ಉತ್ತಮ ಸಮಾಜಕ್ಕಾಗಿ

ಲಕ್ಷ್ಮೀ vs ಡಾ. ಅಂಜಲಿ: ಯಾರು ಮಂತ್ರಿ…!?

Lakshmi vs Dr. Anjali: Who is Minister ... !?

0

ಬೆಳಗಾವಿ: (news belagavi)ವರ್ಚಸ್ಸಿನಲ್ಲಿ ಸರಿಸಮಾನ ಎಂದು ಗುರುತಿಸಲ್ಪಡುವ ಜಿಲ್ಲೆಯ ಇಬ್ಬರೂ ಮಹಿಳೆಯರ ಪೈಕಿ ‘ಮಿನಿಸ್ಟರಗಿರಿ’ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬ ಕೌತುಕ ಗರಿಗೆದರಿದೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ & ಡಾ. ಅಂಜಲಿ ನಿಂಬಾಳಕರ ಇಬ್ಬರೂ ಸುಶಿಕ್ಷಿತರೇ. ಲಕ್ಷ್ಮೀ ಎಂಎ ಪದವೀಧರೆ ಆದರೆ ಡಾ. ಅಂಜಲಿ ಹೆಸರಿನ ಮೊದಲ ಅಕ್ಷರ ಸೂಚಿಸುವಂತೆ ಅವರು ‘ವೈದ್ಯೆ’. ಇಬ್ಬರೂ ಘಟಾನುಘಟಿ ಮಹಿಳಾ ಶಾಸಕಿಯರು ತಮ್ಮ ಛಲಬಿಡದ ಹೋರಾಟದಿಂದ ಈಗ ವಿಧಾನಸೌಧ ಪ್ರವೇಶಿಸಿದ್ದಾರೆ.
News Belgaum-ಲಕ್ಷ್ಮೀ vs ಡಾ. ಅಂಜಲಿ: ಯಾರು ಮಂತ್ರಿ…!?ಮಹಿಳಾ ಕೋಟಾ ಅಡಿ ಈಗ ಬೆಳಗಾವಿ ಜಿಲ್ಲೆಗೆ ಮಿನಿಸ್ಟರಗಿರಿ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಮಂತ್ರಿಗಿರಿ ಸಿಗುವುದೇ ಆದರೆ ಈ ಇಬ್ಬರಲ್ಲಿ ಯಾರಿಗೆ ಆ ‘ಅದೃಷ್ಟ’ ಎಂಬ ಚರ್ಚೆ ಸರಕಾರ ರಚಣೆಗೆ ಒಂದು ತಾಸು ಮುಂಚೆಯೇ ವ್ಯಕ್ತವಾಗಿದೆ. ಕೆಲ ರಾಜಕೀಯ ನಡೆಯಲ್ಲಿ ಈ ಹಿಂದೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮಂತ್ರಿಗಿರಿ ತಪ್ಪಿಸುವ ಯತ್ನ ನಡೆಯಿತು ಎಂಬ ಸುದ್ದಿಯ ನಡುವೆ ಡಾ. ಅಂಜಲಿ ಹೆಸರೂ ಸಹ ಮುಂಚೂಣಿ ಪಡೆಯಿತು. ಇಬ್ಬರೂ ಮಹಿಳೆಯರ ನಡುವೆ ಅನ್ಯೋನ್ಯತೆ ಇದ್ದರೂ ಅದೃಷ್ಟದಾಟದ ಮೇಲೆ ಗೇಮ್ ನಡೆಯಲಿದೆ.
ಜನರ ಕೂಗು ಸಹ ಈಗ ಲಕ್ಷ್ಮೀ ಹೆಬ್ಬಾಳಕರ ಜಿಲ್ಲಾ ಉಸ್ತುವಾರಿ ಆಗಬೇಕು ಎಂದು ಕೇಳಿಬಂದಿದೆ. ಲಕ್ಷ್ಮೀ ಅವಕಾಶ ತಪ್ಪಿಸಿಕೊಂಡರೆ ಡಾ. ಅಂಜಲಿ ಸಚಿವೆಯಾಗುವುದು ಖಚಿತ. ಆದರೆ ಜಿಲ್ಲಾ ಉಸ್ತುವಾರಿ ಚಾರ್ಜ್ ಮಾತ್ರ ಜಾರಕಿಹೊಳಿ ಬ್ರದರ್ಸ್ ನಡುವೆ ಹಂಚಿಕೆಯಾಗುವುದೋ!? ಎಂಬ ಬಗ್ಗೆ ಪಕ್ಷ ಮಾತ್ರ ಗುಟ್ಟು ಬಿಟ್ಟು ಕೊಟ್ಟಿಲ್ಲ.Lakshmi vs Dr. Anjali: Who is Minister … !?

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.