ಉತ್ತಮ ಸಮಾಜಕ್ಕಾಗಿ

ವಿಜಯಾ ಆರ್ಥೋ& ಟ್ರಾಮಾ ಆಸ್ಪತ್ರೆಯಲ್ಲಿ ನೂತನ ರಕ್ತನಿಧಿಗೆ ಚಾಲನೆ

New blood donation at Vijaya Ortho & Trauma Hospital

0

ಬೆಳಗಾವಿ:(news belgaum) ನಗರದ ವಿಜಯಾ ಮತ್ತು ಆರ್ಥೊ ಟ್ರಾಮಾ ಕೇಂದ್ರದಲ್ಲಿ ನೂತನ ‘ರಕ್ತದಾನ ನಿಧಿ’ ಇಂದು ಉದ್ಘಾಟನೆಯಾಯಿತು. ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ದರಾಮ ಸ್ವಾಮೀಜಿ ಹಾಗೂ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಇಂದು ಉದ್ಘಾಟಿಸಿದರು.

ಡಾಕ್ಟರ್ ಆದವರಿಗೆ ಹಣಗಳಿಸುವುದೇ ಮುಖ್ಯ ಉದ್ದೇಶವಲ್ಲ. ವೈದ್ಯನಿಗೆ ಮುಖ್ಯವಾಗಿ ಸಾಮಾಜಿಕ ಕಳಕಳಿ, ಸಮಾಜಸೇವಾ ಮನೋಭಾವ ಇರಬೇಕು. ಇಂತಹ ಕೆಲಸ ಡಾ. ರವಿ ಪಾಟೀಲ ಸಂಸ್ಥೆ ನಿಸ್ವಾರ್ಥತೆಯಿಂದ ಮಾಡುತ್ತ ನಡೆಯುತ್ತಿದೆ ಎಂದು ಕಾರಂಜಿ ಶ್ರೀ ಗುರುಸಿದ್ದ ಸ್ವಾಮೀಜಿ ಅವರು ಬಣ್ಣಿಸಿದರು. ರಕ್ತದಾನ ನಿಜವಾಗಿಯೂ ಮಹಾದಾನ. ರಕ್ತ ಕೊಡುವುದರಿಂದ ಸ್ವ-ಆರೋಗ್ಯ ಸುಧಾರಿಸಿ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದರು. ದೇವಸ್ಥಾನಗಳಿಗೆ ಹೋಗಿ ಆಶೀರ್ವಾದ ಪಡೆಯುವ ಬದಲು, ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಅನಂತ ಆಶೀರ್ವಾದ ಪಡೆಯಿರಿ ಎಂದು ಜನತೆಗೆ ಕರೆ ನೀಡಿದರು.
ವ್ಯಕ್ತಿಯೊಬ್ಬರಿಗೆ ಹೃದಯ ದಾನ ಮಾಡಿದ ಮಹಿಳೆಯೊಬ್ಬರ ಸಹೋದರಿ ಆರತಿ ಪಟೋಳಿ ಅವರಿಗೆ ಈ ಸಂದರ್ಭ ಸನ್ಮಾನಿಸಲಾಯಿತು.
ಶ್ರೀ. ಡಾ. ಸಿದ್ದರಾಮ ಸ್ವಾಮೀಜಿ ಮಾತನಾಡಿ ವಿಧ್ಯಾದಾನ, ಆಹಾರದಾನದ ಜತೆಗೆ ಈಗ ರಕ್ತ, ಹೃದಯ ದಾನ ಮಾಡುವಂತಹ ಕಾಲ ಬಂದಿದೆ. ತಾಳ್ಮೆಯಿಲ್ಲದ ಆಧುನಿಕ ಯುಗದಲ್ಲಿ ಅಪಘಾತಗಳಿಗೆ ಜನತೆ ಒಳಗಾಗುವುದರಿಂದ ರಕ್ತದ ಬೇಡಿಕೆ ಹೆಚ್ಚುತ್ತಿದೆ. ಉತ್ತಮ ರಕ್ತವನ್ನು ಅನಾರೋಗ್ಯ ಪೀಡಿತ ಜನರಿಗೆ, ಕೊಡುವ ಕೆಲಸ ಆಗಬೇಕಾಗಿದ್ದರಿಂದ ರಕ್ತದಾನ ಮಹತ್ವ ಪಡೆದಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ. ರವಿ ಪಾಟೀಲ, ಲತಾ ಅಮಾಸಿ, ಡಾ. ಪುಟ್ಟಿ, ಬಸವರಾಜ ರೊಟ್ಟಿ, ರಾಜು ಚಿಕ್ಕನಗೌಡ್ರ, ಸಂಜಯ ಸುಂಟಕರ, ಚಂದ್ರಕಾಂತ ಬುಡರಕಟ್ಟಿ, ಲೀನಾ ಟೋಪನ್ನವರ ಇತರರು ಉಪಸ್ಥಿತರಿದ್ದರು.New blood donation at Vijaya Ortho & Trauma Hospital

Leave A Reply

 Click this button or press Ctrl+G to toggle between Kannada and English

Your email address will not be published.