ಉತ್ತಮ ಸಮಾಜಕ್ಕಾಗಿ

26ರಂದು ಮಧ್ವಾಚರ್ಯರ ಮಧ್ವನವಮಿ ಮಹೋತ್ಸವ

Madhvacharya's Madnavami Jubilee on 26th

0

ಬೆಳಗಾವಿ:(tarunkranti) ಇಲ್ಲಿ ರೇಲ್ವೆ ಸೇತುವೆ ಬಳಿ ಇರುವ ಸುಪ್ರಸಿದ್ಧ ರಾಘವೇಂದ್ರ ಸ್ವಾಮಿಗಳ ನವವೃಂದಾವನದ ಸನ್ನಿಧಿಯಲ್ಲಿ ವಿದ್ಯಾಪೀಠ ಮತ್ತು ವಿದ್ಯಾವಿಹಾರ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ರಾಘವೇಂದ್ರ ಸ್ವಾಮಿಗಳು ಸೇರಿದಂತೆ ಯತಿವರೇಣ್ಯರ ಮಹಾಗುರುಗಳಾದ ಮದಾನಂದ ತೀರ್ಥರೆಂದು ಜಗದ್ವಿಖ್ಯಾತರಾದ ಮಧ್ವಾಚಾರ್ಯರ ಮಧ್ವನವಮಿ ಮಹೋತ್ಸವವನ್ನು ಜನೇವರಿ 26ರಂದು ಶುಕ್ರವಾರದಂದು ವಿಜೃಂಭಣೆಯಿಂದ ಆಚರಿಸಲಾಗುವುದು.
ಅವರಿಗೆ ಅತಿ ಮುಖ್ಯವಾದ ಪ್ರೀತಿಕರವಾದ ಮಹಾಗ್ರಂಥಗಳ ಪಾರಾಯಣ, ಪ್ರವಚನ ಪಾಠ ಮೊದಲಾದವುಗಳು ಇದೀಗ ಪ್ರಾರಂಭವಾಗಿದ್ದು, ಮಧ್ವಾಚಾರ್ಯರ ಅಲೌಕಿಕ ಜೀವನ ಚರಿತ್ರೆ ಇಂದಿನ ಯುಗದಲ್ಲಿ ಅವರ ಗ್ರಂಥಗಳ, ಉಪದೇಶಗಳ ಅನುಷ್ಠಾನದ ಅವಶ್ಯಕತೆ ಕುರಿತು ವಿಶೇಷ ಪ್ರವಚನ, ಕುಲಪತಿ ಪಂಡಿತ ವಿಜಯಿಂದ್ರ ಶರ್ಮಾರಿಂದ ಜರುಗುವುದು.
ಎಲ್ಲರೂ ಸಕಾಲದಲ್ಲಿ ಆಗಮಿಸಲು ಹಾಗೂ ಸೇವೆ ಸಲ್ಲಿಸಲು ವಿನಂತಿ. ವಿಶೇಷ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 0831-2426695 ಸಂಪರ್ಕಿಸಲು ಕೋರಲಾಗಿದೆ.

belgaum Madhvacharya’s Madnavami Jubilee on 26th

Leave A Reply

 Click this button or press Ctrl+G to toggle between Kannada and English

Your email address will not be published.