ಉತ್ತಮ ಸಮಾಜಕ್ಕಾಗಿ

ಮಹಾಯೋಗಿ ವೇಮನ ಜಯಂತಿ

ವೇಮನರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: - ಸಿಇಒ ರಾಮಚಂದ್ರನ್

0

ಬೆಳಗಾವಿ:( tarun kranti ) ಮಹಾಯೋಗಿ ವೇಮನ ಅವರು ಪ್ರತಿಯೊಬ್ಬರಲ್ಲೂ ಮಾನವೀಯತೆಯನ್ನು ಬಯಸಿದವರು. ವೇಮನರು ಸರಳ ಜೀವನವನ್ನು ನಡೆಸಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್.ಆರ್ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇಮನರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.
ಸರ್ವರಿಗೂ ಸಮಬಾಳು, ಸಮಪಾಲು ಎಂಬ ಉದ್ದೇಶದಿಂದ ಸರ್ಕಾರದಿಂದ ಮಹಾಯೋಗಿ ವೇಮನ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಮಾಜ ಸುಂದರವಾಗಿರಲು ಪ್ರತಿಯೊಬ್ಬರೂ ಕೈಜೋಡಿಸುವುದು ಅಗತ್ಯ. ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಶರಣ ಸಾಹಿತಿಗಳಾದ ಪ್ರೊ. ಸಿದ್ದಣ್ಣ ಲಂಗೋಟಿ ಅವರು ಉಪನ್ಯಾಸ ನೀಡಿ, ಮಹಾಯೋಗಿ ವೇಮನರನ್ನು ಕನ್ನಡಕ್ಕೆ ಮೊಟ್ಟ ಮೊದಲು ಪರಿಚಯಿಸಿದವರು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು. ನಂತರ ಇಂಜಿನಿಯರ ಹಾಗೂ ಸಾಹಿತಿಗಳಾದ ಎಸ್.ಆರ್. ಪಾಟೀಲ ಹಾಗೂ ಡಾ. ನೀಲಗುಂದ ಅವರು ವೇಮನ ಅವರ ಕುರಿತು ಸಂಶೋಧನೆ ಹಾಗೂ ಪುಸ್ತಕವನ್ನು ಪ್ರಕಟಿಸುವ ಮೂಲಕ ವೇಮನರನ್ನು ನಾಡಿನ ಸಮಸ್ತರಿಗೂ ಪರಿಚಯವಾಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಭೂಮಿಯ ಮೇಲೆ ಎಲ್ಲರಿಗೂ ಚಾರಿತ್ರ್ಯದ ಬದುಕು ಇರುವುದಿಲ್ಲ. ಅದು ಕೆಲವೇ ಕೆಲವರಿಗೆ ಮಾತ್ರ ಇರುತ್ತದೆ. ಅಂತವರು ಮಹಾತ್ಮರಾಗಿ ಬದುಕು ನಡೆಸಿ ಹೋಗಿದ್ದಾರೆ ಎಂದರು.
ವೇಮನ ಅವರು 1412ನೇ ಇಸ್ವಿಯಲ್ಲಿ ಜನಿಸಿದ್ದರೆ. ಆದರೆ ಕೆಲವು ದಿನಪತ್ರಿಕೆಗಳ ಜಾಹೀರಾತು ಹಾಗೂ ಇನ್ನಿತರ ಕಡೆ 17ನೇ ಶತಮಾನ ಎಂದು ಮುದ್ರಿಸಲಾಗಿದೆ ಎಂದು ಹೇಳಿದರು.
ವೇಮನರ ನಿಜವಾದ ಗುರು ಅವರ ಅತ್ತಿಗೆಯಾದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರಾಗಿದ್ದಾರೆ ಎಂಬುದು ಇತಿಹಾಸದ ಸಂಶೋಧನೆಯಿಂದ ನಮಗೆ ತಿಳಿದು ಬರುತ್ತದೆ ಎಂದು ಅವರು ತಿಳಿಸಿದರು.
ವೇಮನರ ತತ್ವದರ್ಶನ, ಯೋಗದರ್ಶನ ಹಾಗೂ ಅಧ್ಯಾತ್ಮ ದರ್ಶನದಿಂದ ಅವರು ಇಂದು ಇಡೀ ಜಗತ್ತಿಗೆ ಪರಿಚಯವಾಗಿದ್ದಾರೆ. ದೇಶದಲ್ಲಿರುವ ಜ್ಞಾನದಿಂದ ಭಾರತ ಇಡೀ ವಿಶ್ವಕ್ಕೆ ಗುರುವಾಗಲು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾಯೋಗಿ ವೇಮನರ ಜಯಂತಿಯನ್ನು ಸರ್ಕಾರದಿಂದ ಪ್ರಥಮ ಬಾರಿಗೆ ಈ ವರ್ಷದಿಂದ ಆಯೋಜಿಸಲಾಗುತ್ತಿದೆ. ಇದು ಸಂತಸದ ಸಂಗತಿ ಎಂದು ಹೇಳಿದರು.
ಸಿಸಿಎಫ್ ಉದಪುಡಿ, ಡಾ|| ಶ್ವೇತಾ ಸೋನವಾಲಕರ, ತುಳಸಾ ಪಾಟೀಲ, ಟಿ.ಕೆ. ಪಾಟೀಲ. ಬಿ.ಎನ್. ನಾಡಗೌಡ, ಬಸವರಾಜ ಬಾವಲತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀಮತಿ ಸುನಿತಾ ಪಾಟೀಲ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಶ್ರೀಮತಿ ಅಂಜನಾ ಮತ್ತು ಭಾರತಿ ಅವರು ವೇಮನ ಗೀತೆ ಹಾಡಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ಅವರು ನಿರೂಪಿಸಿದರು.

ಅದ್ಧೂರಿ ಮೆರವಣಿಗೆ:
ಮಹಾಯೋಗಿ ವೇಮನ ಜಯಂತಿ- Tarun kranti 1ಕಾರ್ಯಕ್ರಮಕ್ಕೂ ಮುಂಚೆ ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್.ಆರ್. ಅವರು ಮಹಾಯೋಗಿ ವೇಮನ ಅವರ ಭಾವಚತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ಮಹಾಯೋಗಿ ವೇಮನರ ಭಾವಚಿತ್ರದ ಭವ್ಯ ಮೆರವಣಿಗೆಯು ಚನ್ನಮ್ಮ ವೃತ್ತ, ಜಿಲ್ಲಾಸ್ಪತ್ರೆ, ಕೃಷ್ಣದೇವರಾಯ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ಸಮಾಜದ ಮುಖಂಡರು ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

belgaum news     Mahayogi Vemana Jayanti

Leave A Reply

 Click this button or press Ctrl+G to toggle between Kannada and English

Your email address will not be published.