ಉತ್ತಮ ಸಮಾಜಕ್ಕಾಗಿ

ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

Massive protest by anganwadi workers

0

ಬೆಳಗಾವಿ: (news belagaviಜಿಲ್ಲಾಧಿಕಾರಿ ಕಚೇರಿ ಸೋಮವಾರ ಬಣ್ಣಬಣ್ಣದ ಛತ್ರಿಗಳಿಗೆ ಮುತ್ತೆಗೆಗೊಳಗಾಯಿತು. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರು ಇಂದು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರಿಗೆ ಮನವಿ ಸಲ್ಲಿಸಿದರು.

ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ- Tarun kranti 3

ಸರಕಾರದ ಎಲ್ಲ ಅಭಿವೃದ್ಧಿ ಹಾಗೂ ಕ್ಷೇಮಕರ ಯೋಜನೆಗಳ ಅನುಷ್ಠಾನ ಅಂಗನವಾಡಿ ಮಟ್ಟದಲ್ಲೇ ಲಕ್ಷಾಂತರ ಜನರನ್ನು ತಲುಪುತ್ತಿವೆ. ಆದರೆ ಸರಕಾರ ಮಾತ್ರ ಅಂಗನವಾಡಿ ಕಾರ್ಯಕರ್ತರ ಯೋಗಕ್ಷೇಮ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ- Tarun kranti 2

ಬೇಡಿಕೆಗಳು:ಹೊಸ ಅಂಗನವಾಡಿ ತೆರೆದಾಗ, ಚಿಕ್ಕ ಅಂಗನವಾಡಿಗಳಿಗೆ ಆದ್ಯತೆ ನೀಡುವುದು. ಅಂಗನವಾಡಿ ಕೇಂದ್ರಕ್ಕೆ ಕಡ್ಡಾಯವಾಗಿ ಸಹಾಯಕಿಯರ ನೇಮಕ. ಅಂಗನವಾಡಿ ಕಾರ್ಯಕರ್ತರಿಗೆ ಕೂಡುವ ಸಂಬಳ ಸವಲತ್ತು ಇತರರಿಗೂ ನೀಡುವುದು. ಬಡ್ತಿ, ಹೆರಿಗೆ,ಅನಾರೋಗ್ಯ ರಜೆ ಸಿಗಬೇಕು. ಕನಿಷ್ಠ ವೇತನ ₹18ಸಾವಿರ ಜಾರಿ ಮಾಡಬೇಕು. ಮಾತೃಪೂರ್ಣ, ಮಾತೃವಂದನಾ ಕೆಲಸಗಳ ಹೊರೆ ಅತಿರೇಕವಾಗಿದ್ದು, ಹೆಚ್ಚುವರಿ ಗೌರವಧನ ನೀಡಬೇಕು. ಮಾತೃವಂದನಾ ಕಾರ್ಯಕ್ಕೆ ಪ್ರತಿ ಕಂತಿಗೆ ₹300 ಗೌರವಧನ ಕೊಡಿ. ಬಡ್ತಿ ಪಡೆಯಲು ಭೌಗೋಳಿಕ ವಿಸ್ತೀರ್ಣ ಕಡಿಮೆ ಮಾಡಿ. ನೇಮಕಾತಿಯಲ್ಲಿನ ಅನಾವಶ್ಯಕ ಗೊಂದಲ ಸರಿಪಡಿಸಬೇಕು. ಹೊಸ ನಿವೃತ್ತಿ ಯೋಜನೆಯ ಸದಸ್ಯರಿಗೆ ಪಾನ್ ಕಾರ್ಡ್ ವಿತರಿಸಿ. ಐದಾರು ತಿಂಗಳಿನ ನಿವೃತ್ತಿ ವೇತನ ಕೊಡಿಸಿ. ಹಲವಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸೇವಾ ನಿಯಮಾವಳಿಗಳನ್ನು ರಚಿಸಿ, ಕೇಂದ್ರ ಸರಕಾರ ಜಡಿತ ಮಾಡುದ ಅನುದಾನ ಮರಳಿ ಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಇಟ್ಟಿದ್ದಾರೆ.

ದೊಡ್ಡವ್ವ ಪೂಜಾರಿ, ಜೆ. ಎಂ. ಜೈನೆಖಾನ, ಗೋಧಾವರಿ ರಾಜಾಪುರೆ, ಸರಸ್ವತಿ ಮಾಳಶೆಟ್ಟಿ, ಪಾರ್ವತಿ ಸಾಲಿಮಠ, ವಿದ್ಯಾ ಕುಂಬಾರ, ಮನಿರಾ ಮುಲ್ಲಾ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: