ಉತ್ತಮ ಸಮಾಜಕ್ಕಾಗಿ

ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಉದ್ಘಾಟಿಸಿದರು.

Maharishi Ananda Guruji, founder of Ananduddith Peeth, inaugurated the program.

0

ಬೆಳಗಾವಿ: (news belgaum)ಬುಧವಾರ ನಡೆದ ಶಾಂಡಿಲ್ಯ ಮಹಾಸ್ವಾಮೀಜಿಯವರ ಪ್ರಥಮ ಪೂಣ್ಯಾರಾಧನೆ ಕಾರ್ಯಕ್ರಮವನ್ನು 28 ಅವರೊಳ್ಳಿ 1 ಖಾನಾಪೂರ ತಾಲೂಕಿನ ಅವರೊಳ್ಳಿ- ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಉದ್ಘಾಟಿಸಿದರು. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಶಿವಾಚಾರ್ಯ ಮಹಾಸ್ವಾಮೀಜಿ, ರುದ್ರಸ್ವಾಮಿ ಮಠಾದೀಶ ಚನ್ನಬಸವ ದೇವರು ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಕ್ತಿ ಮಠದ ಶಿವಸಿದ್ದಸೋಮೇಶ್ವರ ಮಹಾಸ್ವಾಮೀಜಿ, ಮಾರುತಿ ಮಹಾರಾಜರು ಇದ್ದರು. ಚಿತ್ರ 2 ಮಹರ್ಷಿ ಆನಂದ ಗುರೂಜಿ ಆಶೀರ್ವಚನ ನೀಡಿದರು. ಚಿತ್ರ 3: ಅವರೊಳ್ಳಿಯ ರುದ್ರಸ್ವಾಮಿ ಮಠಾದೀಶ ಚನ್ನಬಸವ ದೇವರು ಸ್ವಾಮೀಜಿಯವರನ್ನು ಮಹರ್ಷಿ ಆನಂದ ಗುರೂಜಿ ಸತ್ಕರಿಸಿದರು. ಚಿತ್ರ 4 : ಮಠ ಹೊರ ತಂದ ಕ್ಯಾಲೆಂಡರ ಹಾಗೂ ಕಿರುಹೊತ್ತಿಗೆಯನ್ನು ಮಹರ್ಷಿ ಆನಂದ ಗುರೂಜಿ ಬಿಡುಗಡೆಗೊಳಿಸಿದರು.
ಅವರೊಳ್ಳಿಯಲ್ಲಿ ಶಾಂಡಿಲ್ಯ ಮಹಾಸ್ವಾಮೀಜಿಯರ ಪ್ರಥಮ ಪುಣ್ಯಾರಾಧನೆ
ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಉದ್ಘಾಟಿಸಿದರು.- Tarun kranti ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಉದ್ಘಾಟಿಸಿದರು.- Tarun kranti 1ಶಾಂಡಿಲ್ಯ ಸ್ವಾಮೀಜಿ ನೀಡಿದ ಸಂಸ್ಕಾರದ ಬದುಕು ಸಾಗಿಸಿ ಉತ್ತಮ ಸಮಾಜ ನಿರ್ಮಿಸಿ
ಅಳ್ನಾವರ : ಅವರೊಳ್ಳಿ ಮಠದ ಆರಾಧಕರಾಗಿದ್ದ ಕಾಲದಲ್ಲಿ ಶಾಂಡಿಲ್ಯ ಮಹಾರಾಜರು ಭಕ್ತರ ಒಳಿತಿಗೆ ಧರ್ಮದ ಮಾರ್ಗ ಅನುಸರಿಸಲು ದರ್ಮ ಪರ ಚಿಂತನೆ ಅಳವಡಿಸಕೊಳ್ಳಲು ಬೋದಿಸಿದ್ದರು. ಅವರು ಹಾಕಿಕೊಟ್ಟ ಮಠದ ಪರಂಪರೆ , ಪದ್ದತಿಯನ್ನು ನಡೆಸಿಕೊಂಡು ಹೋಗಬೇಕು. ಶಾಂಡಿಲ್ಯ ಸ್ವಾಮೀಜಿ ನೀಡಿದ ಸಂಸ್ಕಾರದ ಬದುಕು ಸಾಗಿಸಿ ಉತ್ತಮ ಸಮಾಜ ನಿರ್ಮಿಸಿ ಎಂದು ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಹೇಳಿದರು.
ಖಾನಾಪೂರ ತಾಲೂಕಿನ ಅವರೊಳ್ಳಿ- ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬುಧವಾರ ನಡೆದ ಶಾಂಡಿಲ್ಯ ಮಹಾಸ್ವಾಮೀಜಿಯವರ ಪ್ರಥಮ ಪುಣ್ಯಾರಾಧನೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಆಶೀರ್ವಚನ ನೀಡಿ, ಗುರುಗಳ ಮಾರ್ಗದರ್ಶನ ಪ್ರತಿಯೊಬ್ಬರಿಗೂ ಅವಶ್ಯ. ತಾಳ್ಮೆಯ ಕಾಯಕಕ್ಕೆ ಯಶಸ್ಸು ಸಾಧ್ಯ ಎಂದರು.
ಈ ಮಠದ ಉದ್ದಾರಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ಶ್ರಮಿಸುತ್ತಿರುವ ಚನ್ನಬಸವ ದೇವರು ಸಾಮೀಜಿಯವರಿಗೆ ತಂದೆ ಶಾಂಡಿಲ್ಯ ಸ್ವಾಮೀಜಿವರ ಆಶೀರ್ವಾದ ಸದಾ ಇರಲಿ. ಮಠದ ಪರಂಪರೆಯಿಂದ ರೈತರ ಬದುಕು ಹಸನಾಗಲಿ. ಬರುವ ವರ್ಷದಲ್ಲಿ ಮಠದ ಹೊಸ ಗದ್ದುಗೆ ತಯಾರಾಗಲಿ ಎಂದು ಆಶಿಸಿ ತಾವು ವ್ಯಯಕ್ತಿಕ ಕಾಣಿಕೆ ನೀಡಿದರು.
ಸಾನಿಧ್ಯ ವಹಿಸಿದ್ದ ಮುಕ್ತಿ ಮಠದ ಶಿವಸಿದ್ದಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಿಸ್ವಾರ್ಥದ ಜೀವನ ಸಾಗಿಸಿದ ಸರಳ ವ್ಯಕ್ತಿತ್ವದ ಶಾಂಡಿಲ್ಯ ಸ್ವಾಮೀಜಿ ಮಠದಲ್ಲಿ ಬೆಳೆಸಿದ ಸಂಸ್ಕಾರದ ಹೆಜ್ಜೆ ಗುರುತು ಮುಂದಿನ ಪೀಳಿಗೆಗೆ ದಿಕ್ಸೊಚಿಯಾಗಿವೆ. ಅವರ ತತ್ವ ಹಾಗೂ ಸಿದ್ದಾಂತಗಳು ಭಕ್ತರ ಮನಸ್ಸಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ. ಪುಣ್ಯಾರಾಧನೆ ಮೂಲಕ ಅವರನ್ನು ನನೆಯುವ ಕಾರ್ಯ ಸ್ತುತ್ಯಾರ್ಹವಾದದ್ದು. ಬದುಕಿನಲ್ಲಿ ಅಹಂಕಾರದ ಭಾವನೆ ತೊರೆದು ಶಾಂಡಿಲ್ಯ ಸ್ವಾಮೀಜಿಯವರು ಪ್ರತಿಪಾದಿಸಿದ ಸರಳ ಜೀವನ ಪದ್ದತಿ ರೂಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರ ಹಾಗೂ ಸ್ವಾಮೀಜಿವರ ಸತ್ಕಾರ ನಡೆಯಿತು. ಮಠದ ವತಿಯಿಂದ ಹೊರ ತಂದ ಕ್ಯಾಲೆಂಡರ ಹಾಗೂ ಕಿರು ಹೊತ್ತಿಗೆ ಬಿಡುಗಡೆ ನಡೆಯಿತು. ಭಕ್ತಿ ಗೀತೆಗಳ ಸಿಂಚನ ನೆರೆದವರ ಮನ ತಣಿಸಿತು. ಮಠದ ಆರಾಧಕ ಚನ್ನಬಸವ ದೇವರು ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಬರುವ ವರ್ಷ ದೇಸಕ್ಕಾಗಿ ಜೀವನ ಮುಡುಪಿಟ್ಟ ಖಾನಾಪೂರ ತಾಲೂಕಿನ ಎಲ್ಲ ಸೈನಿಕರನ್ನು ಸತ್ಕರಿಸುವ ಚಿಂತನೆ ಇದೆ ಎಂದರು.
ಹಿರೇಮುನವಳ್ಳಿಯ ಶಂಭುಲಿಂಗ ಸ್ವಾಮೀಜಿ, ಉಗರಕೋಡದ ಚನ್ನಬಸವ ಮಹಾಸ್ವಾಮೀಜಿ, ಮುತ್ನಾಳದ ಶಿವಾನಂದ ಸ್ವಾಮೀಜಿ, ಹಿರೇಬಾಗೇವಾಡಿಯ ನಿಶ್ವಲಸ್ವರೂಪ ಮಹಾಸ್ವಾಮೀಜಿ, ಅರಳಿಕಟ್ಟಿಯ ಶಿವಮೂರ್ತಿ ಮಹಾಸ್ವಾಮೀಜಿ, ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿ, ಚಂಬಯ್ಯ ಸ್ವಾಮೀಜಿ, ನಾಗಯ್ಯಾ ಸ್ವಾಮೀಜಿ, ಮಾರುತಿ ಮಹಾರಾಜರು, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಶಂಕರ ಹೋಳಿ, ಗುರುಲಿಂಗ ಸ್ವಾಮೀಜಿ, ಶ್ರೀಧರ ಅಳೋನಿ, ಯಶವಂತ ಕೊಡಳ್ಳಿ, ಮಹಾಬಳೇಶ್ವರ ಚವಡಗಿ ಮತ್ತಿತರು ಇದ್ದರು.
ಬೆಳಿಗ್ಗೆ ಮಠದ ಆವರಣದಲ್ಲಿ ಹಲವಾರು ಧಾರ್ಮಿಕ ಕೈಂಕರ್ಯಗಳು ಸಕಲ ಧಾರ್ಮಿಕ ವಿಧಿ ವಿದಾನಗಳಿಂದ ನೇರವೇರಿಸಲಾಯಿತು. ಅಷ್ಟದೃವ್ಯ ಮಹಾಲಕ್ಷ್ಮಿ ಹೋಮ್, ನವಗೃಹ ದೋಶ ಪರಿಹಾರ ಶಾಂತಿ ಮತ್ತು ಸರ್ಪ ಶಾಂತಿ ಪೂಜೆ ನಡೆಯಿತು. ಗೋಕರ್ಣದ ಮನೋಜ ಬಟ್ ಅವರು ಹೋಮ್ ನಡೆಸಿಕೊಟ್ಟರು. ಸಂಜೆ ಸಾಂಸ್ಕøತಿಕ ಕಾರ್ಯಕ್ರಗಳು ಭಕ್ತರ ಮನ ತಣಿಸಿದವು. ಡಾ. ಪ್ರಕಾಶ ಮಲ್ಲಿಗವಾಡ ತಂಡದ ಜಾನಪದ ನೃತ್ಯ ಗಮನ ಸೆಳೆದವು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಭರತ ನಾಟ್ಯ, ಯಕ್ಷಗಾನ, ಚಂಡಿವಾದ್ಯ ವಿವಿಧ ಕಾರ್ಯಕ್ರಮಗಳು ನಡೆದವು.Maharishi Ananda Guruji, founder of Ananduddith Peeth, inaugurated the program.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.