ಉತ್ತಮ ಸಮಾಜಕ್ಕಾಗಿ

ಅಕ್ರಮ -ಸಕ್ರಮ ಮಾಡಿ:ರಾಮದುರ್ಗ ಪುರಸಭೆ ವ್ಯಾಪ್ತಿ:ಶಾಸಕ ಮಹಾದೇವಪ್ಪ ಯಾದವಾಡ ಇಂದು ಆಗ್ರಹಿಸಿದ್ದಾರೆ.

news belagavi

0

ಬೆಳಗಾವಿ:(news belgaum) ರಾಮದುರ್ಗ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಿ, ತಕ್ಷಣ ಮಲಪ್ರಭಾ ನದಿ ನೀರು ನದಿಪಾತ್ರ ಮತ್ತು ಕಾಲುವೆಗಳಿಗೆ ಹರಿಸುವಂತೆ ಶಾಸಕ ಮಹಾದೇವಪ್ಪ ಯಾದವಾಡ ಇಂದು ಆಗ್ರಹಿಸಿದ್ದಾರೆ.
News Belgaum-ಅಕ್ರಮ -ಸಕ್ರಮ ಮಾಡಿ:ರಾಮದುರ್ಗ ಪುರಸಭೆ ವ್ಯಾಪ್ತಿ:ಶಾಸಕ ಮಹಾದೇವಪ್ಪ ಯಾದವಾಡ ಇಂದು ಆಗ್ರಹಿಸಿದ್ದಾರೆ.ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ರೈತರೊಂದಿಗೆ ಪ್ರತಿಭಟನೆ ನಡೆಸಿದ ಅವರು ರಾಮದುರ್ಗ ತಾಲೂಕಿನಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಇದರಿಂದ ಬೆಳೆದ ಬೆಳೆಗಳು ಒಣಗಿ ಹೋಗಿ, ಕುಡಿಯುವ ನೀರಿನ ಅಭಾವ ಸಹ ಈಗಲೇ ಉಂಟಾಗಿದೆ. ಇಡೀ ತಾಲೂಕನ್ನು ಬರಪೀಡಿತ ಎಂದು ಸರಕಾರ ಘೋಷಿಸಬೇಕು ಎಂದು ಆಗ್ರಹಿಸಿ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಅಕ್ರಮ -ಸಕ್ರಮ ಮಾಡಿ:ರಾಮದುರ್ಗ ಪುರಸಭೆ ವ್ಯಾಪ್ತಿಯ ಶ್ರೀಪತಿ ನಗರ ಹಾಗೂ ಭಾಗ್ಯ ನಗರ ಪ್ರದೇಶಗಳಲ್ಲಿ ಬಡವರು ಕಟ್ಟಿಕೊಂಡ ಅಕ್ರಮ ಮನೆಗಳನ್ನು ಸಕ್ರಮ ಮಾಡುವಂತೆ ಶಾಸಕ ಮಹಾದೇವಪ್ಪ ಯಾದವಾಡ ಆಗ್ರಹಿಸಿದರು. ತುರನೂರು ಗ್ರಾಮದ ಕಂದಾಯ ಇಲಾಖೆ ಒಡೆತನದ ಜಮೀನಿನಲ್ಲಿ ಬಡವರು ಕಳೆದ ನಾಲ್ಕು ದಶಕಗಳಿಂದ ಸೂರು ಕಟ್ಟಿಕೊಂಡಿದ್ದು ಅವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಿಲ್ಲಾಡಳಿತ ಹಕ್ಕುಪತ್ರ ನೀಡಿ ಸಹಾಯ ಮಾಡಬೇಕೆಂದು ಕೋರಿದರು.

Leave A Reply

 Click this button or press Ctrl+G to toggle between Kannada and English

Your email address will not be published.