ಉತ್ತಮ ಸಮಾಜಕ್ಕಾಗಿ

ಲಕ್ಷ್ಮೀ ಗೆ ದೆಹಲಿ ತೋರಿಸಿದ್ದೇ ನಾನು. ಡಿಕೆಶಿ ನನ್ನ ಗೆಳೆಯ ನನ್ನ ಪರವಾಗಿ ಅವರು ಸಹಾಯ ಮಾಡಿದ್ದಾರೆ: ಸಚಿವ ರಮೇಶ ಜಾರಕಿಹೊಳಿ

news belagavi

0

ಬೆಳಗಾವಿ:(news belgaum) ಇಂತಹ ದರ್ಪದ ರಾಜಕಾರಣ ಬೆಳಗಾವಿ ಜಿಲ್ಲೆಯಲ್ಲಿ ಎಂದೂ ನಡೆದಿರಲಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಖೇದ ವ್ಯಕ್ತಪಡಿಸಿದ್ದು, ಇಬ್ಬರೂ ಸಹೋದರರು ಉಗ್ರ ನಿರ್ಧಾರ ತಳೆಯುವುದಾಗಿ ಎಚ್ಚರಿಸಿದ್ದಾರೆ. ನಾವು ₹90 ಕೋಟಿ ಹಣ ಲಕ್ಷ್ಮೀ ಹೆಬ್ಬಾಳಕರ ಕಡೆಯಿಂದ ತೆಗೆದುಕೊಂಡಿದ್ದೇವೆ ಎನ್ನುವುದು ಸುಳ್ಳು ಸುದ್ದಿ. ಲಕ್ಷ್ಮೀ ಗೆ ದೆಹಲಿ ತೋರಿಸಿದ್ದೇ ನಾನು. ಡಿಕೆಶಿ ನನ್ನ ಗೆಳೆಯ ನನ್ನ ಪರವಾಗಿ ಅವರು ಸಹಾಯ ಮಾಡಿದ್ದಾರೆ, ಅದೇ ರೀತಿ ನಾನು ಅವರ ಪರವಾಗಿ ಬ್ಯಾಟಿಂಗ್ ಮಾಡಿ ಅವರಿಗೆ ಸಹಾಯ ಮಾಡಿದ್ದೇನೆ ಎಂದು ಸಚಿವ ಡಿ. ಕೆ. ಶಿವಕುಮಾರ ಅವರನ್ನೇ ಈಗ ರಮೇಶ ಜಾರಕಿಹೊಳಿ ಅಪ್ಪಿಕೊಂಡಿದ್ದಾರೆ.
Auto Draft- Tarun kranti 75ಲಕ್ಷ್ಮೀ ಹೆಬ್ಬಾಳಕರ ₹90 ಕೋಟಿ ಹಣ ನಮಗೆ ಕೊಟ್ಟಿದ್ದಾರೆ ಎಂದರೆ ಏನರ್ಥ!? ನಾವು ಇದ್ದೂ ಸತ್ತಂತೆಯೇ. ನಾವೇ ಇನ್ನೊಬ್ಬರಿಗೆ ಹಣ ಕೊಡುವಷ್ಟು ಶಕ್ತಿ ಹೊಂದಿದ್ದೇವೆ ಎಂದರು. ಸತೀಶ ಜಾರಕಿಹೊಳಿ & ರಮೇಶ ಜಾರಕಿಹೊಳಿ ಇನ್ನು ಉಗ್ರ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಾರಕಿಹೊಳಿ ಬ್ರದರ್ಸ್ ನಾವು ಏನೆ ಮಾಡಿದರೂ ನಮ್ಮ ಮೇಲೆಯೇ ತಿರುಗಿ ಆರೋಪಗಳು ಬರುತ್ತಿವೆ. ಲಕ್ಷ್ಮೀ ಹೆಬ್ಬಾಳಕರ ಹಠಕ್ಕೆ ಬಿದ್ದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಇಷ್ಟು ದೂರಕ್ಕೆ ಒಯ್ಯುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ ಎಂದರು. ಸರಕಾರಕ್ಕೆ ಎಚ್ಚರ ಕೊಡುವಂತಹ ಮೂರ್ಖರು ನಾವಲ್ಲ. ಜಾರಕಿಹೊಳಿ ಸಹೋದರರ ಸ್ವಾಭಿಮಾನಕ್ಕೆ ನಾಳೆ ಧಕ್ಜೆಯಾದರೆ ಶೀಘ್ರವೇ ಉಗ್ರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಸತೀಶ ಜಾರಕಿಹೊಳಿ ಇನ್ಮುಂದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.