ಉತ್ತಮ ಸಮಾಜಕ್ಕಾಗಿ

ಆರೋಹಣ ಪೊಲೀಸ್ ರನ್’

news

0

ಬೆಳಗಾವಿ:(news belgaum) ಅತ್ಯಾಕರ್ಷಕ ‘ಆರೋಹಣ ನಮ್ಮ ಪೊಲೀಸ್ ರನ್’ ಮ್ಯಾರಥಾನ್ ಇಂದು ಗಮನ ಸೆಳೆಯಿತು. ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನದಲ್ಲಿ ನಗರ ಪೊಲೀಸ್, M SQUARE ನೆಟವರ್ಕ್ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಅಪರೂಪದ ಮ್ಯಾರಥಾನ್ ಭಾನುವಾರ ಬೆಳಂಬೆಳಿಗ್ಗೆ ಚಾಲನೆ ಪಡೆಯಿತು.
ಉತ್ತರ ವಲಯ ಐಜಿಪಿ ಅಲೋಕಕುಮಾರ ಹಾಗೂ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಹಾಗೂ ಡಿಸಿಪಿ ಸೀಮಾ ಲಾಟಕರ ಮ್ಯಾರಥಾನಗೆ ಚಾಲನೆ ನೀಡಿದರು.
News Belgaum-ಆರೋಹಣ ಪೊಲೀಸ್ ರನ್’ News Belgaum-ಆರೋಹಣ ಪೊಲೀಸ್ ರನ್’ 1 News Belgaum-ಆರೋಹಣ ಪೊಲೀಸ್ ರನ್’ 2 News Belgaum-ಆರೋಹಣ ಪೊಲೀಸ್ ರನ್’ 3ಸೈನ್ಯಾಡಳಿತದ (MLIRC)ಸೈನಿಕರು ಆಕರ್ಷಕ ಬ್ಯಾಂಡ್ ವಾದ್ಯ ಪ್ರಸ್ತುತಪಡಿಸಿದರು. ಸಿಪಿಎಡ್ ಮೈದಾನದಿಂದ-ಗಣಪತಿ ದೇವಸ್ಥಾನ ಹಾಗೂ ಹನುಮಾನ ನಗರ ಸರ್ಕಲ್ ಮೂಲಕ ಮತ್ತೆ ಸಿಪಿಎಡ್ ಮೈದಾನದವರೆಗೆ ಸಾವಿರಾರು ಸಾರ್ವಜನಿಕರು ಮ್ಯಾರಥಾನ್ ಗೆ ಹೆಜ್ಜೆ ಹಾಕಿದರು. ದೈಹಿಕ ವ್ಯಾಯಾಮ ಮತ್ತು ಒತ್ತಡ ತಗ್ಗಿಸುವ ‘ಫಿಟನೆಸ್ ಮ್ಯಾರಥಾನ್’ ವಿಶೇಷವಾಗಿ ಪೊಲೀಸರಿಗೆ ಆಯೋಜಿಸಲಾಗಿತ್ತು.
ಎಂಎಲ್ ಐಆರ್ ಸಿ, ಕೆಎಸ್ ಆರ್ ಪಿ ಒಳಗೊಂಡು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು. ಎಸಿಪಿ ಶಂಕರ ಮಾರಿಹಾಳ, ಇನ್ಸಪೆಕ್ಟರ್ ಗಳಾದ ಜಾವೇದ ಮುಶಾಪುರಿ, ಜೆ. ಎಂ. ಕಾಲಿಮಿರ್ಚಿ, ನಿರಂಜನ ಪಾಟೀಲ, ಬಿ. ಆರ್. ಗಡ್ಡೇಕರ, ರಮೇಶ ಗೋಕಾಕ, ಎ. ಎಸ್. ಗುದಗೊಪ್ಪ, ಚನ್ನಕೇಶವ ಟಿಂಗರಿಕರ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.