ಉತ್ತಮ ಸಮಾಜಕ್ಕಾಗಿ

ಪೊಲೀಸ್ ಮತ್ತು ಸಾರ್ವಜನಿಕ ಘರ್ಷಣೆ ಏಳು ಜನರ ಮೇಲೆ ಎಫ್ ಐ ಆರ್

news

0

ಪೊಲೀಸ್ ಮತ್ತು ಸಾರ್ವಜನಿಕ ಘರ್ಷಣೆ ಏಳು ಜನರ ಮೇಲೆ ಎಫ್ ಐ ಆರ್

ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಿಜೆಐ ಸಂಚರಿಸುವ ವೇಳೆ ಕೆ. ಕೆ. ಕೊಪ್ಪ ಕ್ರಾಸನಲ್ಲಿ ನಡೆದ ವಾಹನ ನಿಷೇಧದ ನಂತರ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ನಡೆದಿದೆ.

ಬಗ್ಗೆ ಸದ್ಯ ಏಳು ಜನರ ಮೇಲೆ ಎಫ್ ಐಆರ್ ದಾಖಲಾಗಿದ್ದು  , ಸುರೇಶ ಕಂಬಿ, ಸಂತೋಷ ಗಂಗಯ್ಯ ಕಂಬಿ, ಮಂಜುನಾಥ ಸುರೇಶ ಕಂಬಿ, ರಾಚಯ್ಯ ಕಾಂತಯ್ಯ ಕಂಬಿ, ಗಂಗಪ್ಪಾ ಮಾಸ್ತಮರ್ಡಿ, ಸಿದ್ರಾಯಿ ವಾಲಿ, ಯಲ್ಲಪ್ಪ ತಳವಾರ ಸೇರಿದಂತೆ ಸುಮಾರು 50ರಿಂದ 60ಜನರ ವಿರುದ್ದ ಹಿರೆಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರೇಬಾಗೇವಾಡಿ ಠಾಣೆ ಪೊಲೀಸ್ ಪೇದೆ ಬಾಬು ಎಂ. ಚಂದರಗಿ ಮತ್ತು ಸುರೇಶ ಕಂಬಿ ಎಂಬುವವರ ನಡುವೆ ವಾಗ್ವಾದವಾಗಿತ್ತು. ನಂತರ ಕಾಂಗ್ರೆಸ್ ಕಾರ್ಯಕರ್ತರು ಠಾಣೆಗೆ ನುಗ್ಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು.

ಜತೆಗೆ ರಿವಾಲ್ವರ್ ಪ್ರದರ್ಶನ ನಡೆಸಿದ ಬಗ್ಗೆ FIRನಲ್ಲಿ ನಮೂದಿಸಲಾಗಿದೆ. ಪೊಲೀಸ್ ಕೆಲಸಕ್ಕೆ ಅಡಚಣೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಹಿರೇಬಾಗೇವಾಡಿ ಪೊಲೀಸ್ ಸಿಬ್ಬಂಧಿ ಠಾಣೆ ಎದುರೇ ಪ್ರತಿಭಟನೆ ನಡೆಸಿದ್ದರು. ////

Leave A Reply

 Click this button or press Ctrl+G to toggle between Kannada and English

Your email address will not be published.