ಉತ್ತಮ ಸಮಾಜಕ್ಕಾಗಿ

ಹಿಡಕಲ್ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ

news

0

ಬೆಳಗಾವಿ:(news belgaum) ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ರವಿವಾರ (ಆ.12) ಹಿಡಕಲ್ ಜಲಾಶಯಕ್ಕೆ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳ ನಂತರ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದ ಎಲ್ಲ (ಹತ್ತು) ಗೇಟ್‍ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
News Belgaum-ಹಿಡಕಲ್ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ News Belgaum-ಹಿಡಕಲ್ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ 1 News Belgaum-ಹಿಡಕಲ್ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ 2ಹಿಡಕಲ್ ಜಲಾಶಯ ಈ ಭಾಗದ ಪ್ರವಾಸಿ ತಾಣವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಆರ್‍ಎಸ್ ಮಾದರಿಯಲ್ಲಿ ಹಿಡಕಲ್ ಜಲಾಶಯದ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಉಮೇಶ ಕತ್ತಿ, ದುರ್ಯೋದನ ಐಹೊಳೆ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಇಂಜಿನಿಯರ್‍ಗಳು, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.