ಉತ್ತಮ ಸಮಾಜಕ್ಕಾಗಿ

ಜ.21 ರಂದು ಕೆರೆಗೆ ನೀರು ತುಂಬಿಸುವ ಯೋಜನೆ ಸಚಿವರಗಳು ಉಪಸ್ಥಿತರಿರುವರು.

Minister of State for Planning Water Supply Scheme on Jan 21.

0

ಬೆಳಗಾವಿ:belgaum ಬೆಳಗಾವಿ ತಾಲೂಕಿನ ಸಿದ್ದನಬಾವಿ, ಬೆಂಡಿಗೇರಿ ಮತ್ತು ಮುತ್ನಾಳ ಗ್ರಾಮಗಳ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಜನವರಿ 21 ರಂದು ಮಧ್ಯಾಹ್ನ 12-30 ಗಂಟೆಗೆ ಹಿರೇಬಾಗೇವಾಡಿ ಹತ್ತಿರದ ಸಿದ್ದನಬಾವಿ ಕೆರೆಯ ಬಳಿ ಹಮ್ಮಿಕೊಳ್ಳಲಾಗಿದೆ.
ಜಲಸಂಪನ್ಮೂಲ ಸಚಿವರಾದ ಡಾ|| ಎಂ.ಬಿ. ಪಾಟೀಲ ಅವರು ಗುದ್ದಲಿ ಪೂಜೆ ನೆರವೇರಿಸುವರು. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಸಂಜಯ ಪಾಟೀಲ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳಾದ ಗಣೇಶ ಹುಕ್ಕೇರಿ ಸೇರಿದಂತೆ ಜಿಲ್ಲೆಯ ಸಂಸತ್ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿರುವರು.

ಯೋಜನೆಯ ಸಂಕ್ಷಿಪ್ತ ವಿವರ:
ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಸಿದ್ದನಬಾವಿ, ಬೆಂಡಿಗೇರಿ ಮತ್ತು ಮುತ್ನಾಳ ಗ್ರಾಮಗಳು ಮಲಪ್ರಭಾ ನದಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿ ಇವೆ. ಇಲ್ಲಿನ ವಾರ್ಷಿಕ ಸರಾಸರಿ ಮಳೆಯು 714.2 ಮೀ.ಗಳಷ್ಟಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಮಳೆಯ ಪ್ರಮಾಣವು ಬಹಳ ಕಡಿಮೆಯಾಗಿರುತ್ತದೆ. ಇದರ ಪರಿಣಾಮವಾಗಿ ಕಳೆದ ಹತ್ತಾರು ವರ್ಷಗಳಿಂದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವೃ ತೊಂದರೆಯುಂಟಾಗುತ್ತಿದೆ.
ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಲಪ್ರಭಾ ನದಿಯಿಂದ ಪಾರಿಶ್ವಾಡ ಗ್ರಾಮದ ಹತ್ತಿರ ಮಲಪ್ರಭಾ ನದಿಯ ದಡದಲ್ಲಿ ಜಾಕ್‍ವೆಲ್‍ನ್ನು ನಿರ್ಮಿಸಿಒ ಪೈಪ್‍ಲೈನ್ ಮೂಲಕ ಸಿದ್ದನಬಾವಿ, ಬೆಂಡಿಗೇರಿ ಮತ್ತು ಮುತ್ನಾಳ ಗ್ರಾಮಗಳ ಕೆರೆಗಳನ್ನು ತುಂಬಿಸಲು 28.40 ಎಂ.ಸಿ.ಎಫ್.ಟಿ ನೀರನ್ನು ನದಿಯಿಂದ ಮಳೆಗಾಲದಲ್ಲಿ ಎತ್ತಲು ಯೋಜಿಸಲಾಗಿದೆ.

ಜಾಕ್‍ವೆಲ್‍ದಿಂದ ನೀರನ್ನು 8565 ಮೀಟರ್ ಉದ್ದದ ಪೈಪ್‍ಲೈನ್ (ರೈಸಿಂಗ್ ಮೇನ್) ಮೂಲಕ ನೀರನ್ನು ಪಂಪ್ ಮಾಡಿ ಡೆಲಿವರಿ ಚೆಂಬರ್‍ಗೆ (ಮಾರ್ಗ ಮಧ್ಯ ಬರುವ ಬೆಂಡಿಗೇರಿ ಕೆರೆಗೆ 270 ಮೀಟರ್ ಬ್ಲೀಡರ್‍ನ ಪೈಪ್ ಮೂಲಕ ನೀರನ್ನು) ಹರಿಸಿ, ನಂತರ ಗುರುತ್ವಾಕರ್ಷಣೆ ಮೂಲಕ 3720 ಮೀಟರ್ ಉದ್ದದ ಪೈಪ್‍ಲೈನ್ ಮೂಲಕ ಸಿದ್ದನಬಾವಿ ಕೆರೆಗೆ ಹಾಗೂ 2400 ಮೀಟರ್ ಉದ್ದದ ಪೈಪ್‍ಲೈನ್ ಮೂಲಕ ಮುತ್ನಾಳ ಕೆರೆಗೆ ನೀರನ್ನು ಪೂರೈಸಲು ಯೋಜಿಸಲಾಗಿರುತ್ತದೆ.
ಈ ಯೋಜನೆಗೆ ಸರ್ಕಾರದ ಆದೇಶ ಸಂಖ್ಯೆ: ಜಸಂಇ 77 ಎಂ.ಜಡ್ 2016, ದಿನಾಂಕ 31-03-2017 ರಡಿಯಲ್ಲಿ ರೂ. 1257 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಈ ಕಾಮಗಾರಿಯನ್ನು ದಾವಣಗೆರೆಯ ಕೆ.ವಿ.ಆರ್. ಕನ್‍ಸ್ಟ್ರಕ್ಷನ್ಸ್ ನವರಿಗೆ ಟೆಂಡರ್ ಆಧಾರೆದ ಮೇಲೆ ವಹಿಸಿಕೊಡಲಾಗಿದೆ.

 tarunkranti    Minister of State for Planning Water Supply Scheme on Jan 21.

Leave A Reply

 Click this button or press Ctrl+G to toggle between Kannada and English

Your email address will not be published.