ಉತ್ತಮ ಸಮಾಜಕ್ಕಾಗಿ

ನನಗೆ ವಾರ್ನಿಂಗ್ ಮಾಡುವ ಪ್ರಶ್ನೆ ಬರೊಲ್ಲ: ಸತೀಶ ಜಾರಕಿಹೊಳಿ

news belagavi

0

ಬೆಳಗಾವಿ:(news belgaum) ಜಿಲ್ಲೆಯ ವಿಚಾರದಲ್ಲಿ ಇತರ ನಾಯಕರ ಸತತ ಹಸ್ತಕ್ಷೇಪದಿಂದ ಸಮಸ್ಯೆ ಉಲ್ಭಣವಾಗಿದೆ. ಪಕ್ಷದ ಉನ್ನತ ನಾಯಕರು ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬುವುದು ನನ್ನ ವಿಶ್ವಾಸ. ಪ್ರಸ್ತುತ ಕಾಂಗ್ರೆಸ್​ ತೊರೆದು ಯಾರೂ ಹೊರ ಹೋಗುತ್ತಿಲ್ಲ ಎಂದು ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ ನನಗೂ ಮತ್ತು ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ. ನಾನು ಅಸಮಾಧಾನ ಹೊಂದಿಲ್ಲ ಆದ್ದರಿಂದ ನನಗೆ ಹೈಕಮಾಂಡ್​ ವಾರ್ನಿಂಗ್​​ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದರು. ಮುಂದುವರೆದು ಕಾಂಗ್ರೆಸ್​ನಲ್ಲಿ ಅಷ್ಟೇ ಅಲ್ಲ… ಇತರ ಪಕ್ಷಗಳಲ್ಲಿಯೂ ಅಸಮಾಧಾನ ಇದ್ದೇ ಇದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಅತೃಪ್ತರು ಹುಟ್ಟಿಕೊಂಡಿದ್ದಾರೆ ಮತ್ತು ಅವರ ನೇತೃತ್ವ ಯಾರು ವಹಿಸಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಹಿರಿಯ ಸಚಿವ ಡಿ.ಕೆ. ಶಿವಕುಮಾರ ಮತ್ತು​​ ನನ್ನ ನಡುವೆ ಭೇಟಿ ಆಗಿಲ್ಲ. ಬೆಳಗಾವಿ ಜಿಲ್ಲೆಯ ವಿಭಜನೆಗಾಗಿ ಎರಡು ದಶಕಗಳಿಂದ ಹನರ ಬೇಡಿಕೆ ಇದೆ. ನಾನು ಪ್ರಸ್ತಾಪ ಮಾಡಿದ್ದೇನೆ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಿಭಜನೆ ವಿಚಾರ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಯಬೇಕು ಎಂದರು. ಸೆಪ್ಟಂಬರ್​ 16ರಂದು ನಡೆಯುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೆ ಏನು ಗೊತ್ತಿಲ್ಲ. ಮಂತ್ರಿ ಮಂಡಳ ವಿಸ್ತರಣೆ ವೇಳೆ ನಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ವಿಶ್ವಾಸವಿದೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.