ಉತ್ತಮ ಸಮಾಜಕ್ಕಾಗಿ

ಪೊಲೀಸ್ ಸಿಬ್ಬಂಧಿ ತಮ್ಮ ಕೆಲಸ-ಕಾರ್ಯ ಮತ್ತು ಸ್ವ-ಆರೋಗ್ಯ ಸಮಾನಾಂತರವಾಗಿ ನೋಡಿಕೊಳ್ಳಬೇಕು ಎಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ಕರೆ

The Northern Zone IGP Allocution Case calls for police staff to maintain their work-and-self-health parallel

0

ಬೆಳಗಾವಿ: (news belagavi)ಪೊಲೀಸ್ ಸಿಬ್ಬಂಧಿ ತಮ್ಮ ಕೆಲಸ-ಕಾರ್ಯ ಮತ್ತು ಸ್ವ-ಆರೋಗ್ಯ ಸಮಾನಾಂತರವಾಗಿ ನೋಡಿಕೊಳ್ಳಬೇಕು ಎಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ಕರೆ ನೀಡಿದರು. ರಾಜ್ಯ ಪೊಲೀಸ್, ಬೆಳಗಾವಿ ರೇಂಜ್ ಹಾಗೂ ನಗರ ಪೊಲೀಸ್ ವತಿಯಿಂದ ಇಂದು ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ಧ್ವಜ ದಿನ ಹಾಗೂ ಪೊಲೀಸ್ ಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪೊಲೀಸ್ ಸಿಬ್ಬಂಧಿ ತಮ್ಮ ಕೆಲಸ-ಕಾರ್ಯ ಮತ್ತು ಸ್ವ-ಆರೋಗ್ಯ ಸಮಾನಾಂತರವಾಗಿ ನೋಡಿಕೊಳ್ಳಬೇಕು ಎಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ಕರೆ- Tarun krantiಇತರ ಎಲ್ಲ ಇಲಾಖೆಗಳಂತೆ ಪೊಲೀಸ್ ಇಲಾಖೆಯು ಸಹ ಒತ್ತಡದ ಕೆಲಸ ನಿರ್ವಹಿಸುತ್ತದೆ. ಎಡೆಬಿಡದ ಕೆಲಸ ನಿರ್ವಹಿಸುವಾಗ ಸಿಬ್ಬಂಧಿ ಯಾವುದೇ ಕಾರಣಕ್ಕೂ ತಮ್ಮ ಸ್ವ-ಆರೋಗ್ಯದ ಕಾಳಜಿ ಕೈ ಬಿಡಬಾರದು ಎಂದು ಅಲೋಕಕುಮಾರ ಸಲಹೆ ನೀಡಿದರು. ಪೊಲೀಸರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ವ್ಯಾಯಾಮ ಶಿಬಿರಗಳನ್ನು ಏರ್ಪಡಿಸಲಾಗುವುದು, ಇಲಾಖೆಯ ಕಲ್ಯಾಣ ಮತ್ತು ಉನ್ನತೀಕರಣಕ್ಕೆ ಹೆಚ್ಚಿನ ಅನುದಾನ ಸರಕಾರದಿಂದ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿ ಚುನಾವಣೆ, ಚುನಾವಣೆಗಳು ಸಮರ್ಪಕ ಮತ್ತು ಪಾರದರ್ಶಕವಾಗಿ ನಡೆದಾಗ ಮಾತ್ರ ಉತ್ತಮ ಸರಕಾರ, ಉತ್ತಮ ಆಡಳಿತ ನಿರೀಕ್ಷಿಸಬಹುದು. ಅದರಂತೆ ಚುನಾವಣೆ ನ್ಯಾಯಬದ್ಧವಾಗಿ ನಡೆಯಬೇಕಾದರೆ ಪೊಲೀಸರ ಎಡೆಬಿಡದ ಎಚ್ಚರ ಮತ್ತು ಸಾರ್ಥಕ ಶ್ರಮ ಅಗತ್ಯವಾಗಿದೆ. ಜಿಲ್ಲಾಡಳಿತದ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ಚುನಾವಣೆ ಕೆಲಸದಲ್ಲಿ ತೊಡಗಿಕೊಳ್ಳಬೇಕೆಂದು ಅಲೋಕಕುಮಾರ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತಿ ಪಿಎಸ್ ಐ ಎ. ಡಿ. ಪಠಾಣ & ಎ. ಎಂ. ಮರಾಠೆ ಆಗಮಿಸಿದ್ದರು. DIG ಡಿ. ಸಿ. ರಾಜಪ್ಪ, ಎಸ್ಪಿ ಸುಧೀರಕುಮಾರ ರೆಡ್ಡಿ, ಡಿಸಿಪಿ ಸೀಮಾ ಲಾಟಕರ, ಮಹಾನಿಂಗ ನಂದಗಾವಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು & ಸಿಬ್ಬಂಧಿ ಭಾಗವಹಿಸಿದರು.The Northern Zone IGP Allocution Case calls for police staff to maintain their work-and-self-health parallel

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.