ಉತ್ತಮ ಸಮಾಜಕ್ಕಾಗಿ

ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳ ನಗರದಲ್ಲಿ ರಚನೆಯಾಗಿದೆ

news belagavi

0

ಬೆಳಗಾವಿ:(news belagavi) ನೂತನ ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳ ನಗರದಲ್ಲಿ ರಚನೆಯಾಗಿದೆ ಎಂದು
ಪ್ರವೀಣ ಅಗಸಗಿ & ವಿಜಯ ಜಾಧವ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಗಣೇಶೋತ್ಸವ ಮಂಡಳಿ ಅವರಿಗೆ ಆಡಳಿತದಿಂದ ಹಲವು ಅನುಮತಿ ಪಡೆಯಲು ಸಂಕಷ್ಟವಾಗುತ್ತಿದೆ. ಇದರಿಂದ ನೂತನ ಗಣೇಶೋತ್ಸವ ಮಹಾಮಂಡಳವೇ ಸುಮಾರು 170 ಮಂಡಳಗಳನ್ನು ಸೇರಿಸಿಕೊಂಡು ಉತ್ಸವ ನಡೆಸಲು ಉದ್ದೇಶಿಸಿದೆ. ಸಿಂಗಲ್ ವಿಂಡೊ ಸಿಸ್ಟಮ್ ಸೂಕ್ತವಾಗಿ ಸ್ಪಂದಿಸಿದರೂ ಕೆಲವು ಅಧಿಕಾರಿ ಸಿಬ್ಬಂಧಿ ಸಕಾಲಕ್ಕೆ ಸಿಗುತ್ತಿಲ್ಲ. ಗಣೆಶೋತ್ಸವ ಮಂಡಳ ಮತ್ತು ಆಡಳಿತದ ನಡುವೆ ಕೊಂಡಿಯಾಗಲು ಈ ಮಂಡಳ ಸ್ಥಾಪಿಸಲಾಗಿದ್ದು ಆಡಳಿತದೊಂದಿಗೆ ಅನ್ಯೋನ್ಯತೆ ಸಾಧಿಸುವ ಗುರಿ ಹೊಂದಲಾಗಿದೆ ಎಂದರು. ಒಟ್ಟು 354 ಮಂಡಳಗಳ ಪೈಕು 170 ಮಂಡಳಗಳು ನಮ್ಮೊಂದಿಗಿವೆ ಎಂದರು.
ರಾಜು ಚಿಕ್ಕನಗೌಡ್ರ,ರಾಕೇಶ ಕೊಂಗಳ, ಗಿರೋಶ ಧೋಂಗಡಿ, ವಿಜಯ ಭೋಸಲೆ, ನ್ಯಾಯವಾದಿ ದೇವರಾಜ ಬಸ್ತವಾಡೆ, ಪವಣ ಅಗಸಗಿ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.