ಉತ್ತಮ ಸಮಾಜಕ್ಕಾಗಿ

ಮನಶ್ಯಾಂತಿಗೆ ಸಂಗೀತ ಅವಶ್ಯಕ-ಗುರುರಾಜ ಕುಲಕರ್ಣಿ

news belagavi

0

ಬೆಳಗಾವಿ:(news belgaum)-ಮನಶ್ಯಾಂತಿಗೆ ಸಂಗೀತ ಅತ್ಯವಶ್ಯಕವಾಗಿದೆ, ದೈಹೀಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತ ಅತ್ಯುತ್ತಮ ಸಾಧನವಾಗಿದೆ ಎಂದು ಸಂಗೀತಗಾರ ಗುರುರಾಜ ಕುಲಕರ್ಣಿ ಹೇಳಿದರು.
ಅವರಿಂದು ಕುವೆಂಪು ನಗರದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮುಖ್ಯವಾಗಿ ಯುವಜನತೆ ಮೊಬೈಲ ಜಗತ್ತಿನಿಂದ ಹೊರಬಂದು ಸಂಗೀತದತ್ತ ಮುಖ ಮಾಡಬೇಕು ಆಗ ಭಾರತದ ಸಂಗೀತ ಪರಂಪರೆ ಮತ್ತು ಸಂಗೀತ ಸಂಸ್ಕøತಿಯ ಉಳಿಕೆ ಮತ್ತು ಮುಂದುವರಿಕೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದ ಅವರು ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಕಲಿಸಲು ಪಾಲಕರು ಮುಂದಾಗಬೇಕು ಎಂದವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ವಾಸ್ತು ತಜ್ಞ ಸತೀಶ ನಿಲಜಕರ ಅವರು ಮಾತನಾಡಿ ಸಂಗೀತ ಕೇವಲ ಮನರಂಜನೆಗಲ್ಲ ಸಂಗೀತದಿಂದ ಹೊರಹೊಮ್ಮುವ ತರಂಗಗಳಿಂದ ಅಪಾರವಾದ ಶಕ್ತಿ ಬಿಡುಗಡೆಯಾಗುತ್ತದೆ ಅದರ ಪ್ರಭಾವಕ್ಕೆ ಒಳಗಾಗದವರೇ ಇಲ್ಲ ಕೇವಲ ಮನುóಷ್ಯರಲ್ಲ ಪಶು ಪಕ್ಷಿಗಳು, ಗಿಡಮರಗಳು ಸಹ ಸಂಗೀತದ ಪ್ರಭಾವದಿಂದ ಹೊರತಾಗಿಲ್ಲ ಇದು ಅನೇಕ ಪ್ರಯೋಗಗಳಿಂದ ಧೃಢಪಟ್ಟಿದೆ,ಸಮಗೀತ ಚಿಕಿತ್ಸೆಯಿಂದ ಅನೇಕ ರೋಗಗಳನ್ನು ಸಹ ವಾಸಿ ಮಾಡಬಹುದು ಎಂದ ಅವರು ಸಂಗೀತ ಕಲಿಕೆಗೆ ಎಲ್ಲರೂ ಆಸಕ್ತಿ ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ಳಿಚುಕ್ಕಿ ಸಂಗೀತ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಹಿರೇಮಠ ಅವರು ಮಾತನಾಡಿ ತಮ್ಮ ಸಂಸ್ಥೆಯಿಂದ ಎರಡು ತಿಂಗಳಿಗೊಂದು ಸಂಗೀತ ಮತ್ತು ಸಾಂಸ್ಕøತೀಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಇದೇ 29 ರಂದು ಬೆಳಗಾವಿಯಲ್ಲಿ ಮತ್ತೊಂದು ಹಳೆಯ ಹಿಂದಿ ಚಿತ್ರಗೀತೆಗಳ ಕಾರ್ಯಕ್ರಮ ಇಟ್ಟುಕೊಳ್ಳಲಾಗುವದೆಂದು ನುಡಿದರು. ಶ್ರೀಮತಿ ಸಂಗೀತಾ ಶಿವಪೂಜಿ ಸ್ವಾಗತಿಸಿ ವಂದಿಸಿದರು

Leave A Reply

 Click this button or press Ctrl+G to toggle between Kannada and English

Your email address will not be published.