ಉತ್ತಮ ಸಮಾಜಕ್ಕಾಗಿ

ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ – 2018 ಎರಡನೇ ಸುತ್ತಿನ ಜಿಲ್ಲಾಮಟ್ಟದ ಉದ್ಘಾಟನಾ ಸಮಾರಂಭ.

National Palsa Polio Program

0

“ಸ್ವಾಸ್ತ್ಯ ಭಾರತ ನಿರ್ಮಾಣಕ್ಕಾಗಿ ಲಸಿಕೆ ಹಾಕಿಸಿ”
…… ಶ್ರೀ. ಬಿ ಎಸ್. ಚಿಕ್ಕಲದಿನ್ನಿ ಮಹಾಪೌರರು ಬೆಳಗಾವಿ
ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ – 2018 ಎರಡನೇ ಸುತ್ತಿನ ಜಿಲ್ಲಾಮಟ್ಟದ ಉದ್ಘಾಟನಾ ಸಮಾರಂಭ.- Tarun krantiಬೆಳಗಾವಿ, (news belgaum)ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಇವರ ಸಹಯೋಗದಲ್ಲಿ ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 2018ರ ಎರಡನೇ ಸುತ್ತಿನ ಜಿಲ್ಲಾಮಟ್ಟದ ಉದ್ಘಾಟನಾ ಸಮಾರಂಭವು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಣಬರ್ಗಿಯಲ್ಲಿ ನೆರವೇರಿತು.
ಸಮಾರಂಭದ ಉದ್ಘಾಟನೆಯನ್ನು ಶ್ರೀ ಬಿ.ಎಸ್.ಚಿಕ್ಕಲದಿನ್ನಿ ಪೂಜ್ಯ ಮಹಾಪೌರರು ಮಹಾನಗರ ಪಾಲಿಕೆ ಬೆಳಗಾವಿ ಇವರು ದೀಪ ಬೆಳಗಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ಎಲ್ಲ 0-5 ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಪೋಲಿಯೊ ಲಸಿಕೆ ಹಾಕಿಸಿದ್ದರೂ ಸಹ ಈ ಬಾರಿಯು ಕೂಡ ಲಸಿಕೆ ಹಾಕಿಸುವಂತೆ ಮನವಿ ಮಾಡಿ, ಪೋಲಿಯೋ ರೋಗ ಈಗಾಗಲೆ ಭಾರತ ದೇಶದಿಂದ ನಿರ್ಮೂಲನೆಯಾಗಿದ್ದು, ನೆರೆ ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೊ ರೋಗ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಪ್ರತಿವರ್ಷ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ ಎಂದರು. ಹಾಗೂ ಸ್ವಾಸ್ತ್ಯ ಭಾರತ ನಿರ್ಮಾಣಕ್ಕೆ ಲಸಿಕೆ ಹಾಕಿಸಿ ಎಂದು ಕರೆ ನೀಡಿದರು
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಶಶಿಧರ ಕುರೇರ, ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ ಇವರು ಮಾತನಾಡುತ್ತಾ, ಸದೃಡ ಭಾರತ ನಿರ್ಮಾಣಕ್ಕಾಗಿ ತಮ್ಮ ಎಲ್ಲ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು, ಮತ್ತು ಇದರ ಜೊತೆ ಉಳಿದ ಎಲ್ಲ ಲಸಿಕೆಗಳನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಹಾಕಿಸಬೇಕು ಅದರೊಂದಿಗೆ
ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು,ಕಸ ಸಂಗ್ರಹಣೆಗಾಗಿ ಮನೆ ಮನೆ ಗೆ ಬರುವ ಪಾಲಿಕೆಯ ಸಿಬ್ಬಂದಿಯವರಿಗೆ ತಮ್ಮ ಮನೆಯ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ನೀಡಿ ಸಹಕರಿಸಬೇಕೆಂzರು, ಅಲ್ಲದೆ ಪ್ರತಿ ಮನೆಗೊಂದು ಶೌಚಾಲಯ ಇರಲೇ ಬೇಕು, ಒಂದು ವೇಳೆ ಶೌಚಾಲಯ ಹೊಂದದೆ ಇರುªವÀರಿದ್ದರೆ, ಸರ್ಕಾರದ ಪ್ರೋತ್ಸಾಹ ಧನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಕರೆ ನೀಡಿದರು.
ವಾರ್ಡ ನಂ. 56 ರ ನಗರಸೇವಕರಾದ ಶ್ರೀಮತಿ. ಸುಚೇತಾ ಗಂಡಗುದರಿ ಇವರು ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ, ಪೋಲಿಯೊ ಆಬಿಯಾನವನ್ನು ಭಾರತ ದೇಶದಲ್ಲಿ 1995 ರಲ್ಲಿ ಪ್ರಾರಂಬಿಸಲಾಗಿದ್ದು, 27/03/2014 ರಂದು ಬಾರತ ದೇಶವು ಪೋಲಿಯೊ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರುತ್ತದೆ, ಆದರೂ ಸಹ ನಮ್ಮ ಅಕ್ಕ ಪಕ್ಕದ ದೇಶಗಳಲ್ಲಿ ಪೋಲಿಯೊ ಕಂಡು ಬರುತ್ತಿರುವದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರತಿವರ್ಷವೂ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ ಎಂದರು, ಇದರೊಂದಿಗೆ ಶೌಚಾಲಯ ನಿರ್ಮಿಸಿಕೊಂಡು ತಮ್ಮ ಸುತ್ತುಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕೆಂದರು.
ವೇದಿಕೆ ಮೇಲೆ ಡಾ: ಶಶಿಧರ ನಾಡಗೌಡ ಆರೋಗ್ಯಾಧಿಕಾರಿಗಳು ಮಹಾನಗರ ಪಾಲಿಕೆ ಬೆಳಗಾವಿ, ಡಾ:ಸಿದ್ದಲಿಂಗಯ್ಯ ಎಸ್.ಎಂ.ಒ. ಡಾ:ಸಂಜೀವ ನಾಂದ್ರೆ. ಟಿ.ಎಚ್.ಒ, ಶ್ರೀ ನದಾಫ ಸಿ.ಡಿ.ಪಿ.ಒ. ಡಾ:ಅನುಪಮಾ ತುಕ್ಕಾರ ಮಹಿಳಾ ವೈದ್ಯಾಧಿಕಾರಿಗಳು,ನಗರ ಕುಟುಂಬ ಕಲ್ಯಾಣ ಕೇಂದ್ರ ಕಣಬರ್ಗಿ,À ಶ್ರೀಮತಿ.ಎ.ಎಂ.ಮುರಗೋಡ ಮುಖ್ಯೋಪಾದ್ಯಯರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ , ಹಾಗೂ ಶ್ರೀಮತಿ ವೈಜಯಂತಿ ಚೌಗಲಾ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ, ಇವರು ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ಉಪಸ್ಥತರಿದ್ದ ಗಣ್ಯರು ಸಾಂಕೇತಿಕವಾಗಿ 5 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಪ್ರಾರಂಭದಲ್ಲಿ ಡಾ: ಅಪ್ಪಾಸಾಹೇಬ ನರಟ್ಟಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿದರು , ಡಾ: ಐ.ಪಿ ಗಡಾದ, ಜಿಲ್ಲಾ ಆರ್.ಸಿಎಚ್. ಅಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರೌಢ ಶಾಲೆ ಕಣಬರ್ಗಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡ ಗೀತೆ ಹಾಡಿದರು, ಡಾ:ಜಯಾನಂದ ವೈದ್ಯಾಧಿಕಾರಿಗಳು ನಗರ ಅರೋಗ್ಯ ಕೇಂದ್ರ ವಂಟಮೂರಿ ಇವರು ವಂದಿಸಿದರು, ಶ್ರೀ ಸಿ.ಜಿ ಅಗ್ನಿಹೋತ್ರಿ ಕಾರ್ಯಕ್ರಮ ನೀರೂಪಿಸಿದರು. ಶ್ರೀ ಬಿ.ಪಿ ಎಲಿಗಾರ ಕಾರ್ಯಕ್ರಮ ಸಂಘಟಿಸಿದರು.National Palsa Polio Program

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.