ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಚುನಾವಣಾ ಸ್ವೀಪ್-Iಅಔಓ ಆಗಿ ಶ್ರೀಮತಿ ವಿಮಲಾಬಾಯಿ ರಾಮಣ್ಣ ಕದಮ, ನೇಮಕ

Mrs. Vimalabai Ramanna Kadama, appointed as District Election Sweep-I Ao

0

ಬೆಳಗಾವಿ:(news belgaum)ತೊಟ್ಟಿಲು ತೂಗುವ ಕೈ ಜಗತ್ತನೇ ತೂಗಬಲ್ಲದು ಎಂಬ ಮಾತಿದೆ. ಸಾಕಷ್ಟು ಮಹಿಳೆಯರು ಮದುವೆ ಮಕ್ಕಳಾದ ನಂತರ ಸಾಂಸರಿಕ ಜೀವನದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಚಿಕ್ಕೋಡಿ ಪಟ್ಟಣದ ಡಂಬಳ ಪ್ಲಾಟ್ ನಿವಾಸಿ ವಿಮಲಾ ಕದಮ ಎಂಬುವವರು ತಮ್ಮ ಸಾಧನೆಯಿಂದ ಮನೆ ಮಾತಾಗಿದ್ದಾರೆ.ಇವರು ಸಂಸಾರದ ಜೊತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ನೊಂದವರ ಧ್ವನಿಯಾಗಿದ್ದಾರೆ. ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.

ವಿಮಲಾಬಾಯಿ ಕದಮ ಅವರು ಜುಲೈ 30, 1988ರಂದು ಬಡತನದ ಕುಟುಂಬದಲ್ಲಿ ಜನಿಸಿದ್ದಾರೆ. ತಂದೆ ರಾಮಪ್ಪ, ತಾಯಿ ಸುಂದರಾಬಾಯಿ ಉದರದಿಂದ ಜನಿಸಿರುವ ವಿಮಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2001-02ರಲ್ಲಿ 7ನೇ ತರಗತಿ ಉತ್ತೀರ್ಣರಾಗಿರುವ ವಿಮಲಾ ಖೋ ಖೋ, ಕಬಡ್ಡಿ, ವಾಲಿಬಾಲ್ ನಲ್ಲಿ ಎತ್ತಿದ ಕೈಯಾಗಿದ್ದ ಇವರು ಮೂರು ಭಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಜಿಲ್ಲಾ ಚುನಾವಣಾ ಸ್ವೀಪ್-Iಅಔಓ ಆಗಿ ಶ್ರೀಮತಿ ವಿಮಲಾಬಾಯಿ ರಾಮಣ್ಣ ಕದಮ, ನೇಮಕ- Tarun kranti

ಪಟ್ಟಣದ ಭೀಮ ನಗರದಲ್ಲಿ ಸ್ವಚ್ಛತೆಯೇ ಇಲ್ಲದೇ ಸಾಕಷ್ಟು ಸೊಳ್ಳೆಗಳ ಆವಾಸ ಸ್ಥಾನವಾಗಿತ್ತು. ಪುರಸಭೆಯ ಸಹಕಾರ ಹಾಗೂ ತನ್ನ ಸಹಪಾಠಿ ವಿದ್ಯಾರ್ಥಿನಿಯರೊಂದಿಗೆ ತನ್ನದೇ ಸ್ವಂತ ಖರ್ಚಿನಿಂದ ಕರಪತ್ರಗಳನ್ನು ಮುದ್ರಿಸಿ ಮನೆ ಮನೆಗೂ ಹಂಚಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದ್ದಾರೆ. ಪುರಸಭೆಯ ಸಹಕಾರದೊಂದಿಗೆ ಫಾಗಿಂಗ್ ಮಷಿನ್ ಪಡೆದುಕೊಂಡು ಫಾಗಿಂಗ್ ಮಾಡುವ ಮೂಲಕ ಮೂರು ದಿನಗಳ ಕಾಲ ಭೀಮನಗರ, ರಾಮನಗರ ಹಾಗೂ ಸ್ಲಂಗಳ ಬಡಾವಣೆಗಳಲ್ಲಿ ಸೊಳ್ಳೆಗಳ ನಾಶ ಮಾಡಿ ಜನರಿಗೆ ನೆಮ್ಮದಿ ನೀಡಿದ್ದಾರೆ.

ಉಮರಾಣಿ ಗ್ರಾಮದಲ್ಲಿ ಶೌಚಾಲಯದ ಜಾಗೃತಿಯಿರಲಿಲ್ಲ. ಹೀಗಾಗಿ ವಿಮಲಾಬಾಯಿ ಕದಮ್ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಈ ಗ್ರಾಮದ ಪ್ರತಿಯೊಂದ ಮನೆ ಮನೆಗೂ ತೆರಳಿ ಶೌಚಾಲಯದ ಮಹತ್ವನ್ನು ತಿಳಿಸಿ ಆ ಗ್ರಾಮದಲ್ಲಿ 850ಕ್ಕೂ ಹೆಚ್ಚು ಶೌಚಾಲಯಗಳನ್ನು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಜನರಿಗೆ ನಿರ್ಮಿಸಿಕೊಡುವಲ್ಲಿ ಇವರ ಕೊಡುಗೆ ಅಪಾರವಾಗಿದೆ.

ಇವರ ಸಾಧನೆ ಗುರುತಿಸಿ ಹಲವಾರು ಪ್ರಶ್ತಿಗಳು ಅರಸಿಕೊಂಡು ಬಂದಿವೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಫೆಬ್ರುವರಿ 4, 2018 ರಂದು ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ “ಬೆಸ್ಟ್ ಲೀಡರ್” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ 60ಕ್ಕೂ ಹೆಚ್ಚು ಪ್ರೊಜೆಕ್ಟ್ ನಲ್ಲಿ ವಿಮಲಾಬಾಯಿ ಕದಮ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥ ನಂದನ ನಿಲೇಕಣಿ ದಂಪತಿ ಹಾಗೂ ದೇಶಪಾಂಡೆ ಫೌಂಡೇಶನ್‍ನ ನ ಗುರುರಾಜ ದೇಶಪಾಂಡೆ ದಂಪತಿಗಳು ನೀಡಿ ಗೌರವಿಸಿದ್ದಾರೆ.

ಶ್ರೀಮತಿ. ವಿಮಲಾ. ರಾಮಣ್ಣ. ಕದಮ ಇವರು ಮಾಡಿರುವ ಸಾಧನೆಗಳನ್ನು ಗುರುತಿಸಿ ಜಿಲ್ಲಾ ಚುನಾವಣಾ ಸ್ವೀಪ್-Iಅಔಓ ಆಗಿ ನೇಮಕ ಮಾಡಲಾಗಿದೆ. Mrs. Vimalabai Ramanna Kadama, appointed as District Election Sweep-I Ao

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.