ಉತ್ತಮ ಸಮಾಜಕ್ಕಾಗಿ

ಆತಂಕ ಬೇಡ; ಎಚ್ಚರಿಕೆ ಇರಲಿ- ಜಿಲ್ಲಾಧಿಕಾರಿ ಜಿಯಾವುಲ್ಲಾ ನೀಫಾ ವೈರಾಣು ಜ್ವರ: ನಿಯಂತ್ರಣಕ್ಕೆ ಸೂಚನೆ

Not anxiety; Be careful - Deputy Commissioner Jiaullah Nefa Viruvu fever: Notification for control

0

ಬೆಳಗಾವಿ: (news belgaum)ಮಾರಣಾಂತಿಕವಾಗಿರುವ ನೀಫಾ ವೈರಾಣು ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಈ ಜ್ವರ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೀಫಾ ವೈರಾಣು ಜ್ವರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ(ಮೇ 23) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆತಂಕ ಬೇಡ; ಎಚ್ಚರಿಕೆ ಇರಲಿ- ಜಿಲ್ಲಾಧಿಕಾರಿ ಜಿಯಾವುಲ್ಲಾ ನೀಫಾ ವೈರಾಣು ಜ್ವರ: ನಿಯಂತ್ರಣಕ್ಕೆ ಸೂಚನೆ- Tarun krantiಸೋಂಕಿತ ಬಾವಲಿಗಳ ಮೂಲಕ ಹರಡುತ್ತಿರುವ ಈ ವೈರಾಣು ಜ್ವರಕ್ಕೆ ಸದ್ಯದ ಮಟ್ಟಿಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಔಷಧಿ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ನೀಫಾ ವೈರಾಣು ಜ್ವರವನ್ನು ನಿಯಂತ್ರಿಸುವುದೇ ಸೂಕ್ತ.
ಜ್ವರ ಹೇಗೆ ಹರಡುತ್ತದೆ, ಅದರ ಲಕ್ಷಣಗಳೇನು, ರೋಗ ಪತ್ತೆ ಹಚ್ಚುವುದು ಹೇಗೆ ಹಾಗೂ ನೀಫಾ ವೈರಾಣು ಜ್ವರವನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಜನರು ಸೇರುವ ಸಂತೆಗಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಜ್ವರ ಹರಡದಂತೆ ತಡೆಗಟ್ಟಬೇಕು ಎಂದು ಹೇಳಿದರು.
ಅದೇ ರೀತಿ ವೈರಾಣು ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳು ತಿನ್ನುವುದರಿಂದ ಈ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಗಿಡದಿಂದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ತಿನ್ನದಂತೆ ಜನರಲ್ಲಿ ಅರಿವು ಮೂಡಿಸಬೇಕು.
ಆತಂಕ ಬೇಡ; ಎಚ್ಚರಿಕೆ ಇರಲಿ- ಜಿಲ್ಲಾಧಿಕಾರಿ ಜಿಯಾವುಲ್ಲಾ ನೀಫಾ ವೈರಾಣು ಜ್ವರ: ನಿಯಂತ್ರಣಕ್ಕೆ ಸೂಚನೆ- Tarun kranti 1ವಿಶೇಷವಾಗಿ ಕಾಡು ಪ್ರದೇಶ ಹೆಚ್ಚಾಗಿರುವ ಖಾನಾಪುರ ತಾಲ್ಲೂಕಿನಲ್ಲಿರುವ ಗಿರಿಜನರು ಇಂತಹ ಹಣ್ಣುಗಳನ್ನು ಸೇವಿಸುವುದು ಹೆಚ್ಚಾಗಿರುತ್ತದೆ. ಅಂತಹ ಜನಸಮುದಾಯದಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಇನ್ನು ಶಾಲಾ-ಕಾಲೇಜುಗಳು, ವಸತಿನಿಲಯಗಳಲ್ಲೂ ಕೂಡ ಈ ಬಗ್ಗೆ ತಿಳಿವಳಿಕೆ ನೀಡುವ ಮೂಲಕ ಮಕ್ಕಳನ್ನು ಈ ಜ್ವರದ ಅಪಾಯದಿಂದ ದೂರ ಇಡಬೇಕು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಹೇಳಿದರು.

ಖಾನಾಪುರದಲ್ಲಿ ಹೆಚ್ಚು:
ಖಾನಾಪುರದಲ್ಲಿ ಬಾವಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕಿತ ಬಾವಲಿಗಳಿಂದ ನೀಫಾ ವೈರಾಣು ಜ್ವರ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ್ ನರಟ್ಟಿ ಆತಂಕ ವ್ಯಕ್ತಪಡಿಸಿದರು.
ಖಾನಾಪುರದ ತಹಶೀಲ್ದಾರ ಕಚೇರಿ, ನಂದಗಡದ ಬಳ ಇರುವ ರಾಯಣ್ಣನದ ಸಮಾಧಿ ಸ್ಥಳದ ಸುತತಮುತ್ತಲು ಹಾಗೂ ಅದೇ ರೀತಿ ಬೆಳಗಾವಿಯ ಕೋಟೆ ಪ್ರದೇಶದಲ್ಲಿ ಬಾವಲಿಗಳು ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ವಿಶೇಷ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯ ಯಾವುದೇ ಪ್ರದೇಶದಲ್ಲಾದರೂ ಬಾವಲಿಗಳ ಅಸಹಜ ಸಾವು ಕಂಡುಬಂದರೆ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸುವಂತೆ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.

ವೈದ್ಯಕೀಯ ಸೌಲಭ್ಯ:
ಹೊಸದಾಗಿ ಕಂಡುಬಂದಿರುವ ನೀಫಾ ವೈರಾಣು ಜ್ವರ ಹರಡುವಿಕೆಯಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ; ಇದರ ನಿಯಂತ್ರಣಕ್ಕೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು, ತಾಲ್ಲೂಕು ಆಸ್ಪತ್ರೆಗಳಲ್ಲಿರುವ ತುರ್ತು ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಡಾ.ನರಟ್ಟಿ ಹೇಳಿದರು.

ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನೀಫಾ ವೈರಾಣುಗಳನ್ನು ಗುರುತಿಸಬಹುದು. ಈ ಪರೀಕ್ಷೆಯನ್ನು ಸದ್ಯಕ್ಕೆ ಪುಣೆ ಹಾಗೂ ನಮ್ಮ ರಾಜ್ಯದ ಮಣಿಪಾಲದಲ್ಲಿ ಮಾಡಲಾಗುತ್ತದೆ. ಈ ಜ್ವರದಿಂದ ಬಳಲುತ್ತಿರುವ ಸಂಶಯಗಳು ಬಂದರೆ ಅವರ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಅವರು ವಿವರಿಸಿದರು.
ನೀಫಾ ವೈರಾಣು ಜ್ವರದಿಂದ ಬಳಲುವ ಜನರಿಗೆ ತಕ್ಷಣವೇ ವೈದ್ಯಕೀಯ ಸೌಲಭ್ಯ ಒದಗಿಸಲು ಪ್ರತಿ ಆಸ್ಪತ್ರೆಯಲ್ಲೂ ವಿಶೇಷ ವಾರ್ಡ ಸ್ಥಾಪಿಸುವುದರ ಜತೆಗೆ ಉತ್ತಮ ವೈದ್ಯರನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಹಂದಿಗಳ ನಿಯಂತ್ರಣಕ್ಕೆ ಸೂಚನೆ:
ನೀಫಾ ವೈರಾಣು ಜ್ವರವು ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಈ ಜ್ವರವು ಪ್ರಾಣಿಯಿಂದ ಮನುಷ್ಯರಿಗೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುವುದರಿಂದ ನಗರದಲ್ಲಿರುವ ಹಂದಿಗಳನ್ನು ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು.
ನೀಫಾ ವೈರಾಣು ಜ್ವರದ ಬಗ್ಗೆ ಆತಂಕ ಬೇಡ; ಎಚ್ಚರವಿರಲಿ. ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಕರಪತ್ರ-ಭಿತ್ತಿಪತ್ರಗಳ ಬಿಡುಗಡೆ:
ನೀಫಾ ವೈರಸ್ ಕುರಿತ ಜಾಗೃತಿ ಕರಪತ್ರ ಹಾಗೂ ಅತಿಸಾರ ಭೇದಿ ಕುರಿತ ಜಾಗೃತಿ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಹಾಗೂ ಜಿಲ್ಲಾ ಪಂಚಾಯತ ಸಿಇಒ ರಾಮಚಂದ್ರನ್ ಅವರು ಬಿಡುಗಡೆಗೊಳಿಸಿದರು.
ಚಿಕ್ಕೋಡಿಗೆ ಸ್ವಸ್ಥ ಭಾರತ ಕಾರ್ಯಕ್ರಮದಡಿ ಪ್ರಶಸ್ತಿ ಹಾಗೂ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದಕ್ಕಾಗಿ ಚಿಕ್ಕೋಡಿ ತಾಲೂಕಿನ ಆರೋಗ್ಯಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್., ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಆರ್‍ಸಿಎಚ್ ಅಧಿಕಾರಿ ಡಾ.ಐ.ಪಿ.ಗಡಾದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನೀಫಾ ವೈರಾಣು ಜ್ವರ ಎಂದರೇನು?
• ಇದೊಂದು ಹೊಸದಾಗಿ ಕಂಡುಬಂದಿರುವ ವೈರಾಣು ಸೋಂಕು. ಇದನ್ನು ನೀಫಾ ಎನ್ಸಫಲೈಟೀಸ್ ಎಂದು ಹೆಸರಿಸಲಾಗಿದೆ.
• ಮಲೇಶಿಯಾದ ನೀಫಾ ಎಂಬ ಗ್ರಾಮದಲ್ಲಿ ಈ ವೈರಾಣು ಕಂಡುಬಂದಿರುವುದರಿಂದ ಇದಕ್ಕೆ ನೀಫಾ ವೈರಾಣು ಜ್ವರ ಎಂದು ಕರೆಯಲಾಗಿದೆ.
• ಈ ಜ್ವರವು ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರನ್ನು ಬಾಧಿಸುತ್ತದೆ.

ನೀಫಾ ವೈರಾಣು ಜ್ವರದ ಲಕ್ಷಣಗಳು
• ಮನುಷ್ಯರಲ್ಲಿ: ಜ್ವರ, ತಲೆನೋವು, ತಲೆಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನತಪ್ಪುವುದು ನಂತರ ಸಾವು ಸಂಭವಿಸಬಹುದು.
• ಪ್ರಾಣಿಗಳಲ್ಲಿ: ಹಂದಿಗಳಲ್ಲಿ ಉಸಿರಾಟದ ತೊಂದರೆ, ನರದೌರ್ಬಲ್ಯ(ನರಮಂಡಲದ ಸಿಂಡ್ರೋಮ್)

ನೀಫಾ ಜ್ವರ ಹೇಗೆ ಹರಡುತ್ತದೆ?
• ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಕಚ್ಚಿ ಬಿಸಾಡಿದ ಹಣ್ಣುಹಂಪಲುಗಳನ್ನು ಸೇವಿಸುವುದರ ಮೂಲಕ ಇತರೆ ಪ್ರಾಣಿ ಅಥವಾ ಮನುಷ್ಯರಿಗೆ ಹರಡುತ್ತದೆ.
• ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ಮೂಲಕ.
• ಸೋಂಕಿತ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ಈ ವೈರಾಣು ಜ್ವರ ಹರಡುತ್ತದೆ.

ನೀಫಾ ಜ್ವರ ಪತ್ತೆ ಹೇಗೆ?
• ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನೀಫಾ ವೈರಾಣುಗಳನ್ನು ಗುರುತಿಸಬಹುದು. ಆರ್‍ಟಿಪಿಸಿಆರ್ ಪರೀಕ್ಷೆಯಿಂದ ದೃಢಪಡಿಸಬಹುದು.

ನೀಫಾ ವೈರಾಣು ಜ್ವರ ತಡೆಗಟ್ಟುವುದು ಹೇಗೆ?
• ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು.
• ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ/ನೀರಾ ಸೇವಿಸಬಾರದು.
• ಹಣ್ಣು, ಒಣ ಖರ್ಜೂರ ಇವುಗಳನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು.

• ಅನಾರೋಗ್ಯದ ಹಂದಿಗಳು ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸುವುದು.
• ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿ ಅಳವಡಿಸುವುದು.
• ಕೈಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸುವುದು.
• ನೀಫಾ ವೈರಸ್ ಸೋಂಕಿತ ವ್ಯಕ್ತಿಯು ಉಪಯೋಗಿಸಿದ ಬಟ್ಟೆ ಮತ್ತು ಇತರೆ ಪದಾರ್ಥಗಳ ಸೋಂಕು ನಿವಾರಣೆ ಮಾಡುವುದು.
• ಬಾವಲಿಗಳು ಇರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು.
• ನೀಫಾ ವೈರಸ್ ಸೋಂಕಿತ ವ್ಯಕ್ತಿಯು ಕನಿಷ್ಠ 15 ದಿನಗಳು ಮನೆಯಲ್ಲಿ ಹಾಗೂ ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರುವುದು.
• ಸೋಂಕಿತ ರೋಗಿಗಳನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿ ವಿಶೇಷ ಆರೈಕೆ ಬಳಕೆ ಮುಖವಾಡ ಮತ್ತು ಕೈಗವಸುಗಳನ್ನು ಉಪಯೋಗಿಸಬೇಕು.Not anxiety; Be careful – Deputy Commissioner Jiaullah Nefa Viruvu fever: Notification for control 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.