ಉತ್ತಮ ಸಮಾಜಕ್ಕಾಗಿ

ಅಧಿಕಾರಿಗಳು ಬಸ್ ನಲ್ಲಿ ಪ್ರಯಾಣಿಸಿ ಸಾರ್ವಜನಿಕ ಸಾರಿಗೆ ಬಳಕೆಯ ಮಹತ್ವ ಸಾರಿದರು.

Officials traveled on the bus and emphasized the use of public transport.

0

ಬೆಳಗಾವಿ:(tarun kranti) ಇಂಧನ ಉಳಿತಾಯ, ವಾಹನ ದಟ್ಟನೆ ನಿಯಂತ್ರಣ ಹಾಗೂ ಪ್ರಯಾಣಿಕರ ಹಿತದೃಷ್ಟಿಯ ‘ಬಸ್ ಡೇ’ ಗೆ ನಗರ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಇಂದು ಚಾಲನೆ ನೀಡಿ ಅಧಿಕಾರಿಗಳೊಂದಿಗೆ ಪ್ರಯಾಣಿಸಿದರು. ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳು, ಕೆಎಸ್ ಆರ್ ಟಿಸಿ ಡಿಸಿ ಗಣೇಶ ರಾಠೋಡ್ ಅವರೊಂದಿಗೆ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಟಿಕೇಟ್ ಪಡೆದು ಪ್ರಯಾಣಿಸಿದರು. ಡಿಸಿಪಿ ಸೀಮಾ ಲಾಟಕರ, ಎಸಿಪಿ ಶಂಕರ ಮಾರಿಹಾಳ, ಟ್ರಾಫಿಕ್ ಎಸಿಪಿ ಮತ್ತು ಆಯುಕ್ತರ ಕಚೇರಿ ಪೊಲೀಸ್ ನಿರೀಕ್ಷಕ ತಹಶೀಲ್ದಾರ ಹಾಗೂ ಅಧಿಕಾರಿಗಳು ಬಸ್ ನಲ್ಲಿ ಪ್ರಯಾಣಿಸಿ ಸಾರ್ವಜನಿಕ ಸಾರಿಗೆ ಬಳಕೆಯ ಮಹತ್ವ ಸಾರಿದರು.

ಡಿಎಂ ವಿಜಯಕುಮಾರ, ಡಿಟಿಓ ಜಾಧವ, ಡಿಪೋ ಮ್ಯಾನೇಜರ್ ಗಳಾದ ನಿತಿನ್ ಗಡದೆ, ತುಕಾರಾಮ ಶರ್ಮಾ, ಮಡಿವಾಳ ಸೇರಿ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಿಬಿಟಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟು ‘ಬಸ್ ಡೇ’ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ನೀಡಲಾಯಿತು.

(belgaum)Officials traveled on the bus and emphasized the use of public transport.

Leave A Reply

 Click this button or press Ctrl+G to toggle between Kannada and English

Your email address will not be published.