ಉತ್ತಮ ಸಮಾಜಕ್ಕಾಗಿ

ಮಾರಿಹಾಳ ಪೊಲೀಸ್ ಠಾಣೆ: ಇನ್ಸ್‍ಪೆಕ್ಟರ್‍ರಾಗಿ ವಿಜಯಕುಮಾರ ಸಿನ್ನೂರ ಅಧಿಕಾರ ಸ್ವೀಕಾರ

0

ಮಾರಿಹಾಳ ಪೊಲೀಸ್ ಠಾಣೆ: ಇನ್ಸ್‍ಪೆಕ್ಟರ್‍ರಾಗಿ ವಿಜಯಕುಮಾರ ಸಿನ್ನೂರ ಅಧಿಕಾರ ಸ್ವೀಕಾರ- Tarun kranti ಬೆಳಗಾವಿ : tarunkranti  ಮಾರಿಹಾಳ ಪೊಲೀಸ್ ಠಾಣೆ: ಇನ್ಸ್‍ಪೆಕ್ಟರ್‍ರಾಗಿ ವಿಜಯಕುಮಾರ ಸಿನ್ನೂರ ಅಧಿಕಾರ ಸ್ವೀಕಾರ ಸಮೀಪದ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಇನ್‍ಸ್ಪೆಕ್ಟರ್ ಎಂದು ಸೇವೆ ಸಲ್ಲಿಸುತ್ತಿದ್ದ ಜ್ಯೋತಿರ್ಲಿಂಗ ಹೊನಕಟ್ಟಿ ಅವರಿಗೆ ವರ್ಗಾವಣೆ ಆದ ನಿಮಿತ್ತ ತೆರವಾದ ಸ್ಥಾನಕ್ಕೆ ವಿಜಯಕುಮಾರ ಸಿನ್ನೂರ ಅವರು ಇನಸ್ಪೆಕ್ಟರ್ ಎಂದು ಜನೇವರಿ 12ರಂದು ಅಧಿಕಾರ ವಹಿಸಿ ಕೊಂಡಿದ್ದಾರೆ.
ಸಿನ್ನೂರ ಇವರು ಕೊಪ್ಪಳ ಜಿಲ್ಲೆ ಕೂಷ್ಟಗಿ ತಾಲೂಕಿನ ಮೂಲದವರಾಗಿದ್ದಾರೆ. ಎಮ್.ಎಸ್.ಸಿ.(ಅಗ್ರಿ) ಪದವಿ ಧಾರವಾಡದಲ್ಲಿ ಪೂರೈಸಿದ್ದಾರೆ. 2005ರಲ್ಲಿ ಪಿ.ಎಸ್.ಐ. ಎಂದು ಇಲಾಖೆಗೆ ಸೇರ್ಪಡೆಗೊಳ್ಳುತ್ತಾರೆ. ಗುಲ್ಬರ್ಗಾದಲ್ಲಿ ತರಬೇತಿ ಅವಧಿ ನಂತರ ಬೆಳಗಾವಿ,ಬಾಗೇವಾಡಿ,ಬೆಳಗಾವಿ ಸಂಚಾರ, ಕಾಗವಾಡಗಳಲ್ಲಿ ಸೇವೆ ಸಲ್ಲಿಸುತ್ತಾರೆ.
2015ರಲ್ಲಿ ಇನ್‍ಸ್ಪೆಕ್ಟರ್ ಎಂದು ಭಡ್ತಿ ಪಡೆದ ಇವರು ಬೆಂಗಳೂರು ಸಿ.ಐ.ಡಿ. ವಿಭಾಗದಲ್ಲಿ ಸೇವೆ ಸಲ್ಲಿಸಿ ಸದ್ಯ ಮಾರಿಹಾಳ ಠಾಣೆ ಇನ್‍ಸ್ಪೆಕ್ಟರ್ ಎಂದು ಅಧಿಕಾರ ವಹಿಸಿಕೊಂಡು ಸೇವೆ ಮುಂದುವರಿಸಿದ್ದಾರೆ.

belgaumnews  Marhiha police station: Vijayakumar Sinha takes charge as Inspector

Leave A Reply

 Click this button or press Ctrl+G to toggle between Kannada and English

Your email address will not be published.