ಉತ್ತಮ ಸಮಾಜಕ್ಕಾಗಿ

tarun kranti:ವಿಧಾನ ಸಭಾ ಚುನಾವಣೆ : ಕಮಿಷನರೇಟ್‍ನಲ್ಲಿ ಪಿಎಸ್‍ಐ ವರ್ಗಾವಣೆ

Legislative Assembly Elections: Transfer of PSI to Commissionerate

0

ಬೆಳಗಾವಿ:(tarun kranti) (news belgaum)ಬೆಳಗಾವಿ ಪೊಲೀಸ್ ಕಮಿಷನರೇಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10 ಜನ ಪಿಎಸ್‍ಐರವರನ್ನು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಬೆಳಗಾವಿ ನಗರದಿಂದ ಉತ್ತರ ವಲಯಕ್ಕೆ ಹಾಗೂ ಉತ್ತರ ವಲಯದ 10 ಜನ ಪಿಎಸ್‍ಐರವರನ್ನು ಬೆಳಗಾವಿ ನಗರಕ್ಕೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಉತ್ತರ ವಲಯ, ಬೆಳಗಾವಿಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 43 ಪಿಎಸ್‍ಐರವರು ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು, 16 ಪಿಎಸ್‍ಐರವರು ಕಳೆದ 04 ವರ್ಷಗಳಲ್ಲಿ ಒಂದೇ ಉಪ-ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು, 02 ಪಿಎಸ್‍ಐರವರ ಮೇಲೆ ಅಪರಾಧ ಪ್ರಕರಣಗಳು ಬಾಕಿ ಇರುವುದರಿಂದ ಹಾಗೂ 05 ಜನ ಪಿಎಸ್‍ಐರವರನ್ನು ಇತರೆ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡ ಲಾಗಿರುತ್ತದೆ.
ಒಟ್ಟು 76 ಪಿಎಸ್‍ಐ.ರವರ ವರ್ಗಾವಣೆ ಮಾಡಲಾಗಿದ್ದು, ವರ್ಗಾವಣೆಯಾದ ಪಿಎಸ್‍ಐರವರು ತಕ್ಷಣ ಬಿಡುಗಡೆ ಹೊಂದಿ 24 ಗಂಟೆಗಳ ಒಳಗಾಗಿ ವರ್ಗಾಯಿಸಿದ ಸ್ಥಳಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರಕ್ಷಕ ಮಹಾನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Legislative Assembly Elections: Transfer of PSI to Commissionerate

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.