ಉತ್ತಮ ಸಮಾಜಕ್ಕಾಗಿ

ಮುಖ್ಯಮಂತ್ರಿಗಳಿಂದ ಜನತಾದರ್ಶನ: ವಿಶೇಷ ಉಚಿತ ಬಸ್ ಸೌಲಭ್ಯ

news belagavi

0
ಬೆಳಗಾವಿ, (news belgaum)ಮಾನ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶನಿವಾರ (ಸೆ.15) ಸುವರ್ಣ ವಿಧಾನಸೌಧದಲ್ಲಿ ಜನತಾ ದರ್ಶನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ವಿಶೇಷ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಗಾವಿ ನಗರದ ಸಿಬಿಟಿ ಹಾಗೂ ಸುವರ್ಣಸೌಧದ ಮಧ್ಯೆ ಶನಿವಾರ ವಿಶೇಷ ಬಸ್ ಗಳು ಸಂಚರಿಸಲಿವೆ.
ಮುಖ್ಯಮಂತ್ರಿಗಳು ಮಧ್ಯಾಹ್ನ 3 ಗಂಟೆಯಿಂದ ಜನತಾದರ್ಶನ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಅಹವಾಲುಗಳನ್ನು ಸಲ್ಲಿಸುವ ಸಾರ್ವಜನಿಕರು ಮಧ್ಯಾಹ್ನ 1 ಗಂಟೆಗೆ ಸುವರ್ಣಸೌಧಕ್ಕೆ ಆಗಮಿಸಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕಿರುತ್ತದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿರುತ್ತದೆ.
ಒಟ್ಟು  5 ಬಸ್ ಗಳು ಮಧ್ಯಾಹ್ನ 12 ಗಂಟೆಯಿಂದ ಸಿಬಿಟಿ ಹಾಗೂ ಸುವರ್ಣಸೌಧದ ಮಧ್ಯೆ ಸಂಚರಿಸಲಿವೆ.
ಬೆಳಗಾವಿ ನಗರದಿಂದ ಸುವರ್ಣಸೌಧದ ದೂರದಲ್ಲಿರುವುದರಿಂದ ಅಹವಾಲು ಸಲ್ಲಿಸಲು ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಉಚಿತ ಬಸ್ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: