ಉತ್ತಮ ಸಮಾಜಕ್ಕಾಗಿ

“ಎನ್.ಎಸ್.ಎಸ್. ರಾಣಿ ಚನ್ನಮ್ಮ ಪ್ರಶಸ್ತಿ” ಸಮಾಜ ಸೇವೆಯ ಭದ್ರ ಬುನಾದಿ ಎನ್.ಎಸ್.ಎಸ್.ದಿಂದ-ಪ್ರಾದೇಶಿಕ ಮುಖ್ಯಸ್ಥರು ಎ. ಎನ್. ಪೂಜಾರ

"NSS. Rani Chennamma Award "From the NSS of the Social Services Force - Regional Heads A. N. Pujara

0

“ಎನ್.ಎಸ್.ಎಸ್. ರಾಣಿ ಚನ್ನಮ್ಮ ಪ್ರಶಸ್ತಿ”
ಬೆಳಗಾವಿ : (news belagavi)ದೇಶದ ಭದ್ರ ಬುನಾದಿಗೆ ಎನ್.ಎಸ್.ಎಸ್. ಸ್ವಯಂಸೇವಕರು ಸೇವಾ ಮನೋಭಾವದ ನೀರೆರೆದು ಗಟ್ಟಿಗೊಳಿಸುವಲ್ಲಿ ಸಕ್ರೀಯ ಪಾತ್ರ ವಹಿಸುತ್ತಾರೆ. ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದಲ್ಲಿ ಸತ್ರ್ಪಜೆಗಳಾಗಿ ಬದುಕುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಾರೆ ಎಂದು ಭಾರತ ಸರ್ಕಾರ ಎನ್.ಎಸ್.ಎಸ್.ನ ಪ್ರಾದೇಶಿಕ ಮುಖ್ಯಸ್ಥರಾದ ಎ.ಎನ್. ಪೂಜಾರ ಅವರು ನುಡಿದರು. ಅವರು ಶುಕ್ರವಾರ ದಿನಾಂಕ: 13-04-2018 ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಎನ್.ಎಸ್.ಎಸ್. ನ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
News Belgaum-“ಎನ್.ಎಸ್.ಎಸ್. ರಾಣಿ ಚನ್ನಮ್ಮ ಪ್ರಶಸ್ತಿ” ಸಮಾಜ ಸೇವೆಯ ಭದ್ರ ಬುನಾದಿ ಎನ್.ಎಸ್.ಎಸ್.ದಿಂದ-ಪ್ರಾದೇಶಿಕ ಮುಖ್ಯಸ್ಥರು ಎ. ಎನ್. ಪೂಜಾರ 1 News Belgaum-“ಎನ್.ಎಸ್.ಎಸ್. ರಾಣಿ ಚನ್ನಮ್ಮ ಪ್ರಶಸ್ತಿ” ಸಮಾಜ ಸೇವೆಯ ಭದ್ರ ಬುನಾದಿ ಎನ್.ಎಸ್.ಎಸ್.ದಿಂದ-ಪ್ರಾದೇಶಿಕ ಮುಖ್ಯಸ್ಥರು ಎ. ಎನ್. ಪೂಜಾರ 2 News Belgaum-“ಎನ್.ಎಸ್.ಎಸ್. ರಾಣಿ ಚನ್ನಮ್ಮ ಪ್ರಶಸ್ತಿ” ಸಮಾಜ ಸೇವೆಯ ಭದ್ರ ಬುನಾದಿ ಎನ್.ಎಸ್.ಎಸ್.ದಿಂದ-ಪ್ರಾದೇಶಿಕ ಮುಖ್ಯಸ್ಥರು ಎ. ಎನ್. ಪೂಜಾರ 3ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೂರು ಜಿಲ್ಲೆಗಳ ಎನ್.ಎಸ್.ಎಸ್. ಅಧಿಕಾರಿಗಳು ಮತ್ತು ಮಹಾವಿದ್ಯಾಲಯಗಳು ಕ್ರೀಯಾಶೀಲರಾಗಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪರೋಕ್ಷವಾಗಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ದೇಶದ ಶೈಕ್ಷಣಿಕ ನೀತಿಯಲ್ಲಿಯ ಮೂರು ಮುಖ್ಯವಿಷಯಗಳಲ್ಲಿ ಸಾಮಾಜಿಕ ಸೇವೆ ಮತ್ತು ಬದ್ಧತೆ ಪ್ರಮುಖವಾಗಿವೆ. ಜನರಲ್ಲಿ ಸಹಕಾರ ಸಮೂಹಿಕ ಪ್ರಜ್ಞೆ ಮತ್ತು ದೂರದೃಷ್ಟಿಕೋನ ಬೆಳೆಸುವಲ್ಲಿ ಎನ್.ಎಸ್.ಎಸ್. ಪ್ರಮುಖ ಪಾತ್ರವಹಿಸುತ್ತಿದೆ.“ಎನ್.ಎಸ್.ಎಸ್. ರಾಣಿ ಚನ್ನಮ್ಮ ಪ್ರಶಸ್ತಿ” ಸಮಾಜ ಸೇವೆಯ ಭದ್ರ ಬುನಾದಿ ಎನ್.ಎಸ್.ಎಸ್.ದಿಂದ-ಪ್ರಾದೇಶಿಕ ಮುಖ್ಯಸ್ಥರು ಎ. ಎನ್. ಪೂಜಾರ- Tarun kranti 1
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸವiನಿ ಅವರು ಎನ್.ಎಸ್.ಎಸ್. ಅಧಿಕಾರಿಗಳನ್ನು ಸ್ವಯಂ ಸೇವಕರನ್ನು ಹಾಗೂ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಸ್ವಯಂ ಸೇವಕರನ್ನು ಸನ್ಮಾನಿಸುವಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೆಮ್ಮೆಪಡುತ್ತದೆ. ಪ್ರಶಸ್ತಿ ಸ್ವೀಕರಿಸಿದವರು ತಮ್ಮ ಪಾತ್ರವನ್ನು ಅರಿತುಕೊಂಡು ಹೆಚ್ಚಿನ ಸೇವೆಯಲ್ಲಿ ತೊಡಗಿಸಿಕೊಂಡು ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಬೇಕೆಂದು ಆಶಿಸಿದರು. ವಿಶ್ವವಿದ್ಯಾಲಯಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸೇವಾ ಸಾಮಥ್ರ್ಯದ ಮೇಲೆ ಹುಡುಕಿಕೊಂಡು ಬರುವಂತೆ ಆಗಬೇಕು. ಮುಂಬರುವ ದಿನಗಳಲ್ಲಿ ಪ್ರತಿ ಮಹಾವಿದ್ಯಾಲಯಗಳಲ್ಲಿ ಎನ್.ಎಸ್.ಎಸ್. ಘಟಕ ಅಸ್ತಿತ್ವದಲ್ಲಿ ಬರಲು ಪ್ರಯತ್ನಿಸಲಾಗುವುದು ಎಂದರು.

ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ. ಎಸ್. ಓ. ಹಲಸಗಿ ಮಾತನಾಡುತ್ತಾ ರಾಣಿ ಚನ್ನಮ್ಮ ಪ್ರಶಸ್ತಿಯ ಪರಂಪರೆ ಮತ್ತು ಪದ್ಧತಿಯ ಸಮಗ್ರ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿದ್ದು ಆಲಗೂರ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿಗಳಾದ ಪರಶುರಾಮ ದುಡಗುಂಟಿ ಹಾಗೂ ಡಾ. ಕೆ. ಬಿ. ಚಂದ್ರಿಕಾ, ಡಾ. ವ್ಹಿ ಎಸ್. ಶೀಗೆಹಳ್ಳಿ, ಡಾ. ನಂದಿನಿ ದೇವರಮನಿ ಉಪಸ್ಥಿತರಿದ್ದರು.
ಡಾ. ಗಜಾನನ ನಾಯ್ಕ ಸ್ವಾಗತಿಸಿದರು. ಡಾ. ಶೋಭಾ ನಾಯ್ಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಸ್ವಯಂ ಸೇವಕರು ನಾಡಗೀತೆ ಹಾಡಿದರು. ಬಸವರಾಜ ಹಡಪದ ನಿರೂಪಿಸಿದರು. ಸಮಾರಂಭದಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಕಾಲೇಜುಗಳ ಪ್ರಾಚಾರ್ಯರು ಹಾಗೂ ಎನ್.ಎಸ್.ಎಸ್. ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸ್ವಯಂಸೇವಕರು ಹಾಜರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.