ಉತ್ತಮ ಸಮಾಜಕ್ಕಾಗಿ

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು: ಅರ್ಜಿ ಆಹ್ವಾನ

National Indian Military College: Application Invitation

0

ಬೆಳಗಾವಿ:(tarun kranti) ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಟರಿ ಕಾಲೇಜಿಗೆ 2019ನೇ ಸಾಲಿಗೆ 8ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜನವರಿ 2019ನೇ ಸಾಲಿನಲ್ಲಿ ಪ್ರವೇಶ ಬಯಸುವ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜೂನ್ 01 ಹಾಗೂ 02 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುವುದು.
ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಮತ್ತು ದಿನಾಂಕ 01-01-2019ರಂತೆ 11 ವರ್ಷದಿಂದ 13 ವರ್ಷದೊಳಗಿರುವ (02-01-2006 ರಿಂದ 01-07-2007ರೊಳಗೆ ಜನಿಸಿರುವ) ಬಾಲಕರು ಮಾತ್ರ ಸದರಿ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ರೂ. 42,400 ಆಗಿರುತ್ತದೆ.
ಭರ್ತಿ ಮಾಡಿದ ನಿಗದಿತ ಅರ್ಜಿಯೊಂದಿಗೆ ಮುನ್ಸಿಪಾಲಿಟಿ, ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನಟಿ ಪ್ರಮಾಣ ಪತ್ರದ ಧೃಢೀಕೃತ ಪ್ರತಿ, 5 ಪಾಸಪೋರ್ಟ್ ಸೈಜಿನ ಭಾವಚಿತ್ರಗಳು, ಎಸ್ ಸಿ/ಎಸ್‍ಟಿ ಅಭ್ಯರ್ಥಿಗಳಾಗಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಧೃಢೀಕೃತ ಪ್ರತಿ (ಆಂಗ್ಲ ಭಾಷೆಯಲ್ಲಿ ಇರುವಂತೆ ಮಾತ್ರ), ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ, ನೋಂದಾಯಿತ ಅಂಚೆ ರವಾನಿಸಲು ರೂ. 40ರ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆಯನ್ನು ದ್ವಿಪ್ರತಿಯಲ್ಲಿ ಲಗತ್ತಿಸಬೆಕು.
ಅರ್ಜಿಯನ್ನು ಮಾರ್ಚ್ 31ರೊಳಗಾಗಿ ನಿರ್ದೆಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಭವನ, ನಂ 58 ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇವರಿಗೆ ಸಲ್ಲಿಸಬೇಕು.
ವಿವರಣ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರ ಮೇರೆಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಭವನ, ನಂ 58 ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು-560025, ಇವರಿಂದ “THE COMMANDANT RIMC DEHRADUN” PAYABLE AT SBI, TEL BHAVAN, DEHRADUN (BANK CODE NO 01576) ಇವರ ಹೆಸರಿನಲ್ಲಿ ರೂ. 600 (ಸಾಮಾನ್ಯ ಅಭ್ಯರ್ಥಿಗಳಿಗೆ) ಮತ್ತು ರೂ. 555 (ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳಿಗೆ) ಪಡೆದ ಬ್ಯಾಂಕ್ ಡಿಮಾಂಡ ಡ್ರಾಪ್ಟ್ ಕಳುಹಿಸಿ ಖುದ್ದಾಗಿ ರಿಜಿಸ್ಟರ್ಡ್ ಪೋಸ್ಟ್ ಮುಖಾಂತರ ಪಡೆಯಬಹುದಾಗಿದೆ.
ರಿಜಿಸ್ಟರ್ಡ್ ಪೋಸ್ಟ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸಲಿರುವ ಅಭ್ಯರ್ಥಿಗಳು ಸಂಬಂಧಿಸಿದ ಬ್ಯಾಂಕ್ ಡ್ರಾಪ್ಟ್‍ನೊಂದಿಗೆ ಸ್ವವಿಳಾಸದ ಲಕೋಟೆಯ ಮೇಲೆ ರೂ. 40 ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಬೇಕು. ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಹೆಚ್ಚಿನ ಮಾಹಿತಿಗೆ ಸಮೀಪದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಜಂಟಿ, ಉಪ ನಿರ್ದೇಶಕರ ಕಾರ್ಯಾಲಯ ಅಥವಾ ದೂ: 080-25589459 ಇವರನ್ನು ಸಂಪರ್ಕಿಸಬಹುದು ಎಂದು ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.National Indian Military College: Application Invitation

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

 Click this button or press Ctrl+G to toggle between Kannada and English

Your email address will not be published.