ಉತ್ತಮ ಸಮಾಜಕ್ಕಾಗಿ

My shadow is upon me; My Vote My Claim "My Vote Guarantee" - Signed by Young People

0

ಬೆಳಗಾವಿ: “ಯಾವುದೇ ಭಯವಿಲ್ಲದೇ; ಧರ್ಮ, ಜಾತಿ, ಜನಾಂಗ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ನಮ್ಮ ಮತ ಚಲಾಯಿಸುತ್ತೇವೆ”-
ಹೀಗೆ ಘೋಷಿಸಿ ಒಬ್ಬೊಬ್ಬರಾಗಿ ಸಹಿ ಮಾಡುತ್ತಿದ್ದಂತೆ ನೆರೆದ ಜನರಿಂದ ಚಪ್ಪಾಳೆಗಳ ಸುರಿಮಳೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು ಕೂಡ ಸಹಿ ಮಾಡುವ ಮೂಲಕ ‘ಸಹಿ ಆಂದೋಲನ’ಕ್ಕೆ ನಾಂದಿ ಹಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ(ಏ.24) ಆಯೋಜಿಸಲಾಗಿದ್ದ “ನನ್ನ ನೆರಳು ನನ್ನ ಮೇಲೆ-ನನ್ನ ಮತ ನನ್ನ ಹಕ್ಕು” ವಿಶೇಷ ಕಾರ್ಯಕ್ರಮವು ಮತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮೊದಲು ಜಿಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಐಕಾನ್ ವಿಮಲಾಬಾಯಿ ಕದಂ ಅವರನ್ನು ಸತ್ಕರಿಸಲಾಯಿತು.

ದೇಶದ ಹಿತಕ್ಕಾಗಿ ಮತ ಚಲಾಯಿಸಿ:
News Belgaum-ನನ್ನ ನೆರಳು ನನ್ನ ಮೇಲೆ; ನನ್ನ ಮತ ನನ್ನ ಹಕ್ಕು “ನನ್ನ ಮತ ಖಾತ್ರಿ”- ಯುವ ಜನರಿಂದ ಸಹಿಈ ವೇಳೆ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಮಚಂದ್ರನ್ ಆರ್. ಅವರು, ವೈಯಕ್ತಿಕ ಸೇವೆ-ಸೌಲಭ್ಯ ಪಡೆಯಲು ಬ್ಯಾಂಕು ಹಾಗೂ ರೇಷನ್ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ನಾವು ದೇಶದ ಹಿತಕ್ಕಾಗಿ ಕೆಲವೇ ನಿಮಿಷ ಸರದಿ ಸಾಲಿನಲ್ಲಿ ನಿಲ್ಲುವ ಮೂಲಕ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರ ಸಹಭಾಗಿತ್ವವು ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಗೆ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲ ಮಹಿಳೆಯರು ತಪ್ಪದೇ ಮತ ಚಲಾಯಿಸಬೇಕು ಎಂದರು.
ಮತದಾನ ನಮ್ಮ ಪವಿತ್ರ ಹಕ್ಕು, ಇದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸೋಣ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಅವರು ಹೇಳಿದರು.
ನಂತರ ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಅವರು ವಿದ್ಯಾರ್ಥಿಗಳ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ ಆವರಣದಿಂದ ಆರಂಭಗೊಂಡ ವಿದ್ಯಾರ್ಥಿಗಳ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಾನವ ಸರಪಳಿಯಾಗಿ ಪರಿವರ್ತನೆಗೊಂಡಿತು.
“ನನ್ನ ಮತ ನನ್ನ ಹಕ್ಕು”, “ಮತದಾನ ಮಹಾದಾನ-ಐದು ವರ್ಷ ಸಮಾಧಾನ”, ‘ನನ್ನ ಮತ ನನ್ನ ಭವಿಷ್ಯ”, “ಮಾಡ ತಂಗಿ ಮತದಾನ-ದೇಶಕ್ಕಿದೆ ವರದಾನ”, ಪ್ರತಿಶತ ಮತದಾನ-ಉತ್ತಮ ಸಮಾಜ ನಿರ್ಮಾಣ” ಹೀಗೆ ವಿವಿಧ ಘೋಷಣೆಗಳನ್ನು ಕೂಗಿದ ನೂರಾರು ವಿದ್ಯಾರ್ಥಿಗಳು ಮತದಾನದ ಬಗ್ಗೆ ಸಂಚಲನ ಮೂಡಿಸಿದರು.
ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಮಚಂದ್ರನ್ ಅವರು ಕೂಡ ಘೋಷಣೆಗಳನ್ನು ಕೂಗುವ ಮೂಲಕ ಯುವಜನರನ್ನು ಹುರಿದುಂಬಿಸಿದರು.
ಜಿಲ್ಲಾ ಸ್ವೀಪ್ ಐಕಾನ್ ವಿಮಲಾಬಾಯಿ ಕದಂ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಎ.ಎಲ್. ಪಾಟೀಲ, ಕಾಲೇಜಿನ ಉಪನ್ಯಾಸಕರು ಹಾಗೂ ಜಿಲ್ಲಾ ಪಂಚಾಯತ ಸಿಬ್ಬಂದಿ ಸೇರಿದಂತೆ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.