ಉತ್ತಮ ಸಮಾಜಕ್ಕಾಗಿ

ಪೊಲೀಸ್ ಬಂದೋಬಸ್ತ್ ನಡುವೆ ಇಲ್ಲಿನ ಮಹಾದ್ವಾರ ರಸ್ತೆಯ ಪಿಎಲ್ ಡಿ ಬ್ಯಾಂಕ್ ಚುನಾವಣೆ:ಅವಿರೋಧ ಆಯ್ಕೆಗೆ ಕಾರಣವಾಯಿತು.

news belagavi

0

ಬೆಳಗಾವಿ:(news belgaum) ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಇಲ್ಲಿನ ಮಹಾದ್ವಾರ ರಸ್ತೆಯ ಪಿಎಲ್ ಡಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ 9ಜನ ನಿರ್ದೇಶಕರು 10:45ಕ್ಕೆ ಆಗಮಿಸಿದರು. ಬಾಪುಗೌಡ ಶಿವನಗೌಡ ಪಾಟೀಲ ನೇತೃತ್ವದಲ್ಲಿ ಏಳು ಪುರುಷರು ಹಾಗೂ ಇಬ್ಬರೂ ಮಹಿಳೆಯರು ಬ್ಯಾಂಕ್ ಗೇಟಗೆ ಆಗಮಿಸುತ್ತಿದ್ದಂತೆ ಅವರ ನಾಮಧೇಯ ಪೊಲೀಸ್ ತಪಾಸಣೆ ನಂತರ ಬ್ಯಾಂಕ್ ಒಳಗಡೆ ಬಿಡಲಾಯಿತು. 11ಕ್ಕೆ ನಾಮಪತ್ರ ಸಲ್ಲಿಸಲು 15ನಿಮಿಷ ಬಾಕಿ ಇದ್ದಾಗ ಮೊದಲನೇ ತಂಡ ಲಕ್ಷ್ಮೀ ಹೆಬ್ಬಾಳಕರ ಪೆನಾಲ್ ಆಗಮಿಸಿದರೆ, ಐದು ನಿಮಿಷ ತಡವಾಗಿ 10:50ಕ್ಕೆ ಜಾರಕಿಹೊಳಿ ಬ್ರದರ್ಸ್ ಪರ ಪ್ಯಾನಲ್ ನ 6 ಸದಸ್ಯರು ಪ್ರಕಾಶ ಪಾಟೀಲ ನೇತೃತ್ವದಲ್ಲಿ ಆಗಮಿಸಿದರು.
ಪ್ರಕಾಶ ಪಾಟೀಲ ಅವರು ಮಾತನಾಡಿ ನಮ್ಮಲ್ಲೇ ಅವಿರೋಧ ಚುನಾವಣೆ ಆಗುತ್ತಿತ್ತು. ಆದರೆ ಲಕ್ಷ್ಮೀ ಹೆಬ್ಬಾಳಕರ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿನ್ನಲೆಯಲ್ಲಿ ಇಂದಿನ ಬೆಳವಣಿಗೆಗೆ ಕಾರಣವಾಯಿತು ಎಂದರು. ಲಕ್ಷ್ಮೀ ಪರ ಪ್ಯಾನಲ್ ನಿರ್ದೇಶಕರು ಲಕ್ಷ್ಮೀ ಹೆಬ್ಬಾಳಕರ ಆದೇಶದಂತೆ ನಡೆಯುವುದಾಗಿ ತಿಳಿಸಿದರು.
Laxmi Panel:ಮಹಾದೇವ ಪಾಟೀಲ ಅಧ್ಯಕ್ಷ ಮತ್ತು ಬಾಪುಸಾಹೇಬ ಜಮಾದಾರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
Jarkiholi Brothers Panel:ನಮ್ಮ ಬಣ ಅವರ ಬಣ ಇಲ್ಲ. ಎಲ್ಲರೂ ಕೂಡಿ ಒಂದೇ ಬಣ ಎಂದು ಈ ಬಣದ 6ಜನ ಸದಸ್ಯರು ತಿಳಿಸಿ ಮಾಧ್ಯಮಗಳನ್ನು ಚಕಿತಗೊಳಿಸಿದರು. 6 ಜನ ಸದಸ್ಯರು ಯಾವುದೇ ನಾಮಪತ್ರ ಸಲ್ಲಿಸಿಲ್ಲ. ಈ ೬ ಜನರಿಗೆ ಸುಮ್ಮನೆ ಬ್ಯಾಂಕಗೆ ಬಂದು ಕುಳಿತು ಹೊರಬರುವಂತೆ ಸೂಚಿಸಲಾಗಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ಇಂದಿನ ಚುನಾವಣೆ ಎಂದಿನ ವರತಷದಂತೆ ಮತ್ತೆ ಅವಿರೋಧ ಆಯ್ಕೆಗೆ ಕಾರಣವಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.