ಉತ್ತಮ ಸಮಾಜಕ್ಕಾಗಿ

‘ಸತೀಶ’ಗೆ ಸಿಗದ ಸಚಿವ ಸ್ಥಾನ:ಜಿಪಂ. ಉಪಾಧ್ಯಕ್ಷ ಸೇರಿ ಹಲವರ ರಾಜೀನಾಮೆ!

Minister of State for External Affairs: ZP. Vice President resigns

0

ಬೆಳಗಾವಿ:(news belgaum) ರಾಜ್ಯದಲ್ಲಿ ನಡೆದ ಸಂಪುಟ ರಚನೆ ವೇಳೆ ಪ್ರಭಾವಿ ರಾಜ್ಯ ಮುಖಂಡ ಸತೀಶ ಜಾರಕಿಹೊಳಿ ಅವರನ್ನು ಕೊನೆ ಕ್ಷಣದಲ್ಲಿ ವಂಚಿಸಲಾಗಿದೆ ಎಂದು ಜಿಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ & ಎಲ್ಲ ಸತೀಶ ಜಾರಕಿಹೊಳಿ ಅಭಿಮಾನಿ ಜನಪ್ರತಿನಿಧಿಗಳು ಅಸಮಧಾನ ವ್ಯಕ್ತಪಡಿಸಿದರು.
News Belgaum-Auto Draft 13 News Belgaum-Auto Draft 14 News Belgaum-Auto Draft 15ಸುದ್ದಿಗೋಷ್ಢಿ ನಡೆಸಿದ ಅವರು ಮಾತನಾಡಿ ರಾಜ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ಶಾಸಕ ಸ್ಥಾನ ಆಯ್ಕೆಯಾಗಲು ಕಾರಣರಾದ ಸತೀಶ ಜಾರಕಿಹೊಳಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸದೇ ಮೋಸ ಮಾಡಲಾಗಿದೆ. ಈ ಅವಮಾನಕ್ಕೆ ನಾವು ತೀವ್ರ ಖಂಡಿಸುತ್ತೇವೆ ಎಂದರು.15 ಜನ ಜಿಪಂ ಸದಸ್ಯರು, 28 ಜನ ತಾಪಂ. ಸದಸ್ಯರು, ಎಪಿಎಂಸಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ಇಂದು ಕೊಡುತ್ತಿದ್ದೇವೆ ಎಂದು ಎಚ್ಚರಿಸಿದರು.ಮಾತಿಗೆ ಮರ್ಯಾದೆ ಕೊಡದ ಕಾಂಗ್ರೆಸ್ ಹೈಕಮಾಂಡ ನೀತಿಗೆ ಬೆಳಗಾವಿಯಲ್ಲಿ ನಮ್ಮ ವಿರೋಧ ಇದೆ ಎಂದರು. ಪಕ್ಷದ ಅಧ್ಯಕ್ಷರ ಜತೆಗೆ ಆಯಾ ಅಥಾರಿಟಿಗಳಿಗೆ ರಾಜೀನಾಮೆ ಸಲ್ಲಿಸುತ್ತೇವೆ ಎಂದರು.
ಜಿಪಂ. ಉಪಾಧ್ಯಕ್ಷ ಅರುಣ ಅಣ್ಣು ಕಟಾಂಬಳೆ ಪ್ರಾದೇಶಿಕ ಆಯುಕ್ತರಿಗೆ ಇಂದು ರಾಜೀನಾಮೆ ಸಲ್ಲಿಸುತ್ತಾರೆ ಎಂದು ಘೋಷಿಸಿದರು. ಸತೀಶ ಜಾರಕಿಹೊಳಿ ಅಭಿಮಾನಿಗಳು ಮತ್ತು ಅವರ ಕ್ಷೇತ್ರದ ಜನಪ್ರತಿನಿಧಿಗಳು ಆಗಿದ್ದರಿಂದ ಅವರ ಹಿಂಬಾಲಕರಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಜತೆಗೆ ಹಲವು ಶಾಸಕರಿಗೂ ರಾಜೀನಾಮೆ ಸಲ್ಲಿಸಲು ಒತ್ತಾಯ ಮಾಡುತ್ತೇವೆ ಎಂದರು.
ಕಾಣದ ಕೈಗಳು ಸತೀಶ ಅವರಿಗೆ ಸಚಿವ ಸ್ಥಾನ ತಪ್ಪಿಸಿವೆ. ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಅಹ್ಮದ್ ಪಟೇಲ್, ಕೆ. ಸಿ. ವೇಣುಗೋಪಾಲ ಅವರೇ ಸಚಿವ ಸ್ಥಾನ ತಪ್ಪಲು ಮುಖ್ಯ ಕಾರಣ ಎಂದು ಎಲ್ಲ ಜನಪ್ರತಿನಿಧಿಗಳು ಆರೋಪಿಸಿದರು. ಆರ್ ಸಿ, ಡಿಸಿ & ಸಿಇಓ ಅವರಿಗೆ ಇಂದೇ ರಾಜೀನಾಮೆ ಸಲ್ಲಿಸಲಾಗುವುದು ಎಂದರು. ಸಿದ್ದನಗೌಡ ಸುಣಗಾರ, ಜಯಶ್ರೀ ಮಾಳಗಿ, ಗಂಗಾಧರಸ್ವಾಮಿ ತವಗಮಠ, ಕೃಷ್ಣ ಅನಗೋಳಕರ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.