ಉತ್ತಮ ಸಮಾಜಕ್ಕಾಗಿ

news :2ಲೇನ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Minister Nitin Gadkari inaugurated the 2 lay works ceremony

0

ಬೆಳಗಾವಿ:(news belgaum) ರಸ್ತೆಗಳ ಅಭಿವೃದ್ಧಿ ಮತ್ತು ನದಿಗಳ ಅಭಿವೃದ್ಧಿಯಿಂದ ಶಕ್ತಿಶಾಲಿ ದೇಶ ನಿರ್ಮಾಣ ಸಾಧ್ಯ ಎಂದು ರಸ್ತೆ ಸಾರಿಗೆ ಹೆದ್ದಾರಿಗಳು, ನೌಕಾಯನ ಜಲಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಕೇಂದ್ರ ಸರ್ಕಾರದ ಸಚಿವರಾದ ನಿತಿನ್ ಗಡ್ಕರಿ ಅವರು ಅಭಿಪ್ರಾಯ ಪಟ್ಟರು.
News Belgaum-ರಸ್ತೆ, ನದಿಗಳ ಅಭಿವೃದ್ಧಿಯಿಂದ ಶಕ್ತಶಾಲಿ ದೇಶ ನಿರ್ಮಾಣ ಸಾಧ್ಯ : ಕೇಂದ್ರ ಸಚಿವ ನಿತಿನ್ ಗಡ್ಕರಿಇಲ್ಲಿನ ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್‍ನಲ್ಲಿ ಸೋಮವಾರ (ಮಾರ್ಚ್ 19) ರಂದು ಆಯೋಜಿಸಿದ್ದ ರೂ. 900 ಕೋಟಿ ಹೂಡಿಕೆಯೊಂದಿಗೆ 30 ಕಿ.ಮೀ ಉದ್ದವನ್ನು ಒಳಗೊಂಡ ಎನ್ ಎಚ್ -4 (ಪ್ಯಾಕೇಜ-1) ರ 0+000 ಕಿ.ಮೀ. ದಿಂದ 30+800 ಕಿ.ಮೀ. ವರೆಗೆ ಬೆಳಗಾವಿ-ಖಾನಾಪೂರ ಸೆಕ್ಷನ್ ನ 4 ಲೇನ ನಿರ್ಮಾಣ ಮತ್ತು ರೂ. 500 ಕೋಟಿ ವೆಚ್ಚದಲ್ಲಿ 52 ಕಿ.ಮೀ ಉದ್ದದ ಎನ್ ಎಚ್ -4 (ಪ್ಯಾಕೇಜ-2) ರ ಖಾನಾಪೂರ ದಿಂದ ಕರ್ನಾಟಕ/ಗೋವಾ ಗಡಿವರೆಗಿನ 30+800 ಕಿ.ಮೀ. ದಿಂದ 70+800 ಕಿ.ಮೀ. ವರೆಗೆ ಹಾಸಿದ ಅಚ್ಚುಗಳೊಂದಿಗೆ 2ಲೇನ ನಿರ್ಮಾಣ ಮತ್ತು 70+800 ಕಿ.ಮೀ. ದಿಂದ 84+120 ಕಿ.ಮೀ. ವರೆಗೆ ಹಾಸಿದ ಅಚ್ಚುಗಳಿಲ್ಲದ 2ಲೇನ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ರಸ್ತೆಗಳನ್ನು ಉತ್ತಮ ಗುಣಮಟ್ಟದ ಸಿಮೆಂಟ್ ಕಾಂಕ್ರೀಟನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ ಇದರಿಂದ ಸುಮಾರು ಎರಡು ಮೂರು ತಲೆಮಾರಿನವರೆಗೂ ರಸ್ತೆಗಳು ಯಾವುದೇ ರೀತಿಯಿಂದ ಹಾಳಾಗುವುದಿಲ್ಲ ಎಂದು ಹೇಳಿದರು.
ದೇಶದ ಸಮಗ್ರವಾದ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಒಟ್ಟು 12 ಎಕ್ಸಪ್ರೆಸ್ ರಸ್ತೆಗಳನನ್ನು ನಿರ್ಮಾಣ ಮಾಡಲಾಗುತ್ತಿದೆ. ನೆಪಾಳ ಮತ್ತು ಚೀನಾ ಮಾರ್ಗವಾಗಿ ಹೊಸ ರಸ್ತೆಯನ್ನು ನಿರ್ಮಾಣಿಸಲು ಈಗಾಗಲೇ ಪ್ರಸ್ತಾವಣೆ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ನೀರಿನ ಸಮಸ್ಯೆಯನ್ನು ತಗ್ಗಿಸಲು ಸುಮಾರು 2 ಲಕ್ಷ ಕೋಟಿ ರೂ. ವೇಚ್ಚದಲ್ಲಿ ಸಮುದ್ರ ನೀರನ್ನು ಸುದ್ಧಿಕರಣ ಮಾಡಿ ಕುಡಿಯಲು ಮತ್ತು ರೈತರಿಗೆ ಅನೂಕುಲವಾಗುವಂತೆ ಸಮುದ್ರ ನೀರನ್ನು ವಿವಿಧ ನದಿಗಳಿಗೆ ಜೋಡನೆ ಕಾಮಗಾರಿಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದು ಹೇಳಿದರು.
ಸಂಸದರಾದ ಸುರೇಶ ಅಂಗಡಿ ಅವರು ಮಾತನಾಡಿ, ಬೆಳಗಾವಿಯಿಂದ ಯರಗಟ್ಟಿ ಮತ್ತು ಬಾಗಲಕೋಟೆ ಮಾರ್ಗವಾಗಿ ಹೈದ್ರಾಬಾದ್ ವರೆಗೆ ಎನ್‍ಎಚ್-4 ರಸ್ತೆಯನ್ನು ನಿರ್ಮಾಣ ಮಾಡವ ಅವಶ್ಯವಿದೆ ಎಂದು ಸಚಿವರಿಗೆ ಒತ್ತಾಯಿಸಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಸಂಜಯ ಪಾಟೀಲ್ ಅವರು ಸಭೆಯ ಅಧ್ಯಕ್ಷತೆ ಮಾತನಾಡಿದರು. ಸಂಸದರಾದ ಪ್ರಭಾಕರ ಕೋರೆ, ಮಾಹಾಂತೇಶ ಕವಟಿಮಠ, ಶಾಸಕರಾದ ಉಮೇಶ ಕತ್ತಿ, ಜಿಲ್ಲಾಧಿಕಾರಿಗಳಾದ ಎಸ್.ಜಯಾವುಲ್ಲಾ ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.Minister Nitin Gadkari inaugurated the 2 lay works ceremony

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.