ಜಿ. ಪಾಟೀಲ

Keep Traffic & Parking On Tuesday: DCP S G. Patil

0

ಬೆಳಗಾವಿ: (news belagavi)18 ಮತ ಕ್ಷೇತ್ರಗಳ ಮತ ಎಣಿಕೆ ನಾಳೆ ಮಂಗಳವಾರ ಬೆಳಿಗ್ಗೆ 8ಕ್ಕೆ RPD ಕಾಲೇಜಿನಲ್ಲಿ ಜರುಗಲಿದ್ದು, ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಪಿ ಎಸ್. ಜಿ. ಪಾಟೀಲ ತಿಳಿಸಿದ್ದಾರೆ. ಮತ ಎಣಿಕೆ ಕಾರ್ಯಕ್ಕೆ ಬರುವ ಅಧಿಕಾರಿವರ್ಗ & ಸಿಬ್ಬಂಧಿ, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರು, ವರದಿ ಮಾಡಲು ಬರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ & ಸಂಚಾರ ಕುರಿತು ಪ್ರತ್ಯೆಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಭ್ಯರ್ಥಿಗಳು: RPD ಕಾಲೇಜಿನ 1ನೇ ಗೇಟ್ ಮೂಲಕ ಪ್ರವೇಶಿಸಿ, ಕಾಲೇಜಿನ ಆಫೀಸ್ ಕಟ್ಟಡದ ಹತ್ತಿರ ಅಭ್ಯರ್ಥಿಗಳು ಇಳಿದು ತಮ್ಮ ವಾಹನಗಳನ್ನು ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಕಳಿಸುವುದು.
ಏಜೆಂಟರು: ವಾಹನಗಳಲ್ಲಿ ಬರುವ ಏಜೆಂಟರು RPd ಸರ್ಕಲ್‍ ವರೆಗೆ ಬಂದು ಸರ್ಕಲ್‍ದಲ್ಲಿ ಇಳಿದು ಜಿಎಸ್‍ಎಸ್ ಕಾಲೇಜ್ ಗೇಟ ಮೂಲಕ ಮತ ಎಣಿಕೆ ಸ್ಥಳಕ್ಕೆ ಪ್ರವೇಶಿಸಿಸುವುದು. ತಮ್ಮ ವಾಹನಗಳನ್ನು RPD ಕ್ರಾಸನಿಂದ ಬಿಗ್ ಬಜಾರ ಕಡೆಗೆ ಸಾಗಿಸಿ ರಸ್ತೆಯ ಬದಿಗೆ ಒಂದು ಲೇನನಲ್ಲಿ ನಿಯಮಿತವಾಗಿ ನಿಲ್ಲಿಸುವುದು.
ಮಾಧ್ಯಮ ಪ್ರತಿನಿಧಿಗಳು:ಮಾಧ್ಯಮ ಪ್ರತಿನಿಧಿಗಳು ಭಾಗ್ಯ ನಗರ 2ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿ ಪರ್ಪೋಸ್ ಕೋ-ಆಪರೇಟಿವ ಸೋಸೈಟಿ ಬಳಿ, ಎಡತಿರುವು ಪಡೆದು ಮಾವಿನ ತೋಟದ ಗೇಟ ಮೂಲಕ RPD ಕಾಲೇಜ್ ಮೈದಾನದಲ್ಲಿ ತಮಗೆ ನಿಗಧಿಗೊಳಿಸಿರುವ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.
ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ:ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ RO, ARO ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಾಗ್ಯ ನಗರ 2ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿ ಪರ್ಪೋಸ್ ಕೋ-ಆಪರೇಟಿವ ಸೋಸೈಸಿ ಬಳಿ, ಎಡತಿರುವು ಪಡೆದುಕೊಂಡು ಮಾವಿನ ತೋಟದ ಗೇಟ ಮೂಲಕ RPD ಕಾಲೇಜ್ ಮೈದಾನದಲ್ಲಿ ವಾಹನಗಳನ್ನು ಪಾರ್ಕ ಮಾಡಿ ಮತ ಎಣಿಕೆ ಕೇಂದ್ರಕ್ಕೆ ಹೋಗುವುದು.
ಸಾರ್ವಜನಿಕರು:ಮತ ಎಣಿಕೆ ದಿವಸ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಗೆ ನಮೂದಿಸಿದ ಸ್ಥಳಗಳಲ್ಲಿ ನಿಲುಗಡೆಗೊಳಿಸುವುದು.
ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ರಾಯಬಾಗ, ಕುಡಚಿ ಭಾಗಗಳಿಂದ ಬರುವ ಸಾರ್ವಜನಿಕರು ಗೋವಾವೇಸ್ ಸರ್ಕಲ್‍ದಿಂದ ರೇಲ್ವೆ ಸ್ಟೇಶನ್ ಕಡೆಗೆ ಸಾಗಿದ ‘ಮರಾಠಾ ಮಂದಿರ’ ವರೆಗಿನ ರಸ್ತೆ ಬದಿಗೆ ವಾಹನಗಳನ್ನು ಒಂದು ಲೇನ್‍ದಲ್ಲಿ ನಿಲುಗಡೆಗೊಳಿಸುವುದು.
ಅಥಣಿ, ಕಾಗವಾಡ, ಗೋಕಾಕ, ಅರಭಾವಿ, ಹುಕ್ಕೇರಿ, ಯಮಕನಮರಡಿ ಭಾಗಗಳಿಂದ ಬರುವ ಸಾರ್ವಜನಿಕರು ಲೇಲೆ ಮೈದಾನ ಹಾಗೂ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.
ಬೈಲಹೊಂಗಲ, ಕಿತ್ತೂರ, ರಾಮದುರ್ಗ,ಸೌದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವ  ಸಾರ್ವಜನಿಕರು ಹಳೆ ಪಿಬಿ ರಸ್ತೆ, ನಾಥಪೈ ಸರ್ಕಲ್ ಮೂಲಕ ವಡಗಾಂವಿ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲೆ ಮೈದಾನ ಹಾಗೂ ಆದರ್ಶ ನಗರ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‍ದಲ್ಲಿ ನಿಲುಗಡೆ ಮಾಡುವುದು.
ಖಾನಾಪೂರ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರು 3ನೇ ರೇಲ್ವೆ ಗೇಟ ದಿಂದ ಪೀರನವಾಡಿ ವರೆಗಿನ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‍ದಲ್ಲಿ ನಿಲುಗಡೆಗೊಳಿಸುವುದು.
ಸಾರ್ವಜನಿಕರು ತಮ್ಮ ವಾಹನಗಳನ್ನು ಮೇಲ್ಕಂಡ ಸ್ಥಳಗಳಲ್ಲಿ ಪಾರ್ಕ ಮಾಡಿದ ನಂತರ ಭಾಗ್ಯ ನಗರ 2ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿ ಪರ್ಪೋಸ್ ಕೋ-ಆಪರೇಟಿವ ಸೋಸೈಸಿ ಬಳಿ ಎಡತಿರುವು ಪಡೆದುಕೊಂಡು ಮಾವಿನ ತೋಟದ ಗೇಟ ಮೂಲಕ RPD ಕಾಲೇಜ್ ಮೈದಾನದಲ್ಲಿ ಸಾರ್ವಜನಿಕರಿಗೆ ನಿಗಧಿಪಡಿಸಿದ ಸ್ಥಳಕ್ಕೆ ಹೋಗುವುದು.
ಟಿಳಕವಾಡಿ ಪ್ರದೇಶದಲ್ಲಿ ರೇಲ್ವೆ ಸಂಚಾರದಿಂದಾಗಿ 1ನೇ ರೇಲ್ವೆ ಗೇಟ, 2ನೇ ರೇಲ್ವೆ ಗೇಟ ಹಾಗೂ 3ನೇ ರೇಲ್ವೆ ಗೇಟ ಇವುಗಳನ್ನು ಮೇಲಿಂದ ಮೇಲೆ ಬಂದ ಮಾಡಲಾಗುವುದರಿಂದ ಕಾಂಗ್ರೇಸ್ ರಸ್ತೆಯಲ್ಲಿ ಆ ದಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿರುತ್ತವೆ ಕಾರಣ ಸಾರ್ವಜನಿಕರು ಬದಲಿ ಮಾರ್ಗ ಬಳಸುವುದು ಸೂಕ್ತ.
ನೋ-ಪಾರ್ಕಿಂಗ್ ಝೋನ:ಮತ ಎಣಿಕೆ ದಿನದಂದು ಗೋವಾವೇಸ್ ಸರ್ಕಲ್‍ದಿಂದ ಬಿಗ್ ಬಜಾರ ಕ್ರಾಸ್ ವರೆಗಿನ ಖಾನಾಪೂರ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಡೈವರ್ಶನ್:ಮತ ಎಣಿಕೆ ದಿನದಂದು ಗೋವಾವೇಸ್ ಸರ್ಕಲ್ ಕಡೆಯಿಂದ RPD ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳ ಸಂಚರಣೆಯನ್ನು ನಿಷೇಧಿಸಿದ್ದು, ಸದರಿ ವಾಹನಗಳು ಮಹಾವೀರ ಭವನ ಹತ್ತಿರ ಎಡ ತಿರುವ ತೆಗೆದುಕೊಂಡು ಗುರುದೇವ ರಾನಡೆ ರಸ್ತೆ, ಭಗತ ಸಿಂಗ್ ಗಾರ್ಡನ ಪಕ್ಕದ ರಸ್ತೆಯ ಮೂಲಕ ಆದರ್ಶ ನಗರ, ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂದಿನಿಂದ ಭಾಗ್ಯ ನಗರ 10ನೇ ಕ್ರಾಸ್ ಮುಖಾಂತರ ಅನಗೋಳ ಹರಿ ಮಂದಿರ ಕ್ರಾಸ್ ಸೇರಿ ಮುಂದೆ ಸಾಗುವುದು.
3ನೇ ರೇಲ್ವೆ ಗೇಟ್ ಮೂಲಕ ಗೋವಾವೇಸ್ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಬಿಗ್ ಬಜಾರ ಕ್ರಾಸ್ ದಾಟಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ ಹತ್ತಿರ ಎಡತಿರುವು ಪಡೆದುಕೊಂಡು 2ನೇ ರೇಲ್ವೆ ಗೇಟ್ ಮೂಲಕ ಕಾಂಗ್ರೇಸ್ ರಸ್ತೆ ಸೇರಿ ಮುಂದೆ ಸಾಗುವುದು.
ಶಹಾಪೂರ ಕಡೆಯಿಂದ ನಗರಕ್ಕೆ ಬರುವ ಎಲ್ಲ ಮಾದರಿ ವಾಹನಗಳು ಗೋವಾ ವೇಸ್ ಸರ್ಕಲ್ ಹತ್ತಿರ ಬರಲಿರುವು ಪಡೆದು ಮಹಾತ್ಮಾ ಫುಲೆ ರಸ್ತೆ, ಕಪಿಲೇಶ್ವರ ಫ್ಲೈ ಓವರ್, ಶನಿಮಂದಿರ ಮೂಲಕ ಅಥವಾ ಹಳೆ ಪಿ.ಬಿ. ರಸ್ತೆ ಮೂಲಕ ಮುಂದೆ ಸಾಗುವಂತೆ ನಗರ ಪೊಲೀಸರು ತಿಳಿಸಿದ್ದಾರೆ.Keep Traffic & Parking On Tuesday: DCP S G. Patil  

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.