ಉತ್ತಮ ಸಮಾಜಕ್ಕಾಗಿ

ಪ್ರೀತಿಸಿ ಬಂದವಳು, ಕೊಲೆಯಾದಳು

news

0

ಬೆಳಗಾವಿ: (news belgaum)ಪ್ರೀತಿಸಿ ಮದುವೆಯಾಗಿ ಬಂದಿದ್ದ ಯುವತಿಯನ್ನು ಕ್ರೂರ ಪತಿ ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕು ಬೆಳವಡಿ ಗ್ರಾಮದಲ್ಲಿ ನಡೆದಿದೆ. ಸುಮಾ ಅಬ್ಬಾರ (21) ಮೃತ ದುರ್ದೈವಿ. ಸುಮಾ ಪತಿ ಯುವರಾಜ ತನ್ನ ಕುಟುಂಬ ಸದಸ್ಯರ ಜತೆ ಶುಕ್ರವಾರ ತಡರಾತ್ರಿ ಸುಮಾಳ ಮೇಲೆ ಹಲ್ಲೆ ನಡೆಸಿದ್ದ, ಕತ್ತು ಹಿಸುಕಿ ಕೊಲೆ ಮಾಡಿದ್ದರು ಎನ್ನಲಾಗಿದೆ.
ಮೃತ ಸುಮಾಳ ಪತಿ ಯುವರಾಜ, ಮಾವ ಬಸಪ್ಪ ಅಬ್ಬಾರ, ಅತ್ತೆ ಮಹಾದೇವಿ ಅಬ್ಬಾರ, ಮೈದುನ ವೀರಣ್ಣ ಹಾಗೂ ಯಲ್ಲಪ್ಪ ಅಬ್ಬಾರ ಪರಾರಿಯಾಗಿದ್ದಾರೆ. ದೊಡವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಶೋಧ ನಡೆದಿದೆ.ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.