ಉತ್ತಮ ಸಮಾಜಕ್ಕಾಗಿ

ಸೆ. 15ರಂದು ಮುಖ್ಯಮಂತ್ರಿಗಳಿಂದ ಜನತಾದರ್ಶನ

news belagavi

0

ಬೆಳಗಾವಿ 🙁news belgaum) ಮಾನ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೆಪ್ಟೆಂಬರ್ 15 ರಂದು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಸಾರ್ವಜನಿಕರನ್ನು ಭೇಟಿ ಮಾಡಿ, ಕುಂದುಕೊರತೆಗಳನ್ನು ಆಲಿಸುವುದರ ಜತೆಗೆ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರು ಮುಂಚಿತವಾಗಿಯೇ ಅಂದರೆ ಮಧ್ಯಾಹ್ನ 1 ಗಂಟೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ತಿಳಿಸಿದ್ದಾರೆ.
ಹೆಸರು ನೋಂದಣಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ವಿಶೇಷ ತಂಡ ಆಗಮಿಸಲಿದ್ದು, ಅಹವಾಲು ಸಲ್ಲಿಸುವ ಸಾರ್ವಜನಿಕರ ಹೆಸರುಗಳನ್ನು ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆಯನ್ನು ನೀಡಲಾಗುವುದು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದ ಅಹವಾಲುಗಳಿಗೆ ಅವಕಾಶವಿರುವುದಿಲ್ಲ.
ವೈದ್ಯಕೀಯ ಪರಿಹಾರ ನಿಧಿಗೆ ಕೋರಿಕೆ ಸಲ್ಲಿಸುವವರು ಆಧಾರ್ ಕಾರ್ಡು ಅಥವಾ ಬಿಪಿಎಲ್ ಕಾರ್ಡು, ಆಸ್ಪತ್ರೆಯ ಬಿಲ್ಲುಗಳು ಮತ್ತು ಚಿಕಿತ್ಸೆಯ ವಿವರಗಳ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಜಿಲ್ಲೆಯ ಜನರು ಸೆ.15 ರಂದು ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಜನತಾದರ್ಶನದಲ್ಲಿ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.