ಉತ್ತಮ ಸಮಾಜಕ್ಕಾಗಿ

ಸಂತ್ರಸ್ಥರಿಗೆ ಅಗತ್ಯ ವಸ್ತುಗಳನ್ನು ನೀಡಲು ಮನವಿ :ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ

news belagavi

0

ಬೆಳಗಾವಿ: (news belagavi)ಇತ್ತೀಚೆಗೆ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ/ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ಮಾನವ ಜೀವ ಹಾನಿ, ಜಾನುವಾರು ಹಾನಿ, ಬೆಳೆಗಳ ಹಾನಿ, ಮನೆಗಳ ಹಾನಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿರುವುದರಿಂದ ಅಲ್ಲಿನ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಬಟ್ಟೆ, ಪಾತ್ರೆ, ಬ್ಲ್ಯಾಂಕೆಟ್‍ಗಳು ಹಾಗೂ ಇನ್ನಿತರೆ ಸಾಮಗ್ರಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಸಂಘ, ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕೆಳಕಂಡ ಅಧಿಕಾರಿಗಳು ಹಾಗೂ ಕಚೇರಿಗೆ ವಸ್ತುಗಳನ್ನು ನೀಡಬೇಕು. ಈ ಎಲ್ಲ ಸಾಮಗ್ರಗಿಗಳನ್ನು ಜಿಲ್ಲಾಡಳಿತ ಸಂಗ್ರಹಿಸಿ, ಕೊಡಗು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತದೆ. ಕೊಡಗು ಜಿಲ್ಲಾಡಳಿತ ಇವುಗಳನ್ನು ಸಂತ್ರಸ್ತರಿಗೆ ತಲುಪಿಸಲಿದೆ.

ಕಾರ್ಯಾಲಯದ ಹೆಸರು, ಸಿಬ್ಬಂದಿಗಳ ವಿವರ ಹಾಗೂ ದೂರವಾಣಿ ಸಂಖ್ಯೆ ಈ ಕೆಳಗಿನಂತಿವೆ.
1 ಜಿಲ್ಲಾಧಿಕಾರಿಗಳು ಬೆಳಗಾವಿ, ಶ್ರೀಮತಿ ಎಸ್.ಜೆ. ಕಮತೆ ಶಿರಸ್ತೇದಾರ,
ಶ್ರೀ ಡಿ.ವೈ.ಗೋಣಿ ದ್ವಿದಸ 0831-2407290
2 ಉಪವಿಭಾಗಾಧಿಕಾರಿಗಳು ಬೆಳಗಾವಿ, ಶ್ರೀ ಜಿ.ಆರ. ಬೂದಣ್ಣವರ ಶಿರಸ್ತೇದಾರ,
ಶ್ರೀಮತಿ ಪಿ.ಎಸ್.ಕಾಂಬಳೆ ಶೀಘ್ರಲಿಪಿಗಾರರು 0831-2407284
3 ಉಪವಿಭಾಗಾಧಿಕಾರಿಗಳು ಬೈಲಹೊಂಗಲ, ಶ್ರೀಮತಿ ಎಸ್.ಎಂ. ಗೌಡರ ಶಿರಸ್ತೇದಾರ,
ಶ್ರೀ ಮಂಜುನಾಥ ಅಂಗಡಿ ದ್ವಿದಸ 08288-233160
4 ಉಪವಿಭಾಗಾಧಿಕಾರಿಗಳು ಚಿಕ್ಕೋಡಿ, ಶ್ರೀಮತಿ ಪಿ.ಕೆ. ದೇಶಪಾಂಡೆ ತಹಶೀಲ್ದಾರ ಗ್ರೇಡ್-2
ಶ್ರೀ ದಸ್ತಗೀರ ಜೆ. ಮಲ್ಲಿಕ ದ್ವಿದಸ 08338-272132
5 ತಹಶೀಲ್ದಾರ ಬೆಳಗಾವಿ, ಶ್ರೀ ಜೆ.ಸಿ. ಅಷ್ಟಗಿಮಠ ಶಿರಸ್ತೇದಾರ,
ಶ್ರೀಮತಿ ಆರ್.ಎಲ್. ಬೂದಿಹಾಳ ದ್ವಿದಸ 0831-2407286
6 ತಹಶೀಲ್ದಾರ ಖಾನಾಪೂರ, ಶ್ರೀ ಆರ್.ಎಸ್. ಚವ್ಹಾಣ ಶಿರಸ್ತೇದಾರ,
ಶ್ರೀ ದೇವರಾಜ ಹೆಚ್ ಗ್ರಾಲೆ 08336-222225
7 ತಹಶೀಲ್ದಾರ ಹುಕ್ಕೇರಿ ಶ್ರೀ ಬಿ.ಎನ್. ಬಡಿಗೇರ ಶಿರಸ್ತೇದಾರ,
ಶ್ರೀ ಬಿ.ಎಂ. ನಾಡಗೌಡ ದ್ವಿದಸ 08333-265036
8 ತಹಶೀಲ್ದಾರ ಬೈಲಹೊಂಗಲ ಶ್ರೀ ಶ್ರೀಕಾಂತ ಬೇಟಗೇರಿ ಶಿರಸ್ತೇದಾರ,
ಶ್ರೀಮತಿ ಆರ್.ಎಚ್.ವನಕಿ ದ್ವಿದಸ 08288-233152
9 ತಹಶೀಲ್ದಾರ ಕಿತ್ತೂರ ಶ್ರೀ ಎಸ್.ಜೆ. ಸಾಳುಂಕೆ ಶಿರಸ್ತೇದಾರ,
ಶ್ರೀ ಅರುಣ ಪ್ರ ಅಡ್ನೂರ ದ್ವಿದಸ 08288-286106
10 ತಹಶೀಲ್ದಾರ ಸವದತ್ತಿ ಶ್ರೀ ಆರ್.ಎಸ್. ನೇಸರಗಿ ಶಿರಸ್ತೇದಾರ,
ಶ್ರೀ ಆರ್.ಎಸ್. ಘೋರ್ಪಡೆ ಪ್ರದಸ 08330-222223
11 ತಹಶೀಲ್ದಾರ ರಾಮದುರ್ಗ ಶ್ರೀ ಜಿ.ಎಸ್ ಕಾನುಗೋಳ ಶಿರಸ್ತೇದಾರ,
ಶ್ರೀಮತಿ ಸುನೀತಾ ವರ್ಗಣ್ಣವರ ಗ್ರಾ.ಲೆ 08335-242162
12 ತಹಶೀಲ್ದಾರ ಗೋಕಾಕ ಶ್ರೀ ವೈ.ಎಲ್.ಡಬ್ಬನ್ನವರ ಶಿರಸ್ತೇದಾರ,
ಶ್ರೀಮತಿ ಎ.ಎಸ್.ಸುಂಠೆ ದ್ವಿದಸ 08332-225073
13 ತಹಶೀಲ್ದಾರ ಚಿಕ್ಕೋಡಿ ಶ್ರೀ ಸಿ.ಎ. ಪಾಟೀಲ ಶಿರಸ್ತೇದಾರ,
ಶ್ರೀ ಬಿ.ಎಸ್.ಚೌಗಲಾ ಪ್ರದಸ 08338-272130

14 ತಹಶೀಲ್ದಾರ ರಾಯಬಾಗ ಶ್ರೀ ಪ್ರಶಾಂತ ಬಿ ಪಾಟೀಲ ಶಿರಸ್ತೇದಾರ (ಪ್ರ),
ಶ್ರೀ ಎಸ್.ಬಿ.ಮುಲ್ಲಾ ದ್ವಿದಸ 08331-225482
15 ತಹಶೀಲ್ದಾರ ಅಥಣಿ ಶ್ರೀ ಆರ್.ಆರ್.ಬುರ್ಲಿ ಶಿರಸ್ತೇದಾರ,
ಶ್ರೀ ಎಂ.ಎ.ಹೊನ್ನುಟಗಿ ದ್ವಿದಸ 08289-251146

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಲ್ಲಿಸಲು ಮನವಿ:
ಪ್ರಕೃತಿ ವಿಕೋಪ ಅತಿವೃಷ್ಟಿಯಲ್ಲಿ ನೊಂದ ಸಂತ್ರಸ್ಥರಿಗೆ ಸಹಾಯ ಮಾಡುವ ದಾನಿಗಳು ಈ ಕೆಳಕಂಡ ಮುಖ್ಯಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ-2018 ರ ಖಾತೆಗೆ ದೇಣಿಗೆ ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾತೆಯ ಮಾಹಿತಿ:
ಖಾತೆಯ ಹೆಸರು: ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ-2018, ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಶಾಖೆ: ವಿಧಾನಸೌಧ ಶಾಖೆ, ಖಾತೆ ಸಂಖ್ಯೆ: 37887098605, ಐ.ಎಫ್.ಎಸ್.ಸಿ ಕೋಡ್:SBIN0040277, ಎಂ.ಐ.ಸಿ.ಆರ್ ಸಂಖ್ಯೆ: 560002419 ಇವರ ಹೆಸರಿನಲ್ಲಿ ಚೆಕ್ ಅಥವಾ ಡಿಡಿಯನ್ನು ಮೇಲೆ ವಿವರಿಸಿದ ಸಿಬ್ಬಂದಿಗಳಿಗೆ ನೀಡಬಹುದಾಗಿದೆ ಎಂದು ಸಾರ್ವಜನಿಕರಲ್ಲಿ ಕೋರಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.