ಉತ್ತಮ ಸಮಾಜಕ್ಕಾಗಿ

ಪತ್ರಕರ್ತರ ಕುಟುಂಬದವರಿಗೆ 5 ಲಕ್ಷ ರೂ.ವರೆಗಿನ ಜೀವ ವಿಮೆ ಖಾತರಿ Life insurance guarantee upto Rs. 5 Lakhs to journalists’ families

Life insurance guarantee upto Rs. 5 Lakhs to journalists' families

0

ಬೆಂಗಳೂರು: (tarun kranti)ಪತ್ರಕರ್ತರು ವೃತ್ತಿ ನಿರತ ಕೆಲಸದ ವೇಳೆ ಅಪಘಾತಕ್ಕೆ ಒಳಗಾದರೆ, ಇಲ್ಲವೆ ಇನ್ನಿತರೆ ಅವಘಡಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಪತ್ರಕರ್ತರ ಕುಟುಂಬದವರಿಗೆ 5 ಲಕ್ಷ ರೂ.ವರೆಗಿನ ಜೀವ ವಿಮೆ ಖಾತರಿ ನೀಡಲು ‘ಮಾಧ್ಯಮ ಸಂಜೀವಿನಿ’ ಎಂಬ ಸಮೂಹ ಜೀವವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.

- Tarun kranti 14ಪತ್ರಕರ್ತರಿಗೆ ನೀಡುತ್ತಿರುವ ರಾಜೀವ್ ಆರೋಗ್ಯ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಸೌಲಭ್ಯವನ್ನು ವಿಸ್ತರಿಸಲಾಗುವುದು. ಅಲ್ಲದೇ  ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಾ ಅನಿಶ್ಚಿತ ಬದುಕು ಸಾಗಿಸುವ ಪತ್ರಿಕೆ ಹಂಚುವವರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ.ಗಳ ‘ಕ್ಷೇಮ ನಿಧಿ’ ಸ್ಥಾಪಿಸಲಾಗುವುದು.  ಬೆಂಗಳೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.

ಡಾ. ರಾಜ್ ಕುಮಾರ್ ಸ್ಮರಣಾರ್ಥ ರಾಜ್‌‌ಕುಮಾರ್ ಪುಣ್ಯಭೂಮಿ ಆವರಣದಲ್ಲಿ ಯೋಗ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಜೇನುಗೂಡು’ ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಲನಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ತಲಾ 20 ಲಕ್ಷ ರೂ. ಮತ್ತು ಕಥಾ ಲೇಖಕರಿಗೆ ತಲಾ 5 ಲಕ್ಷ ರೂ.ಗಳ ವಿಶೇಷ ಸಹಾಯಧನವನ್ನು ಪ್ರತಿ ವರ್ಷ 8 ಚಲನಚಿತ್ರಗಳಿಗೆ ನೀಡಲಾಗುತ್ತದೆ. ಒಟ್ಟಾರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 239 ಕೋಟಿ ರೂ.ಗಳನ್ನು ಈ ಬಾರಿ ಒದಗಿಸಲಾಗಿದೆ.Life insurance guarantee upto Rs. 5 Lakhs to journalists’ families

Leave A Reply

 Click this button or press Ctrl+G to toggle between Kannada and English

Your email address will not be published.