ಉತ್ತಮ ಸಮಾಜಕ್ಕಾಗಿ

ಕಡ್ಡಾಯ ಮತದಾನ ನಮ್ಮ ಪರಮಾಧಿಕಾರ: ಸಿಇಓ ಆರ್. ರಾಮಚಂದ್ರನ್ ಜನತೆಗೆ ಕರೆ

Mandatory Voting Our Dominion: CEO R. Ramachandran calls for people

0

ಬೆಳಗಾವಿ:(news belagavi) ಇಂದು ಯುವ ಮತದಾರರ *’ಮಿಂಚಿನ ನೊಂದಣಿ’* ವಿಶೇಷ ಅಭಿಯಾನ ನಡೆದಿದ್ದು ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಜಿಲ್ಕಾ ಸ್ವೀಪ್ ಸಮಿತಿ ಅಧ್ಯಕ್ಷ ಆರ್. ರಾಮಚಂದ್ರನ್ ಬೆಳಗಾವಿ ನಗರ ಹಾಗೂ ಗ್ರಾಮೀಣ ಜಿಲ್ಲೆಯ ಹಲವು ಕಡೆ ಮತಗಟ್ಟೆವಾರು ಪರಿಶೀಲನೆ ನಡೆಸಿದರು.
ಭಾನುವಾರ ಸಹ ಜಿಲ್ಲಾ ಆಡಳಿತಯಂತ್ರ ಚುನಾವಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಇಂದು ಸಿಇಓ ಆರ್. ರಾಮಚಂದ್ರನ್ ಭಾನುವಾರ ನಗರದ ವಿಶ್ವೇಶ್ವರಯ್ಯ ನಗರ, ಸದಾಶಿವ ನಗರ, ಹನುಮಾನ ನಗರ, ಗಾಂಧಿನಗರ, ಮಾರಿಹಾಳ 171 ರಿಂದ 175ರ ವರೆಗೆ ಹಾಗೂ ಸಾಂಬ್ರಾ, ಕರಡಿಗುದ್ದಿ, ನೇಸರಗಿ, ಗೋಕಾಕ, ಬೈಲಹೊಂಗಲ ಸೇರಿ ಜಿಲ್ಲೆಯ ವಿವಿಧ ಭಾಗಗಳ ದೊಡ್ಡ ಮತ್ತು ಸೂಕ್ಷ್ಮ ಮತಗಟ್ಟೆಗಳ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಕಡ್ಡಾಯ ಮತದಾನ ನಮ್ಮ ಪರಮಾಧಿಕಾರ: ಸಿಇಓ ಆರ್. ರಾಮಚಂದ್ರನ್ ಜನತೆಗೆ ಕರೆ- Tarun krantiಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರಗಳನ್ನು ಅಧಿಕಾರಕ್ಕೆ ತರುವ ಅಧಿಕಾರ ಮತ್ತು ಜವಾಬ್ದಾರಿ ದೇಶದ ಪ್ರತಿ ನಾಗರಿಕರ ಪರಮಾಧಿಕಾರವಾಗಿದೆ. ಸರಕಾರಗಳ ಬಳಿ ನಾವು ಸೌಲಭ್ಯಗಳನ್ನು ಪಡೆಯುವಲ್ಲಿ ನ್ಯಾಯಬದ್ಧ ಅಧಿಕಾರ ನಮಗೆಲ್ಲರಿಗೂ ಹೇಗಿದೆಯೊ ಹಾಗೆಯೇ ಉತ್ತಮ ಜನಪ್ರತಿನಿಧಿಯೊಬ್ಬನನ್ನು ಆಯ್ಕೆ ಮಾಡುವ ಮಹತ್ತರ ಕರ್ತವ್ಯ ಮತ್ತು ಜವಾಬ್ದಾರಿ ನಮ್ಮದಾಗಿದೆ ಎಂದು ಆರ್. ರಾಮಚಂದ್ರನ್ ಕರೆ ನೀಡಿದರು. ಮೇ. 12 ರಂದು ನಡೆಯುವ ಮತದಾನದ ದಿನದಂದು ಎಲ್ಲ ನಾಗರಿಕರು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಿಇಓ ಜನತೆಗೆ ಮನವಿ ಮಾಡಿದರು.

ಮತಗಟ್ಟೆಗಳಲ್ಲಿ, ಮತಯಂತ್ರ ಅಳವಡಿಸುವ ಪ್ರಕ್ರಿಯೆ, ಕುಡಿಯುವ ನೀರು ವ್ಯವಸ್ಥೆ ಪರಿಶೀಲಿಸಿದರು.
ಜಿಪಂ. ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ,
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ ಮತ್ತು ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.