ಉತ್ತಮ ಸಮಾಜಕ್ಕಾಗಿ

ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 2018 ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ

National Palsa Polio Program 2018 District Level Inauguration Ceremony

0

ಬೆಳಗಾವಿ: (tarun kranti) ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ,ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಇವರ ಸಹಯೋಗದಲ್ಲಿ ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 2018 ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಡಗಾಂವದಲ್ಲಿ ನೆರವೇರಿತು.

ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 2018 ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ- Tarun kranti 1ಸಮಾರಂಭದ ಉದ್ಘಾಟನೆಯನ್ನು ಶ್ರೀ ಸುರೇಶ ಅಂಗಡಿ ಮಾನ್ಯ ಸಂಸದರು ಬೆಳಗಾವಿ ಇವರು ನೆರವೇರಿಸಿ

ಈಗಾಗಲೇ ಭಾರತ ಪೋಲಿಯೋ ಮುಕ್ತ ರಾಷ್ಟ್ರವೆಂದು ಪ್ರಮಾಣ ಪತ್ರವನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.ಆದರೂ ಸಹ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿರುವದರಿಂದ ಮುಂಜಾಗ್ರತ ಕ್ರಮವಾಗಿ ಪ್ರತಿವರ್ಷ ನಮ್ಮ ದೇಶದಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಆದ್ದರಿಂದ ಪಾಲಕರು ತಮ್ಮ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಹಾಕಿಸಿದ್ದರೂ ಸಹ ಈ ಬಾರಿಯೂ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಿಕೊಳ್ಳುವಂತೆ ಕರೆ ನೀಡಿದರು.

ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 2018 ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ- Tarun krantiಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ, ಆಶಾ ಐಹೊಳೆ,

ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯತ ಬೆಳಗಾವಿ ಇವರು ಮಾತನಾಡುತ್ತಾ ಭಾರತ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೊಷಿಸಲಾಗಿದ್ದು ಇದಕ್ಕಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿ ಸ್ವಚ್ಚಭಾರತ ಅಭಿಯಾನ ಕುರಿತು ಮಾತನಾಡಿದರು.

ಇನ್ನೂರ್ವ ಅತಿಥಿಗಳಾದ ಶ್ರೀ ರಾಮಚಂದ್ರನ್ ಆರ್ ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ

ಬೆಳಗಾವಿ ಇವರು ಸಭೆಯನ್ನುದ್ದೇಶಿಸಿ ಮಾತನಾಡಿ ಎಲ್ಲ ಪಾಲಕರು ಪೋಲಿಯೋ ಲಸಿಕೆ ಹಾಕಿಸುವದರ ಜೊತೆಗೆ ಇನ್ನುಳಿದ ಎಲ್ಲ ಲಸಿಕೆಗಳನ್ನ ಕಾಲಕಾಲಕ್ಕೆ ತಮ್ಮ ಮಕ್ಕಳಿಗೆ ತಪ್ಪದೇ ಹಾಕಿಸುವಂತೆ ತಿಳಿಸಿ. ಸ್ವಚ್ಚಭಾರತ ಅಭಿಯಾನದ ಕುರಿತು ಮಾತನಾಡಿ ಶೌಚಾಲಯ ಹೊಂದಿರದೇ ಇರುವವರು ಸಕಾರದಿಂದ ದೊರೆಯುವ ಅನುದಾನ ಉಪಯೋಗಿಸಿಕೊಂಡು ಶೌಚಾಲಯ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರತನ ಮಾಸೇಕರ ಮಹಾನಗರ ಪಾಲಿಕೆ ಸದಸ್ಯರು ಮಾತನಾಡುತ್ತಾ ಇಂದಿನ ಮಕ್ಕಳು ನಾಳಿನ ನಾಗರಿಕರು ಆದ್ದರಿಂದ ಸದೃಢ ಭಾರತ ನಿರ್ಮಾಣಕ್ಕಾಗಿ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.

ವೇದಿಕೆ ಮೇಲೆ ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀ ರಮೇಶ ಸೊಂಟಕ್ಕಿ,

ಶ್ರೀ ಮನೋಹರ ಹಲಗೇಕರ,ಶ್ರೀ ಸಂಜಯ ಸವಾಸೇರಿ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಶಶಿಧರ ನಾಡಗೌಡ, ಡಾ.ಸಿದ್ದಲಿಂಗಯ್ಯಾ ಎಸ್ ಎಮ್ ಒ ಎನ್ ಪಿ ಎಸ್ ಪಿ ಬೆಳಗಾವಿ, ಡಾ.ಸಂಜೀವ ನಾಂದ್ರೆ ತಾಲೂಕಾ ಆರೋಗ್ಯಾಧಿಕಾರಿಗಳು, ಡಾ.ಎಮ್ ಬಿ ಬಾಳಪ್ಪನವರ ವೈದ್ಯಾಧಿಕಾರಿಗಳು ನಗರ ಆರೋಗ್ಯ ಕೇಂದ್ರ ವಡಗಾಂವ, ಶ್ರೀ ನದಾಪ ಶಿಶು ಅಭಿವೃದ್ದಿ ಆಧಿಕಾರಿಗಳು ಬೆಳಗಾವಿ ನಗರ ಇವರು ಉಪಸ್ಥಿತರಿದ್ದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರು ಸಾಂಕೇತವಾಗಿ 5 ಮಕ್ಕಳಿಗೆ ಲಸಿಕೆ ಹಾಕಿದರು.

ಪ್ರಾರಂಭದಲ್ಲಿ ಡಾ.ಅಪ್ಪಾಸಾಹೇಬ ನರಟ್ಟಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಐ ಪಿ ಗಡಾದ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳು ವಂದಿಸಿದರು.ಶ್ರೀ ಸಿ ,ಜಿ ಅಗ್ನಿಹೋತ್ರಿ, ಹಿರಿಯ ಆರೋಗ್ಯ ಸಹಾಯಕರು, ಕಾರ್ಯಕ್ರಮ ನಿರೂಪಿಸಿದರು ಶ್ರೀ ಬಿ ಪಿ ಯಲಿಗಾರ, ಪ್ರಭಾರಿ ಜಿಲ್ಲಾ ಆರೋಗ್ಯ ಶಕ್ಷಣಾಧಿಕಾರಿಗಳು, ಕಾರ್ಯಕ್ರಮ ಸಂಘಟಿಸಿದರು.

National Palsa Polio Program 2018 District Level Inauguration Ceremony

Leave A Reply

 Click this button or press Ctrl+G to toggle between Kannada and English

Your email address will not be published.