ಉತ್ತಮ ಸಮಾಜಕ್ಕಾಗಿ

ಕೆ.ಪಿ.ಸಿ. ನಿವೃತ್ತ ನೌಕರರ ಸಂಘ ಸಂಸ್ಥಾಪನಾ ದಿನಾಚರಣೆ KPC Retirement Employees’ Association Foundation Day

KPC Retirement Employees' Association Foundation Day

0

ನಗೆ : ಸಂಬಂಧ ಬೆಸೆಯುತ್ತದೆ ಬೇರ್ಪಡಿಸುವುದಿಲ್ಲ: ಗುಂಡೇನಟ್ಟಿ ಮಧುಕರ

ಬೆಳಗಾವಿ- (tarun kranti)ನಗೆ ಸಂಬಂಧವನ್ನು ಬೆಸೆಯುತ್ತದ ಬೇರ್ಪಡಿಸುವುದಿಲ್ಲ. ಹಾಸ್ಯ ಮನೊಭಾವವುಳ್ಳ ಮುನುಷ್ಯ ಸದಾ ಸುಖಿಯಾಗಿರುತ್ತವೆ. ಅವನಿಂದ ಸಿಟ್ಟು, ಅಹಂಕಾರ ಸಹಜವಾಗಿಯೇ ದೂರವಾಗಿ ಅವನೊಬ್ಬ ಪರಿಪೂರ್ಣ ಮನುಷ್ಯನಾಗುತ್ತಾನೆ. ಸುಮಧುರ ಜೀವನ ನಡೆಸಲು ಹಾಸ್ಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಇಂದಿಲ್ಲಿ ಹೇಳಿದರು.
ಬೆಳಗಾವಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿವೃತ್ತ ನೌಕರರ ಸಂಘದವರು ಕ್ಲಬ್ ರಸ್ತೆಯಲ್ಲಿರುವ ಮಿಲನ್ ಹೊಟೇಲ್ ಸಭಾಭವನದಲ್ಲಿ 6 ನೆ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಳಗಾವಿಯ ಹಾಸ್ಯಕೂಟದವರಿಂದ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪ್ರೊ. ಜಿ. ಕೆ. ಕುಲಕರ್ಣಿ ನಿವೃತ್ತ ಜೀವನ ಕಷ್ಟದ ಜೀವನವೆಂದು ಕೆಲವರು ಚಿಂತಿಸುವುದುಂಟು ಆದರೆ ಕಷ್ಟದ ಜೀವನವನ್ನು ಸುಖದ ಜೀವನವನ್ನಾಗಿ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಾವು ಹವ್ಯಾಸವೊಂದನ್ನು ಬೆಳೆಸೆಕೊಳ್ಳುವುದರಿಂದ ನಿವೃತ್ತಿ ಜೀವನ ಕಷ್ಟವೆನ್ನಿಸಲಾರದು. ನಾನು ಹಾಸ್ಯ ಭಾಷಣವನ್ನು ಆಯ್ಕೆ ಮಾಡಿಕೊಂಡು ನಿವೃತ್ತಿ ಜೀವನ ಸಂತೋಷದಿಂದ ಕಳೆಯುತ್ತಿದ್ದೇನೆ ಎಂಬ ಸಲಹೆಯೊಂದಿಗೆ ಹಲವಾರು ನಗೆ ಪ್ರಸಂಗಗಳನ್ನು ಹಂಚಿಕೋಳ್ಳುವುದರ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಬೈಲಹೊಂಗಲದ ಎಂ. ಬಿ. ಹೊಸಳ್ಳಿ ಹಾಸ್ಯಭಾಷಣಗಳಲ್ಲಿ ಗಂಡ ಹೆಂಡಿರ ನಡುವೆ ನಡಯುವ ನಗೆಪ್ರಸಂಗಗಳನ್ನು ಹಂಚಿಕೊಳ್ಳುತ್ತ. ಹೆಣ್ಣನ್ನು ನಾವು ಎಷ್ಟೇ ಹಾಸ್ಯದ ವಸ್ತುವನ್ನಾಗಿ ಮಾಡಿಕೋಂಡರು. ಅವಳಿಗಿರುವ ಗೌರವ ಮನದಲ್ಲಿ ಇದ್ದೇ ಇರುತ್ತದೆ. ಹೆಣ್ಣು ಗಂಡಿಗಾಗಿ ಏನೆಲ್ಲವನ್ನು ಕೊಡತ್ತಾಳೆ. ಆದರೆ ಗಂಡು ಅವಳಿಗಾಗಿ ನಾನೇನು ಕೊಡುತ್ತೇನೆ ಎಂದು ಪ್ರಶ್ನಿಸಿಕೊಂಡಾಗ ನಿವೃತ್ತನಾಗುತ್ತಾನೆ ಎಂದು ಹೆಣ್ಣಿನ ಮಹತ್ವವನ್ನು ಹೇಳುತ್ತಲೇ ಹಲವಾರು ಉಕ್ತಿ, ಹನಿಗವನ ಹಾಗೂ ಹಾಸ್ಯ ಪ್ರಸಂಗಗಳನ್ನು ಹೇಳುತ್ತ ಎಲ್ಲರ ಗಮನ ಸೆಳೆದರು. ಜಿ. ಎಸ್. ಸೋನಾರ ರಾಜಕಾರಣಿ ಹಾಗೂ ಸಿನಿನಟರ ಮಿಮಿಕ್ರಿ ಮಾಡಿ ತೋರಿಸಿ ರಂಜಿಸಿದರು. ಅಶೋಕ ಮಳಗಲಿ ನಿರೂಪಿಸಿದರು. ಒಟ್ಟಿನಲ್ಲಿ ಒಂದೂವರೆ ಗಂಟೆ ಜನರನ್ನು ಮನದುಂಬಿ ನಕ್ಕು ಹಗುರಾಗಿಸುವಲ್ಲಿ ಹಾಸ್ಯ ಕಾರ್ಯಕ್ರಮ ಯಶಸ್ವಿಯಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ಸಿಗೆ ದುಡಿದÀ ಸಂಘದ ಜಂಟಿ ಕಾರ್ಯದರ್ಶಿ ಎಸ್. ಆರ್. ಮುತಾಲಿಕದೇಸಾಯಿ ಹಾಗೂ ಕಾರ್ಯದರ್ಶಿ ಎನ್. ಆಯ್. ಬಿದರಿಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಆರ್. ಮುತಾಲಿಕ ಈ ಸನ್ಮಾನದ ಶ್ರೆಯಸ್ಸು ಎಲ್ಲ ನಮ್ಮ ಸದಸ್ಯರಿಗೆ ಸಲ್ಲುತ್ತದೆ ಅವರಿಗೇ ನಾನಿದನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ಅಮೀನ ದೇಸಾಯಿ ನಗೆತುಣುಕುಗಳನ್ನು ಹಂಚಿಕೊಂಡರು.
ಸಂಘದ ಅಧ್ಯಕ್ಷರಾದ ಎಲ್. ಆರ್. ರಾಠೋಡ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಧಾರವಾಡ, ಹುಬ್ಬಳ್ಳಿ, ವಿಜಾಪುರ, ದಾಂಡೇಲಿ ಹಳ್ಯಾಳಗಳಿಂದ ನಿವೃತ್ತಿ ಸಂಘದ ಪದಾಧಿಕಾರಿಗಳು ಆಗಮಿಸಿದ್ದರು. ಸಪ್ನಾ ಹೊಸಕೇರಿ ಪ್ರಾರ್ಥಿಸಿದರು. ಎನ್. ಆಯ. ಬಿದರಿ ಪರಿಚಯಿಸಿದರು. ಎಸ್. ಆರ್. ಮುತಾಲಿಕ ವರದಿ ವಾಚನ ಮಾಡಿದರು. ಎಸ್. ಎಲ್. ಕೊಂಜಾಳಿ ವಂದಿಸದರು.
ಎಸ್. ಜಿ. ಗಾರಗೋಟಿ, ಬಿ. ಎಸ್. ಮೋರೆ, ಆಯ್. ಬಿ. ಕೊಂಡಿ, ವಾಯ್. ಬಿ. ಪಾಟೀಲ, ಎಸ್. ಎಸ್. ಹಂಜನಟ್ಟಿ, ಡಿ.ಟಿ. ಕುಮಾರ, ಎನ್. ಎಸ್. ಕುಂಚೂರ, ಎ. ಎಚ್. ಕೌಜಲಗಿ, ಎ.ಜೆ. ಬಡಿಗೇರ, ಎ.ಡಿ. ಸುಣಗದ, ಜಿ.ಎಸ್. ಕುಂದಣಗಾರ, ಅಂಗಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.KPC Retirement Employees’ Association Foundation Day

(  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.