ಉತ್ತಮ ಸಮಾಜಕ್ಕಾಗಿ

ಜಿಲ್ಲೆಯ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ: ಕಬ್ಬಿನ ಬಾಕಿ ಪಾವತಿಸಲು ಜಿಲ್ಲಾಧಿಕಾರಿ ಸೂಚನೆ

Meeting of District sugar factory representatives: District Collector to pay sugarcane balance

0

ಬೆಳಗಾವಿ: (news belagavi) 2017-18ನೇ ಸಾಲಿನಲ್ಲಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ತಕ್ಷಣವೇ ಎಫ್‍ಆರ್‍ಪಿ ಪ್ರಕಾರ ರೈತರಿಗೆ ಕಬ್ಬಿನ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ: ಕಬ್ಬಿನ ಬಾಕಿ ಪಾವತಿಸಲು ಜಿಲ್ಲಾಧಿಕಾರಿ ಸೂಚನೆ- Tarun kranti 1
2017-18ನೇ ಸಾಲಿನ ಕಬ್ಬಿನ ಬಿಲ್ ಬಾಕಿ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ  ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಜೂನ್ 6, 2018ರಂದು ಒಂದು ಸುತ್ತಿನ ಸಭೆ ನಡೆಸಿ ಬಾಕಿ ಹಣ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಅದಾದ ಬಳಿಕ ಅನೇಕ ಕಾರ್ಖಾನೆಗಳು ಬಾಕಿ ಹಣವನ್ನು ಪಾವತಿಸಿವೆ. ಕೆಲವು ಕಾರ್ಖಾನೆಗಳು ಮಾತ್ರ ಬಾಕಿ ಉಳಿಸಿಕೊಂಡಿದ್ದು, ಅವರುಕೂಡ ಕಾಲಮಿತಿಯೊಳಗೆ ಬಾಕಿ ಹಣ ಪಾವತಿಸಬೇಕು ಎಂದು ಹೇಳಿದರು.
ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರು ಸಂಕಷ್ಟದಲ್ಲಿದ್ದು, ಕಾರ್ಖಾನೆಗಳು ಇದನ್ನು ಅರಿತುಕೊಂಡು ಅವರಿಗೆ ಬಾಕಿ ಹಣ
ಪಾವತಿಸಬೇಕು; ಇಲ್ಲದಿದ್ದರೆ ಬಾಕಿ ಹಣ ವಸೂಲಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ
ಆಸ್ಪದ ನೀಡಬಾರದು ಎಂದು ತಿಳಿಸಿದರು. 6-6-2018ರವರೆಗೆ ಜಿಲ್ಲೆಯ 17 ಸಕ್ಕರೆ ಕಾರ್ಖಾನೆಗಳು ಒಟ್ಟು 56,898 ಲಕ್ಷ ರೂಪಾಯಿ  ಬಾಕಿ ಉಳಿಸಿಕೊಂಡಿದ್ದವು. ಸಭೆಯ ಬಳಿಕ ಇದುವರೆಗೆ ಒಟ್ಟಾರೆ 38,952 ಲಕ್ಷ ರೂಪಾಯಿ ಬಾಕಿ ಹಣವನ್ನು ರೈತರಿಗೆ ಪಾವತಿಸಿದ್ದು, ಇನ್ನೂ 17,946 ಲಕ್ಷ ರೂಪಾಯಿ ಬಾಕಿ ಉಳಿದಿದೆ ಎಂದು ಹೇಳಿದರು.

38,952 ಲಕ್ಷ ಬಾಕಿ ಮೊತ್ತ ಪಾವತಿ:                                                                                                                                 ಜಿಲ್ಲೆಯ 17 ಸಕ್ಕರೆ ಕಾರ್ಖಾನೆಗಳು ದಿನಾಂಕ 6-06-2018ರವರೆಗೆ ಒಟ್ಟು 56,898 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದವು. ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು, 6-06-2018ರಂದು ಕಾರ್ಖಾನೆ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿ, ಬಾಕಿ ಪಾವತಿಗೆ ಗಡುವು ನೀಡಿದ್ದರು. ಇದಾದ ಬಳಿಕ ಅನೇಕ ಕಾರ್ಖಾನೆಗಳು ಕಬ್ಬಿನ ಬಾಕಿ ಬಿಲ್ ಪಾವತಿಸುವ ಪ್ರಕ್ರಿಯೆ ಆರಂಭಿಸಿದ್ದು, 17 ಕಾರ್ಖಾನೆಗಳು ಇದುವರೆಗೆ ಒಟ್ಟು 38,952 ಲಕ್ಷ ರೂಪಾಯಿ ಬಾಕಿ ಪಾವತಿಸಿರುತ್ತವೆ.
ಇನ್ನು ಬಾಕಿ ಉಳಿದಿರುವ 17,946 ಲಕ್ಷ ರೂಪಾಯಿಗಳನ್ನು ಕಾರ್ಖಾನೆಗಳು ಕೇಳಿರುವ ಕಾಲಮಿತಿಯೊಳಗೆ ಪಾವತಿಸಬೇಕು
ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಾಕಿ ಉಳಿಸಿಕೊಂಡಿರುವ 17 ಕಾರ್ಖಾನೆಗಳ ಪೈಕಿ 1-ಶ್ರೀ ರೇಣುಕಾ ಶುಗರ್ಸ್, ಕೊಕಟನೂರ(5728 ಲಕ್ಷ) 2-ದೂದಗಂಗಾ
ಕೃಷ್ಣಾ ಎಸ್‍ಎಸ್‍ಕೆ ಲಿ. ನನದಿ(94 ಲಕ್ಷ) 3-ಸೋಮೇಶ್ವರ್ ಎಸ್‍ಎಸ್‍ಕೆ ಲಿ. ಸಿದ್ಧಸಮುದ್ರ (52 ಲಕ್ಷ) 4-ಶ್ರೀ ಭಾಗ್ಯಲಕ್ಷ್ಮೀ(ಲೈಲಾ) ಎಸ್‍ಎಸ್‍ಕೆ ಲಿ (244 ಲಕ್ಷ) 5-ಶಿವಶಕ್ತಿ ಶುಗರ್ಸ್, ರಾಯಬಾಗ (3463 ಲಕ್ಷ) 6-ರಾಯಬಾಗ ಎಸ್‍ಎಸ್‍ಕೆ ಲಿ.(ರೇಣುಕಾ) (548 ಲಕ್ಷ) 7-ಗೋಕಾಕ ಶುಗರ್ಸ್, ಕೊಳವಿ (2998 ಲಕ್ಷ) ಹೀಗೆ ಒಟ್ಟು ಏಳು ಕಾರ್ಖಾನೆಗಳು ಸಂಪೂರ್ಣ ಬಾಕಿ ಹಣವನ್ನು ಪಾವತಿ ಮಾಡಿರುತ್ತವೆ.

ಕಾಲಮಿತಿಯಲ್ಲಿ ಪಾವತಿಸಿ:
ಕಬ್ಬು ಅಭಿವೃದ್ಧಿ ಆಯುಕ್ತಾಲಯವು ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 17 ಕಾರ್ಖಾನೆಗಳಿಗೆ ನೋಟಿಸ್ ನೀಡಿತ್ತು . ಈ 17
ಕಾರ್ಖಾನೆಗಳ ಪೈಕಿ ಕೆಲವು ಕಾರ್ಖಾನೆಗಳು ಈಗಾಗಲೇ ಎಫ್‍ಆರ್‍ಪಿ ಪ್ರಕಾರ ಬಾಕಿ ಬಿಲ್ ಪಾವತಿಸಿರುತ್ತವೆ. ಇನ್ನುಳಿದ
ಕಾರ್ಖಾನೆಗಳು ತಾವು ಕೇಳಿರುವ ಕಾಲಾವಕಾಶದಂತೆ ಕಾಲಮಿತಿಯೊಳಗೆ ಬಾಕಿ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ
ಜಿಯಾವುಲ್ಲಾ ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಕಾರ್ಖಾನೆಗಳ ಪ್ರತಿನಿಧಿಗಳು, ಈಗಾಗಲೇ ರೈತರಿಗೆ ಬಾಕಿ ಹಣ ಪಾವತಿಸುವ ಪ್ರಕ್ರಿಯೆ ಆರಂಭಿಸಿದ್ದು, ಕಾಲಮಿತಿಯಲ್ಲಿ ಹಣ ಪಾವತಿಸುವುದಾಗಿ ತಿಳಿಸಿದರು. ಮುನವಳ್ಳಿಯ ರೇಣುಕಾ ಶುಗರ್ಸ್ ಪ್ರತಿನಿಧಿ ಮಾತನಾಡಿ, ಕಳೆದ ಸಭೆಯ ಬಳಿಕ ಇದುವರೆಗೆ 64 ಕೋಟಿ ರೂಪಾಯಿ ಬಾಕಿ ಹಣ ಪಾವತಿಸಿದ್ದು, ಉಳಿದ ಹಣ ಪಾವತಿಗೆ ಹದಿನೈದು ದಿನಗಳ ಕಾಲಾವಕಾಶ ಕೋರಿದರು.ಅದೇ ರೀತಿ ಹಾಲಸಿದ್ಧನಾಥ್ ಕಾರ್ಖಾನೆಯ ಪ್ರತಿನಿಧಿಯು ಎಂಟು ದಿನದಲ್ಲಿ ಬಾಕಿ ಪಾವತಿಸುವುದಾಗಿ ಸಭೆಯಲ್ಲಿ ತಿಳಿಸಿದರು. ಇದೇ ವೇಳೆ ಮಾತನಾಡಿದ ರೇಣುಕಾ ಶುಗರ್ಸ್, ಕೊಕಟನೂರ; ಸೋಮೇಶ್ವರ ಸಕ್ಕರೆ ಕಾರ್ಖಾನೆ, ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ಶಿರಗುಪ್ಪಿ ಶುಗರ್ಸ್, ಕೊಳವಿಯ ಗೋಕಾಕ ಶುಗರ್ಸ್ ಸೇರಿದಂತೆ ಕೆಲವು ಕಾರ್ಖಾನೆಗಳ ಪ್ರತಿನಿಧಿಗಳು ಬಾಕಿ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಹೇಳಿದರು.
ಅಥಣಿ ಫಾರ್ಮರ್ಸ ಲಿಮಿಟೆಡ್, ಉಗಾರ್ ಶುಗರ್ಸ್, ಸತೀಶ್ ಶುಗರ್ಸ್, ಘಟಪ್ರಭಾ ಎಸ್‍ಎಸ್‍ಕೆ ಲಿಮಿಟೆಡ್, ಮಲಪ್ರಭಾ
ಎಸ್‍ಎಸ್‍ಕೆ ಲಿಮಿಟೆಡ್, ಬೆಳಗಾವಿ ಶುಗರ್ಸ್ ಕಾರ್ಖಾನೆಯ ಪ್ರತಿನಿಧಿಗಳು 8 ರಿಂದ 15 ದಿನದೊಳಗೆ ಬಾಕಿ ಹಣ ಪಾವತಿಸುವುದಾಗಿ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು, ಕಾರ್ಖಾನೆಯವರು ತಾವು ಕೇಳಿದ ಕಾಲಮಿತಿಯೊಳಗೆ ರೈತರಿಗೆ ಬಾಕಿ ಹಣ ಪಾವತಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಮೊಖಾಶಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಕರಾದ ಸೈಯದ್ ಆಫ್ರಿನ್‍ಬಾನು ಬಳ್ಳಾರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.