ಉತ್ತಮ ಸಮಾಜಕ್ಕಾಗಿ

tarun kranti:ಸರ್ವಜ್ಞರಂತಹ ಮಹಾನ ಪುರುಷರ ಜೀವನ ಬಗೆಗೆ ತಿಳಿಕೊಳ್ಳಬೇಕೆಂದು: ಸಂಸದರಾದ ಸುರೇಶ ಅಂಗಡಿ

Learn the history of great men like Sarvajan - Suresh Store

0

ಸರ್ವಜ್ಞ ಜಯಂತಿ ಸಮಾರಂಭ

News Belgaum-ಸರ್ವಜ್ಞರಂತಹ ಮಹಾನ ಪುರುಷರ ಇತಿಹಾಸ ತಿಳಿಯಿರಿ  - ಸುರೇಶ ಅಂಗಡಿ
ಬೆಳಗಾವಿ:(newsbelgaum)ಇತಿಹಾಸ ತಿಳಿಯದೆ ಇತಿಹಾಸಿ ನಿರ್ಮಿಸಿಲು ಸಾಧ್ಯವಿಲ್ಲಾ, ಆದ್ದರಿಂದ ಸರ್ವಜ್ಞರಂತಹ ಮಹಾನ ಪುರುಷರ ಜೀವನ ಬಗೆಗೆ ತಿಳಿಕೊಳ್ಳಬೇಕೆಂದು ಸಂಸದರಾದ ಸುರೇಶ ಅಂಗಡಿ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಫೆ.20) ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಸಮಾಜದಲ್ಲಿ ನಾವೇಲ್ಲರೂ ಹೇಗೆ ನೆಮ್ಮದಿಯಿಂದ ಬಾಳಬೇಕು ಎಂದು ತಿಳಿಸಿಕೊಟ್ಟ ಮಹಾನ ಪುರುಷರು ಎಂದು ಹೇಳಿದರು.
ಕಂಬಾರರು, ಕುಂಬಾರರು ಹಾಗೂ ಬಡಿಗೇರ ಸಮಾಜದವರು ತಮ್ಮ ಮೂಲ ಕಸಬುಗಳನ್ನು ಮರೆತಿರುವುದರಿಂದ ಇಂದು ನಮ್ಮ ದೇಶಕ್ಕೆ ಹೊರ ದೇಶದಿಂದ ಯುದ್ಧ ಸಾಮಗ್ರಿಗಳನ್ನು ಮತ್ತು ಇತರ ಕರಕುಶಲಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬಂದಿದೆ ಎಂದು ಹೇಳಿದರು.
ನಾವು ಇಂದು ನಮ್ಮ ಸಂಸ್ಕøತಿ ಮರೆತಿರುವುದಲ್ಲದೇ ನಮ್ಮ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ನಮ್ಮ ಸಂಸ್ಕøತಿ ಮತ್ತು ಮೂಲ ಉದ್ಯೋಗವನ್ನು ಮುಂದುವರೆಸಿಕೊಂಡು ಹೋಗುವುದರಿಂದ ಉತ್ತಮ ಜೀವನ ಮತ್ತು ಒಳ್ಳೆಯ ಸಂಸ್ಕøತಿ ಹುಟ್ಟುಹಾಕಲು ಸಾಧ್ಯ ಎಂದು ಹೇಳಿದರು.
ನಿವೃತ್ತ ತತ್ವಶಾಸ್ತ್ರದ ಪ್ರಾದ್ಯಾಪಕರಾದ ಐ.ಎಸ್. ಕುಂಬಾರ ಅವರು ಮಾತನಾಡಿ, ಎಲ್ಲ ವಿಷಯಗಳನ್ನು ಬಲ್ಲವರು, ಎಲ್ಲರ ಮನದಲ್ಲಿ ಇರುವವರು, ಸರ್ವಕಾಲಕ್ಕೂ ಸಮಾನರು ಸರ್ವಜ್ಞರು ಎಂದು ದ.ರಾ.ಬೇಂದ್ರೆ ಅವರು ಹೇಳಿದ್ದಾರೆ ಎಂದು ತಿಳಿದರು.
ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞರು ತಿಳಿಯದ ವಿಷಯವಿಲ್ಲ. ವಾಸ್ತವ ಸಂಗತಿಗಳ ಬಗೆಗೆ ಅಪಾರ ಜ್ಞಾನವನ್ನು ಸರ್ವಜ್ಞರು ಹೊಂದಿದ್ದರು. ಒಕ್ಕಲಿಗರ ಬಗೆಗೆ ಅಪಾರ ಕಾಳಜಿ ಹೊಂದಿದ್ದ ಸರ್ವಜ್ಞರು ಒಂದು ಸಮಾಜ ನೆಮ್ಮದಿಯಿಂದ ಇರಬೇಕಾದರೆ ಒಕ್ಕಲಿಗರನ್ನು ಗೌರವದಿಂದ ಕಾಣಬೇಕು. ನಾವು ಎಲ್ಲಿಯವರೆಗೆ ಒಕ್ಕಲಿಗರನ್ನು ಸಮಾಜದಲ್ಲಿ ಗೌರವದಿಂದ ಕಾಣುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಸುಧಾರಿಸಲು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಜಿ. ಕುಂಬಾರ, ದಲಿತ ಮುಖಂಡರಾದ ಮಲ್ಲೇಶ ಚೌಗಲೆ, ಈರಪ್ಪ ಕುಂಬಾರ, ಶ್ರಿಮತಿ ಮೇಘಾ ಕುಂಬಾರ, ಶಿವಾನಂದ ಕುಂಬಾರ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ ಅವರು ಸ್ವಾಗತಿಸಿದರು. ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿಗಳಾದ ಎಸ್.ಯು. ಜಮಾದಾರ ಅವರು ನಿರೂಪಿಸಿದರು. ಹಿರಿಯ ಕಲಾವಿದರಾದ ರುದ್ರಮ್ಮ ಯಾಳಗಿ ಅವರು ಸರ್ವಜ್ಞರ ವಚನ ಗಾಯನ ಪ್ರಸ್ತುತಪಡಿಸಿದರು.

ಅದ್ಧೂರಿ ಮೆರವಣಿಗೆ:

News Belgaum-ಸರ್ವಜ್ಞರಂತಹ ಮಹಾನ ಪುರುಷರ ಇತಿಹಾಸ ತಿಳಿಯಿರಿ  - ಸುರೇಶ ಅಂಗಡಿ 1ಕಾರ್ಯಕ್ರಮಕ್ಕೂ ಮುಂಚೆ ಸ್ಥಳೀಯ ಅಶೋಕ ವೃತ್ತದಲ್ಲಿ ಸಂಸದರಾದ ಸುರೇಶ ಅಂಗಡಿ ಅವರು ಸರ್ವಜ್ಞರವರÀ ಭಾವಚತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಅಶೋಕ ವೃತ್ತದಿಂದ ಆರಂಭವಾದ ಸರ್ವಜ್ಞನವರ ಭಾವಚಿತ್ರದ ಭವ್ಯ ಮೆರವಣಿಗೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ರಾಣಿ ಚನ್ನಮ್ಮ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ, ಪೊಲೀಸ್ ಆಯುಕ್ತರಾದ ಡಾ. ಡಿ.ಸಿ. ರಾಜಪ್ಪ, ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಜಿ. ಕುಂಬಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ಕುಂಬಾರ ಸಮಾಜದ ಮುಖಂಡರು ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.Learn the history of great men like Sarvajan – Suresh Store/

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.