ಉತ್ತಮ ಸಮಾಜಕ್ಕಾಗಿ

ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ

0

ಬೆಳಗಾವಿ:( tarunkranti) ಮುಂಬೈ ಮೂಲದ ಬೃಹತ್ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ  ನಗರದ ಪೋಲಿಸರು ಬೃಹತ ಡ್ರಗ್ಸ್ ಜಾಲವೊಂದನ್ನು ಭೇದಿಸುದ್ದು ಸ್ಥಳಿಯ ಯುವಜನರು ಹಾಗೂ ಮುಂಬೈ ಮೂಲದ ಮಹಿಳೆ ಸೇರಿ 13 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ನಗರದ ಪೋಲಿಸ್ ಆಯುಕ್ತರ ಸಭಾಭವನದಲ್ಲಿ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಗರ ಪೋಲಿಸ ಆಯುಕ್ತ ಡಿ.ಸಿ. ರಾಜಪ್ಪ  ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ  ಮಾಹಿತಿ ನೀಡಿದರು.
ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ- Tarun kranti 1ಸ್ಥಳಿಯ ಯುವಕರಾದ ಯಾಶೀನ ಹಾಗೂ ಸೂರಜ ಇಬ್ಬರೂ ಮುಂಬೈ ಮೂಲದ ಸುಶೀಲಾ ಸ್ವಾಮಿ ಎಂಬ ಮಹಿಳೆಯ ಜೊತೆ ವ್ಯವಹಾರ ನಡೆಸಿ ಮುಂಬೈ ಯಿಂದ “ಫನ್ನಿ” ಎಂದು ಕರೆಯಲ್ಪಡುವ ಪೌಡರ ರೂಪದ ಡ್ರಗ್ಸ್ ನ್ನು ತಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು. ಇವರು ಹೆಚ್ಚಾಗಿ ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದು ₹300 ಹಾಗೂ 500 ರೂಪಾಯಿಗಳ ಪ್ಯಾಕೇಟಗಳಲ್ಲಿ ಡ್ರಗ್ಸ್ ಮಾರಟ ಮಾಡುತ್ತಿದ್ದರು ಎಂದು ತಿಳಿಸಿದರು. ಈ ರೀತಿಯ ಕೆಮಿಕಲ್ ಡ್ರಗ್ಸ್ ಗಳನ್ನು ಸೇವಿಸಿ ಕೆಲವು ಯುವಕರು ಕಲ್ಲು ತೂರಾಟದಲ್ಲಿಯೂ ಭಾಗವಾಗಿದ್ದಾರೆಂದು ಆರೋಪ ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಜೆ ಅವರು ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೀಮಾ ಲಾಟಕರ್, ಮಹಾನಿಂಗ ನಂದಗಾವಿ, ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.