ಉತ್ತಮ ಸಮಾಜಕ್ಕಾಗಿ

ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲರು ಇಂದು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’

Maharashtra border minister, Chandrakanta Patil, who is born today, should be born in Kannada.

0

ಬೆಳಗಾವಿ: (tarun kranti) ಜಿಲ್ಲೆಯ ನೆಲದಲ್ಲಿ ಮಹಾರಾಷ್ಟ್ರದ ಹಿರಿಯ ಸಚಿವರು ವರನಟ ಡಾ. ರಾಜಕುಮಾರ್ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹಾಡಿ ಭಾಷಾ ಸೌಹಾರ್ಧತೆ ಹಾಗೂ ಸಹೋದರತೆ ಮೆರೆದಿದ್ದಾರೆ.
ಎಮ್ ಇ ಎಸ್ ನಾಯಕರು ನಂಬಿದ್ದ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲರು ಇಂದು ಆ
ಎಮ್ ಇ ಎಸ್ ಗೆ ಮರ್ಮಾಘಾತ ನೀಡಿದ್ದಾರೆ! ಗಡಿ ವಿವಾದ ಸಂಬಂಧ ವ್ಯವಹರಿಸಲು ಮಹಾರಾಷ್ಟ್ರ ಸರಕಾರ ಕೊಲ್ಹಾಪುರದ ಸಚಿವ ಚಂದ್ರಕಾಂತ ಪಾಟೀಲರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತ್ತು. ಎಮ್ ಇ ಎಸ್ ನಾಯಕರು ಅತ್ತೂ ಕರೆದು ಸಚಿವರ ಬೆನ್ನು ಹತ್ತಿ ಹಲವಾರು ಸಭೆಗಳನ್ನು ಮಾಡಿದ್ದರು. ದಿಲ್ಲಿಗೆ ಹೋಗಿ ಫೋಟೊ ತೆಗೆಸಿಕೊಂಡಿದ್ದರು. ಇನ್ನೇನು ಬೆಳಗಾವಿ ಮಹಾರಾಷ್ಟ್ರಕ್ಕೆ ಸಿಕ್ಕೇ ಬಿಡ್ತು ಎನ್ನುವ ರೀತಿಯಲ್ಲಿ ಬೀಗಿದ್ದರು.

ಗೋಕಾಕ ತಾಲೂಕಿನ ತವಗ ಗ್ರಾಮದ ದುರ್ಗಾದೇವಿ ಮಂದಿರದ ಉದ್ಘಾಟನೆಗಾಗಿ ಸಚಿವ ರಮೇಶ ಜಾರಕಿಹೊಳಿ ಜತೆಗೆ ಅತಿಥಿಯಾಗಿ ಆಗಮಿಸಿದ್ದ ಚಂದ್ರಕಾಂತ ಪಾಟೀಲರು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರಲ್ಲದೇ ರಾಜಕುಮಾರ ಅವರ ” ಆಕಸ್ಮಿಕ” ಚಿತ್ರದ ಜನಪ್ರಿಯ ಹಾಡು “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡು ಹಾಡಿದಾಗ ಅಲ್ಲಿ ಸೇರಿದ್ದ ಸಾವಿರಾರು ಜನ ಕಿವಿಗಡಚಿಕ್ಕುವಂತೆ ಕೇಕೆ ಹಾಕಿ ಚಪ್ಪಾಳೆ ತಟ್ಟಿದರು. ಸಚಿವ ಪಾಟೀಲರು ತಮ್ಮ ಭಾಷಣದಲ್ಲಿ ಕನ್ನಡ ಮರಾಠಿ ಭಾಷಿಕರ ನಡುವಣ ಸೌಹಾರ್ದ ಸಂಬಂಧವನ್ನು ಒತ್ತಿ ಹೇಳಿದ್ದು ವಿಶೇಷವಾಗಿತ್ತು.

(belgaum)Maharashtra border minister, Chandrakanta Patil, who is born today, should be born in Kannada.

Leave A Reply

 Click this button or press Ctrl+G to toggle between Kannada and English

Your email address will not be published.