ಉತ್ತಮ ಸಮಾಜಕ್ಕಾಗಿ

ಗ್ರಾಮೀಣ ಜನರಿಗೆ ತಾಂತ್ರಿಕ ಬಳಕೆ ಸೇವೆ ಅಗತ್ಯ ಪ್ರಾಚಾರ್ಯ ಎನ್.ಎನ್.ತುಳಸಿಗೇರಿ

news belgaum

0

ಬೆಳಗಾವಿ:(news belgaum) ಇಂದು ತಾಂತ್ರಿಕ ಯುಗ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ತಾಂತ್ರಿಕ ಉಪಕರಣಗಳ ಹಾಗೂ ತಾಂತ್ರಿಕ ಸೇವೆಗಳಾ ಗೃಹಬಳಕೆ, ಉಪಕರಣಗಳ ರಿಪೇರಿ, ವಾಹನಗಳ ಸರ್ವಿಸಿಂಗ್,ನಗದು ರಹಿತ ವ್ಯವಹಾರ, ಡಿಜಿಟಲ್ ಇಂಡಿಯಾ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಗಳ ಮಾಹಿತಿ ನೀಡಬೇಕಾಗಿದೆ ಎಂದು ಮೋತಿಚಂದ ಲೇಂಗಡೆ ಭರತೇಶ ಪಾಲಿಟೆಕ್ನಿಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎನ್,ತುಳಸಿಗೇರಿ ಅವರು ಅಭಿಪ್ರಾಯಪಟ್ಟರು.
ಇತ್ತಿಚಿಗೆ ಶಿಂದೋಳ್ಳಿ ಗ್ರಾಮದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರಲ್ಲಿ ಎಲ್ಲ ರೀತಿಯ ತಾಂತ್ರಿಕ ಸೇವೆ ಮತ್ತು ಸ್ವಚ್ಛತೆಯ , ಮತದಾಣ ಬಗ್ಗೆ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗ್ರಾಮೀಣರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಜನರಿಗೆ ತಾಂತ್ರಿಕ ಬಳಕೆ ಸೇವೆ ಅಗತ್ಯ ಪ್ರಾಚಾರ್ಯ ಎನ್.ಎನ್.ತುಳಸಿಗೇರಿ- Tarun krantiರಾಷ್ಟ್ರೀಯ ಸೇವಾಯೋಜನೆಯ ಹಾಡನ್ನು 4ನೇ ಸೆಮಿಸ್ಟರಿನ ವಿದ್ಯಾರ್ಥಿನಿಯರಾದ ಕು.ಲಕ್ಷ್ಮೀ, ಅಂಜಲಿ, ನಾಗವೇನಿ ಮತ್ತು ಚೈತ್ರಾ ಹಾಡಿದರು. ಸರಕಾರಿ ಶಾಲೆಯ ಪ್ರಧಾನ ಗುರುಗಳಾದ ಶ್ರೀ.ಎನ್.ಎಮ್.ಹೊಳೆನ್ನವರ ಮಾತನಾಡುತ್ತ ಶಿಬಿರಾರ್ಥಿಗಳಿಗೆ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಶಿಬಿರವನ್ನು ಯಶಸ್ಸು ಮೂಡಬೇಕೆಂದು ಹೇಳಿದರು.
ಕೊನೆಯದಾಗಿ ಅಧ್ಯಕ್ಷತೆಯ ಮಾತುಗಳನ್ನು ಶ್ರೀ. ಮಹಾದೇವ ವೈ ತಿಗಡಿ ಅವರು ಮಾತನಾಡುತ್ತ ಶಿಬಿರಾರ್ಥಿಗಳು ಗ್ರಾಮದಲ್ಲಿ ಅನೇಕ ರೀತಿಯ ಅರಿವು ಜನರಲ್ಲಿ ಮೂಡಿಸಬೇಕೆಂದು ಹೇಳುತ್ತಾ ಅದಕ್ಕೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. .ಬೀರಾ ಅನಗೋಳಕರ, ಇನ್ನಿತರ ಎಲ್ಲ ಗ್ರಾಮದ ಹಿರಿಯರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಯಾದ ಚೇತನ ಅ ಬೋಗಾರ ನಿರೂಪಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.